Featured

ಅಂಚೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 500 ರೂ. ಇರುವುದು ಕಡ್ಡಾಯ -Vishwanews24

ಅಂಚೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 500 ರೂ. ಇರುವುದು ಕಡ್ಡಾಯ -Vishwanews24

ಹೊಸದಿಲ್ಲಿ: ಪೋಸ್ಟ್ ಆಫೀಸ್ ಉಳಿತಾಯ ಖಾತೆಗಳಲ್ಲಿಯೂ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ ನಿಯಮ ಜಾರಿಗೆ ಬರಲಿದೆ. ಹೀಗೆಂದು ಸ್ವತಃ ಭಾರತೀಯ ಅಂಚೆ ಇಲಾಖೆಯೇ ಟ್ವೀಟ್ ಮಾಡಿದೆ.

ಅಂಚೆ ಕಚೇರಿ ಉಳಿತಾಯ ಖಾತೆಗಳಲ್ಲಿ 500 ರೂ. ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಿದೆ ಈ ಅಧಿಕೃತ ನಿಯಮ ಡಿ.11 ರಿಂದ ಜಾರಿಯಾಗಲಿದ್ದು ಅದರೊಳಗಾಗಿ 500 ರೂ ಮೆಂಟೇನ್ ಮಾಡಿ.

ಇಲ್ಲದಿದ್ದರೆ, ಖಾತೆಯಿಂದ ನಿರ್ವಹಣ ವೆಚ್ಚ ಕಡಿತ ಗೊಳ್ಳುತ್ತದೆ ಎಂದು ಟ್ವೀಟ್ ನಲ್ಲಿ ಹೇಳಲಾಗಿದೆ.ವಿತ್ತೀಯ ವರ್ಷದ ಅಂತ್ಯದಲ್ಲಿ ಖಾತೆಯಲ್ಲಿ ಕನಿಷ್ಠ ಮೊತ್ತ 500 ರೂ.ಗಳು ಇಲ್ಲವೆಂದಾದಲ್ಲಿ, ಖಾತೆ ನಿರ್ವಹಣ ವೆಚ್ಚದ ರೂಪದಲ್ಲಿ 100 ರೂ.ಗಳನ್ನು ಕಡಿತ ಮಾಡಲಾಗುತ್ತದೆ.

ಒಂದು ವೇಳೆ, ಉಳಿತಾಯ ಖಾತೆಯಲ್ಲಿ ಶೂನ್ಯ ಮೊತ್ತವಿದ್ದರೆ, ಆಗ ತನ್ನಿಂತಾನೇ ಆ ಖಾತೆ ರದ್ದಾಗಲಿದೆ. ಇದಲ್ಲದೇ, ತಿಂಗಳ 10ನೇ ದಿನಾಂಕ ದಿಂದ ಕೊನೆಯ ದಿನಾಂಕದವರೆಗಿನ ಅವಧಿಯಲ್ಲಿ ಖಾತೆಯಲ್ಲಿ 500 ರೂ.ಗಳಿಗಿಂತ ಕಡಿಮೆ ಮೊತ್ತವಿದ್ದರೆ, ಆ ತಿಂಗಳ ಬಡ್ಡಿಯೂ ಸಿಗುವುದಿಲ್ಲ ಎಂದೂ ಅಂಚೆ ಇಲಾಖೆ ಸ್ಪಷ್ಟಪಡಿಸಿದೆ.

ಪಿಂಚಣಿದಾರರಿಗೆ ಶೂನ್ಯ ಬಾಕಿಯಿಲ್ಲ!
ಈವರೆಗೆ ಪಿಂಚಣಿದಾರರಿಗೆ ಶೂನ್ಯ ಬಾಕಿಯ ಖಾತೆಗಳನ್ನು ತೆರೆಯಲಾಗುತ್ತಿತ್ತು. ಈ ಮೊದಲು ಅಂಚೆ ಇಲಾಖೆಯಲ್ಲಿ ಎಸ್‌ಬಿ ಖಾತೆದಾರರಿಗೆ ಕನಿಷ್ಠ 50 ರೂ. ಮಿನಿಮಮ್‌ ಬ್ಯಾಲೆನ್ಸ್‌ ಕಡ್ಡಾಯವಾಗಿತ್ತು. ಈಗ 500 ರೂ. ಕಡ್ಡಾಯವಾಗಿ ಹೊಂದಿರಬೇಕು. ಅಂಚೆ ಕಚೇರಿಯ ಎಸ್‌.ಬಿ. ಖಾತೆಗಳಲ್ಲಿ ಕನಿಷ್ಠ ಶುಲ್ಕ 500 ರೂಪಾಯಿ ಬ್ಯಾಲೆನ್ಸ್‌ ಉಳಿಸುವಂತೆ ಗ್ರಾಹಕರಿಗೆ ಸೂಚನೆ ನೀಡಲಾಗಿದೆ. ಇಲ್ಲದಿದ್ದರೆ ಖಾತೆ ನಿರ್ವಹಣೆ ವೆಚ್ಚವೆಂದು 100 ರೂ. ಶುಲ್ಕ ಕಡಿತ ಮಾಡಲಾಗುವುದು.

ಖಾತೆಯಲ್ಲಿ ಹಣ ಇಲ್ಲದಿದ್ದರೆ ಅಂತಹ ಖಾತೆ ತನ್ನಿಂತಾನೇ ಅಂತ್ಯವಾಗುತ್ತದೆ. ಅಂಚೆ ಕಚೇರಿ ಉಳಿತಾಯ ಖಾತೆಗೆ ಶೇ. 4ರಷ್ಟು ಬಡ್ಡಿ ನೀಡುತ್ತಿದ್ದು, ವಿನಿಮಯ ಬ್ಯಾಲೆನ್ಸ್‌ ಕಾಯ್ದುಕೊಳ್ಳದವರು ನಿರ್ವಹಣೆ ಶುಲ್ಕ ಭರಿಸಬೇಕು ಎಂದು ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನ ಜಿಪಿಒ ಚೀಫ್‌ ಪೋಸ್ಟ್‌ ಮಾಸ್ಟರ್‌ ಕೆ. ರಾಧಾಕೃಷ್ಣ, ”ಬ್ಯಾಂಕ್‌ನಲ್ಲಾದರೆ ಒಂದು ಸಾವಿರ ರೂ. ಇದೆ. ಆದರೆ ಅಂಚೆ ಇಲಾಖೆಯಲ್ಲಿ 500 ರೂ. ಮಾತ್ರ ಇದೆ. ಖಾತೆ ಜೀವಿತಾವಧಿಯಲ್ಲಿ ಒಂದು ಬಾರಿ ಪಾವತಿಸಿದರಾಯಿತು,” ಎಂದಿದ್ದಾರೆ.

Vishwa News 24

Recent Posts

ಎಂಆರ್‌ಪಿಎಲ್‌ ನಲ್ಲಿ ಭಾರೀ ಸ್ಫೋಟ : ಓರ್ವನ ಮೃತದೇಹ ಪತ್ತೆ -vishwanews24

ಎಂಆರ್‌ಪಿಎಲ್‌ ನಲ್ಲಿ ಭಾರೀ ಸ್ಫೋಟ : ಸುಟ್ಟು ಕರಕಲಾದ ಸ್ಥಿತಿಯಲ್ಲಿ ಓರ್ವನ ಮೃತದೇಹ ಪತ್ತೆ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ಬುಧವಾರ ಮಧ್ಯಾಹ್ನದ…

13 minutes ago

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ: ಪೊಲೀಸ್ ಕಮಿಷನರ್ -vishwanews24

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ ಘಟನಾ ಸ್ಥಳದಲ್ಲಿ ಮಹಿಳಾ ಸಿಬ್ಬಂದಿ ಹಾಜರಿರಲಿಲ್ಲ ಹಾಗೂ ಗಾಯಗೊಂಡಿಲ್ಲ :…

6 hours ago

ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ  -vishwanews24

ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ  ಬಂಟ್ವಾಳ: ಕಲ್ಲಡ್ಕ ಫ್ಲೈಓವರ್ ಮೇಲೆ ದನಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು…

7 hours ago

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ; -vishwanews24

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ.. ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಕಂಪಿಸಿದ ಕಟ್ಟಡಗಳು ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ…

7 hours ago

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ -vishwanews24

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಕುಂದಾಪುರ : ಪತ್ನಿಗೆ…

9 hours ago

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು -vishwanews24

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು ಕಾಪು : ಕಾಪು ಫ್ಲೈಓವರ್ ಬಳಿ ಶನಿವಾರ…

9 hours ago