Featured

ಕನ್ಯಾಕುಮಾರಿಯಿಂದ ಲಡಾಕ್ ಗೆ ಸೈಕಲ್ ಪಯಣದಲ್ಲಿ ಸಂಜಯ್ ಶ್ರೀಕುಮಾರ್- ರೈತರಿಗೆ ಬೆಂಬಲ ಹಾಗೂ ಆರೋಗ್ಯಕ್ಕಾಗಿ ಪೆಡಲಿಂಗ್ ಧೇಯೊದ್ದೇಶ.- vishwanews24

ಕನ್ಯಾಕುಮಾರಿಯಿಂದ ಲಡಾಕ್ ಗೆ ಸೈಕಲ್ ಪಯಣದಲ್ಲಿ ಸಂಜಯ್ ಶ್ರೀಕುಮಾರ್- ರೈತರಿಗೆ ಬೆಂಬಲ ಹಾಗೂ ಆರೋಗ್ಯಕ್ಕಾಗಿ ಪೆಡಲಿಂಗ್ ಧೇಯೊದ್ದೇಶ .

ಕಾಪು: ಕೇರಳ ಮೂಲದ ಬಡ ಕುಟುಂಬ ಹಿನ್ನಲೆಯುಳ್ಳ ದ್ವಿತೀಯ ಬಿ.ಇ ವಿದ್ಯಾರ್ಥಿ ಸಂಜಯ್ ಶ್ರೀ ಕುಮಾರ್ ಕನ್ಯಾಕುಮಾರಿಯಿಂದ ಲಡಾಕ್ ವರೆಗೆ ರೈತರಿಗೆ ಬೆಂಬಲ ಹಾಗೂ ಆರೋಗ್ಯಕ್ಕಾಗಿ ಪೆಡಲಿಂಗ್ ಧೇಯೊದ್ದೇಶದಿಂದ ಆರಂಭಿಸಿದ ಸೈಕಲ್ ಯಾತ್ರೆ ಶನಿವಾರ ಕಾಪು ತಲುಪಿದೆ.

ಆತನ ತಂದೆ ಶ್ರೀಕುಮಾರ್ ಅವರ ಸಾಮಾನ್ಯ ಪೆಡಲಿಂಗ್ ಸೈಕಲ್ ಮೂಲಕ ದೇಶದ ಕನ್ಯಾಕುಮಾರಿ ಮೂಲೆಯಿಂದ ಲಡಾಕ್ ಭಾಗಕ್ಕೆ ಸೈಕಲ್ ಯಾತ್ರೆ ಮಾಡುತ್ತಿರುವ ಸಂಜಯ್ ಅವರು ಈಗಾಗಲೇ 850 ಕಿಲೋಮೀಟರ್ ಕ್ರಮಿಸಿ ಆದಿತ್ಯವಾರದ ಸಂಜೆಯ ಸುಮಾರಿನಲ್ಲಿ ಮೂಳೂರು ಭಾಗದಲ್ಲಿ ಸ್ಥಳೀಯರು ಮಾಹಿತಿ ತಿಳಿದು ಸಂಜಯ್ ಅವರನ್ನು ಸ್ವಾಗತಿಸಿದರು.

ಡಿಸೆಂಬರ್ ನಲ್ಲಿ ಆರಂಭವಾದ ಈ ಯಾತ್ರೆ ಫೆಬ್ರವರಿಯ  ಸುಮಾರಿಗೆ ಲಡಾಕ್ ಮುಟ್ಟುವ ಗುರಿಯನ್ನು ಇಟ್ಟುಕೊಂಡಿದ್ದು ಸುಮಾರು 3805 ಕಿಲೋಮೀಟರ್ ಉದ್ದದ ಈ ಪಯಣ ಇರಲಿದೆ.

ಮಹಾಲಕ್ಷ್ಮಿ ಕೋ-ಓಪರೇಟಿವ್ ಬ್ಯಾಂಕ್ ನ ಉಚ್ಚಿಲ ಶಾಖೆ ಉದ್ಘಾಟನೆ.-vishwanews24

ಸೈಕಲ್ ಪಯಣದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ” ಬಡತನ ರೇಖೆಗಿಂತ ಕೆಲಗೆ ಇರುವ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ಸಾಧನೆ ಮಾಡುವ ಛಲ ಹಾಗೂ ಈ ದೇಶದ ಬೆನ್ನೆಲುಬಾಗಿರುವ ರೈತರಿಗೆ ಬೆಂಬಲಿಸುವ ಸಲುವಾಗಿ ಹಾಗೂ ಆರೋಗ್ಯಕ್ಕಾಗಿ ಪೆಡಲಿಂಗ್ ಎಂಬ ಉದ್ದೇಶದಿಂದ ಕನ್ಯಾಕುಮಾರಿಯಿಂದ ಲಡಾಕ್ ಗೆ ಸೈಕಲ್ ಪಯಣ ಮಾಡುತ್ತಿದ್ದು ಇದಕ್ಕೆ ಮನೆಯವರ ಸಂಪೂರ್ಣ ಸಹಕಾರ ಬೆಂಬಲ ಇದ್ದು ಫೆಬ್ರವರಿ ಸುಮಾರಿಗೆ ಲಡಾಕ್ ಮುಟ್ಟುವ ಗುರಿ ಇಟ್ಟುಕೊಂಡಿದ್ದೇನೆ ಎಂದರು”
ಸಂಜಯ್ ಅವರ ಸೈಕಲ್ ಪಯಣ ಸ್ವಾಗತಿಸುವಲ್ಲಿ ಆಸ್ಟೋನ್ ಬಂಗೇರ,ಇಬ್ರಾಹಿಂ,ಅಜೀಜ್ ಮೊದಲಾದವರು ಉಪಸ್ಥಿತರಿದ್ದರು.

ವರದಿ: ಪುರುಷೋತ್ತಮ ಸಾಲಿಯಾನ್ ಮೂಳೂರು

Vishwa News 24

Recent Posts

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ – vishwanews24

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…

12 hours ago

ಕಾರವಾರ – ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ – vishwanews24

ಕಾರವಾರ - ಮಡಗಾಂವ್  ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…

12 hours ago

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ: ರಾಜಣ್ಣ ಖಡಕ್ ಹೇಳಿಕೆ – vishwanews24

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…

13 hours ago

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ – vishwanews24

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ…

15 hours ago

ಉಡುಪಿ : ಯುವಕ ನಾಪತ್ತೆ – vishwanews24

ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…

15 hours ago

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ – vishwanews24

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…

15 hours ago