ಉಡುಪಿ

ಉಡುಪಿ ಜಿಲ್ಲಾ ಬಿಜೆಪಿ ಕಮಿಟಿಯಲ್ಲಿ ಬಿಲ್ಲವ-ವಿಶ್ವಕರ್ಮ-ದಲಿತ ಸಮುದಾಯಕ್ಕೆ ಮತ್ತೆ ಅನ್ಯಾಯ…???vishwanews24

ಉಡುಪಿ ಜಿಲ್ಲಾ ಬಿಜೆಪಿ ಕಮಿಟಿಯಲ್ಲಿ ಬಿಲ್ಲವ-ವಿಶ್ವಕರ್ಮ-ದಲಿತ ಸಮುದಾಯಕ್ಕೆ ಮತ್ತೆ ಅನ್ಯಾಯ…???

ಬೆಂಗಳೂರು: ಉಡುಪಿ ಜಿಲ್ಲಾ ಬಿಜೆಪಿಯ ಭಾಗಶಃ ಕಮಿಟಿ ರಚನೆಯಾಗುತ್ತಿರುವಂತೆ ಅಸಮಧಾನ ಹೊರಬಿದ್ದಿದೆ.
ಜಿಲ್ಲೆಯಲ್ಲಿ ಅತಿಹೆಚ್ಚು ಬಿಲ್ಲವ ಸಮುದಾಯದ ಮತದಾರರಿದ್ದರೂ ಕೂಡ ಕಮಿಟಿ ರಚನೆಯ ಸಮಯದಲ್ಲಿ ಬಿಲ್ಲವರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ.

ಶಾಸಕ ಸ್ಥಾನದ ಟಿಕೆಟ್ ಹಂಚಿಕೆ ಸಮಯದಲ್ಲೂ ಕೂಡ ಇದೇ ರೀತಿಯ ತಾರತಮ್ಯ ಉಡುಪಿ ಜಿಲ್ಲಾ ನಡೆಸಿತ್ತು ಅನ್ನುವ ಆರೋಪ ತಣ್ಣಗಾಗುವ ಮುನ್ನ ಮತ್ತೊಂದು ಬರ ಸಿಡಿಲು ಬಿಲ್ಲವ – ವಿಶ್ವಕರ್ಮ-ದಲಿತ ಸಮುದಾಯದ ಮೇಲೆ ಬಿದ್ದಂತಾಗಿದೆ.

ಭಾಜಪದಲ್ಲಿ ದುಡಿಯಲು ಎಲ್ಲಾ ಜಾತಿಯವರು ಬೇಕು ಸ್ಥಾನ ಹಂಚಿಕೆ ಸಮಯದಲ್ಲಿ ಇದ್ಯಾವುದೂ ಕೂಡ ಲೆಕ್ಕಕ್ಕೆ ಬರುವುದಿಲ್ಲ ಎಂಬ ಗುಸು ಗುಸು ಮಾತು ಬೂದಿಯೊಳಗಿನ ಕೆಂಡದಂತೆ ಸುಡಲು ಆರಂಭಿಸಿದೆ.

ಪ್ರಧಾನ ಕಾರ್ಯದರ್ಶಿ ಸ್ಥಾನವನ್ನಾದರೂ ಬಿಲ್ಲವ – ವಿಶ್ವಕರ್ಮ- ದಲಿತ ಕಮ್ಯೂನಿಟಿಗೆ ನೀಡಬಹುದೆಂಬ ನಿರೀಕ್ಷೆಯಲ್ಲಿದ್ದವರಿಗೆ ಉಡುಪಿ ಬಿಜೆಪಿ ಬೆಟ್ಟದ ಹೂವನ್ನಾಗಿಸಿದೆ ಎಂಬ ಆರೋಪ‌ ಕೇಳಿ ಬರುತ್ತಿದೆ.

ಬಿಲ್ಲವ ಸಮುದಾಯದಲ್ಲಿ ಕಾರ್ಯಕರ್ತರಿಗೆ ಅಥವಾ ನಾಯಕರಿಗೇನೂ ಕೊರತೆಯಿಲ್ಲ ಆದರೆ ಈ ರೀತಿಯ ಅನ್ಯಾಯ ಆಗಬಾರದಿತ್ತು ಅನ್ನುವ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ತಿರುಗಲಾರಂಭಿಸಿದೆ.

ಜಿಲ್ಲಾಧ್ಯಕ್ಷ ಸ್ಥಾನಕ್ಕೂ ಬಿಲ್ಲವ ಸಮುದಾಯದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು ಇಂಗಿತ ವ್ಯಕ್ತಪಡಿಸಿದ್ದರೂ ಕೂಡ ಗಾಳಿಗೆ ತೂರಿ ಪ್ರಧಾನಕಾರ್ಯದರ್ಶಿ ನೀಡುವ ಭರವಸೆ ಉಳಿದಿದ್ದು ಅದು ಕೂಡ ಇಂದು ನೀರುಪಾಲಾಗಿದೆ ಅನ್ನುವ ಚರ್ಚೆ‌ ನಡೆಯುತ್ತಿದೆ.

ಕಳೆದ ಕಮಿಟಿಯಲ್ಲೂ ಇದೇ ರೀತಿಯ ಅನ್ಯಾಯ ಉಡುಪಿ ಬಿಜೆಪಿ ಬಿಲ್ಲವರಿಗೆ ಮಾಡಿತ್ತು ಈ ಬಾರಿ ಕೂಡ ಅದೇ ತಾಳ ರಾಗವನ್ನು ಹಾಕುವ ಮುಖೇನ ಭಿನ್ನಮತಕ್ಕೆ ಪುಷ್ಟಿ ನೀಡಿದೆ ಎನ್ನುತ್ತಾರೆ.

ಈ ಬಗ್ಗೆ ಜಾತಿಯ ಬಗ್ಗೆ ಬಿಗಿ ಭಾಷಣ ಮಾಡುವ ಕೋಟಾ ಶ್ರೀನಿವಾಸ ಪೂಜಾರಿ- ಸುನಿಲ್ ಕುಮಾರ್ ವಿರುದ್ಧ ಕೂಡ ಬಿಲ್ಲವರ ಅಸಮಾಧಾನ ಹೊಗೆಯಾಡುತ್ತಿದೆ.

ಚುನಾವಣೆ ಸಮಯದಲ್ಲಿ ಮತದಾನ ಮಾಡಲು ಮಾತ್ರ ಬಿಲ್ಲವ-ವಿಶ್ವಕರ್ಮ- ದಲಿತ ಸೇರಿದಂತೆ ಇನ್ನಿತರ ಸಮುದಾಯಗಳು ಬೇಕು ಸ್ಥಾನ ಹಂಚಿಕೆ ಸಮಯದಲ್ಲಿ ಇದ್ಯಾವೂದು ಕೂಡ ಗಣನೆಗಿಲ್ಲ ಎಂಬ ಮಾತು ನಿಜವಾಗುತ್ತಿದೆ ಎನ್ನುತ್ತಿದ್ದಾರೆ.

ಇತ್ತ ವಿಶ್ವಕರ್ಮ- ದೇವಾಡಿಗ-ಕುಲಾಲ ಸೇರಿದಂತೆ ಬಲಿಷ್ಟ ಸಮುದಾಯವನ್ನು ಕಳೆದ ಕೆಲವು ವರ್ಷಗಳಿಂದ ಜಿಲ್ಲಾ ಬಿಜೆಪಿ ಸ್ಥಾನ ಹಂಚಿಕೆ ಸಮಯದಲ್ಲಿ ಹೊರಗಿಡುವ ಮುಖೇನ ಗೊಂದಲ ಸೃಷ್ಟಿ ಮಾಡುತ್ತಿದೆ ಅನ್ನುವ ಅಭಿಪ್ರಾಯವೂ ಕೇಳಿ ಬರುತ್ತಿದೆ.

ಇನ್ನೂ ದಲಿತ ಸಮುದಾಯವನ್ನು ಕೂಡ ಜಿಲ್ಲಾ ಭಾಗಶಃ ಕಮಿಟಿಯಲ್ಲಿ ಸೇರ್ಪೆಗೊಳಿಸದಿರುವುದು ಕೂಡ ದಲಿತ ಸಮುದಾಯದ ಬಿಜೆಪಿ ನಾಯಕರಿಗೆ ನೋವುಂಟು ಮಾಡಿದೆ ಅನ್ನುವ ವಿಚಾರ ಹೊಗೆಯಾಡುತ್ತಿದೆ.

ಒಟ್ಟಾರೆಯಾಗಿ ಹಿಂದುತ್ವದ ವಿಚಾರದಡಿಯಲ್ಲಿ ಜಾತಿ ಇಲ್ಲ ಅನ್ನುವ ಬಿಜೆಪಿ ನಾಯಕರು ಚುನಾವಣೆ ಸಮಯದಲ್ಲಿ ಜಾತಿ ಲೆಕ್ಕಾಚಾರ ಹಾಕುವ ಮುಖೇನ ರಾಗ-ತಾಳಕ್ಕೆ ಸ್ವರ ಹೊಂದಾಣಿಕೆಯಾಗುತ್ತಿಲ್ಲ ಎಂಬ ಗುಸು ಗುಸು ಬರಲಾರಂಭಿಸಿದೆ.

ಇನ್ನಾದರೂ ಉಡುಪಿ ಬಿಜೆಪಿ ಇಂತಹ ಸಮುದಾಯದ ಬಗ್ಗೆ ಗಮನಿಸಿಕೊಂಡು ಕಾರ್ಯಪ್ರವೃತರಾಗಬೇಕೆಂಬ ಸುದ್ದಿ ಸದ್ದು ಮಾಡುತ್ತಿದೆ.
ಬ್ಯುರೋ ರಿಪೋರ್ಟ್
ವಿಶ್ವನ್ಯೂಸ್24

Vishwa News 24

Recent Posts

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ – vishwanews24

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…

13 hours ago

ಕಾರವಾರ – ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ – vishwanews24

ಕಾರವಾರ - ಮಡಗಾಂವ್  ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…

13 hours ago

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ: ರಾಜಣ್ಣ ಖಡಕ್ ಹೇಳಿಕೆ – vishwanews24

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…

13 hours ago

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ – vishwanews24

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ…

16 hours ago

ಉಡುಪಿ : ಯುವಕ ನಾಪತ್ತೆ – vishwanews24

ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…

16 hours ago

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ – vishwanews24

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…

16 hours ago