Featured

ಅಂಚೆ ನೌಕರರ ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ವಿನಯ್ ಕುಮಾರ್ ಸೊರಕೆ ಬೆಂಬಲ – Vishwanews24

ಅಂಚೆ ನೌಕರರ ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ವಿನಯ್ ಕುಮಾರ್ ಸೊರಕೆ ಬೆಂಬಲ

ಅ0ಚೆ ನೌಕರರ ಕೇಂದ್ರ ಸಂಘಟನೆಗಳ, ಜಂಟಿಕ್ರಿಯೆ ಸಮಿತಿ ನವ ದೆಹಲಿ ಇದರ ರಾಷ್ಟç ವ್ಯಾಪಿ ಮುಷ್ಕರದ ಕರೆಯನ್ವಯ,ಉಡುಪಿ ಅಂಚೆ ವಿಭಾಗದಲ್ಲಿಯೂ ಮಾರ್ಚ್೨೮ ಮತ್ತು೨೯ರಂದು ಉಡುಪಿಯ ೨೬೦ ಅಂಚೆಕಛೇರಿಗಳು ಬಾಗಿಲು ಮುಚ್ಚಿ ಪ್ರತಿಭಟನೆ ನಡೆಸಿದವು.

ಉಡುಪಿಯ ೮೫೦ಕ್ಕೂ ಮಿಕ್ಕಿ ಅಂಚೆ ಹಾಗೂ ಗ್ರಾಮೀಣ ಅಂಚೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡು ಉಡುಪಿಯ ಪ್ರಧಾನ ಅಂಚೆ ಕಛೇರಿಯ ಸಮೀಪ ಮುಷ್ಕರದ ಸಭೆಯನ್ನು ನಡೆಸಿದರು. ಈ ಮುಷ್ಕರದ ಸಭೆಗೆ ಮಾಜಿ ರಾಜ್ಯ ಸಚಿವ,ಮಾಜಿ ಸಂಸದ,ಕಾ0ಗ್ರೆಸ್‌ನ ಹಿರಿಯ ನೇತಾರ ಶ್ರೀ ವಿನಯ್ ಕುಮಾರ್ ಸೊರಕೆ ,ಮಾಚ್ ೨೯ರಂದು ಭೇಟಿ ನೀಡಿ,ನೌಕರರ ಬೇಡಿಕೆಗಳನ್ನು ಆಲಿಸಿದರು.

ನೌಕರರಿಂದ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಅವರು ಅತ್ಯಂತ ಪ್ರಾಮಾಣಿಕ ಹಾಗೂ ನಿಷ್ಠಾವಂತ ನೌಕರರನ್ನು ಹೊಂದಿರುವ ಭಾರತೀಯ ಅಂಚೆ ಇಲಾಖೆ, ಜಗತ್ತಿನಲ್ಲಿಯೇ ಪ್ರಮುಖ ಸ್ಥಾನಮಾನವನ್ನು ಹೊಂದಿದೆ. ಇಂತಹ ಇಲಾಖೆಯನ್ನು ಸೇರಿ ೩೪ ವಿವಿಧ ಸರಕಾರಿ ಇಲಾಖೆ ಗಳನ್ನು ಇಂದು ಕೇಂದ್ರ ಸರಕಾರ ಖಾಸಗೀಕರಣಗೊಳಿಸುವತ್ತ ಮುಖ ಮಾಡಿದೆ. ಇದರ ವಿರುದ್ಧ ರಾಷ್ಟಾçದ್ಯಂತ ನಡೆಯುತ್ತಿರುವ ಅಂಚೆ ನೌಕರರ ಹೋರಾಟಕ್ಕೆ ನನ್ನ ಬೆಂಬಲ ಇದೆ.

ಖಾಸಗೀಕರಣದ ಬದಲು ಇಲಾಖೆಯನ್ನು ಲಾಭದಾಯಕ ಇಲಾಖೆಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸುವಂತೆ ಆ ಮೂಲಕ ಈ ಸರಕಾರಿ ಇಲಾಖೆಯನ್ನು ಉಳಿಸಿಕೊಳ್ಳುವಂತೆ ಲೋಕ ಸಭೆ ಹಾಗೂ ರಾಜ್ಯಸಭೆಗಳೆರಡರಲ್ಲೂ ಧ್ವನಿ ಎತ್ತುವಂತೆ ರಾಷ್ಟಿçÃಯ ಕಾಂಗ್ರೇಸ್ ನಾಯಕರುಗಳಾದ ಶ್ರೀ ಮಲ್ಲಕಾರ್ಜುನ ಖರ್ಗೆ ಹಾಗೂ ವಿರೊಧ ಪಕ್ಷದ ಅಧ್ಯಕ್ಷರಾದ ಶ್ರೀ ಚೌಧರಿಯವರಲ್ಲಿಯೂ ಮಾತನಾಡುವ ಭರವಸೆಯನ್ನು ನೀಡಿದರು. ಕೇಂದ್ರ ಸರಕಾರ ತನ್ನ ಕಣ್ಣು ಕಿವಿ ತೆರೆದು ಅಂಚೆ ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಕೂಡ ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಂಟಿ ಕ್ರಿಯೆ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಜತ್ತನ್,ಸಂಚಾಲಕರಾದ ಸುಹಾಸ,ಜಂಟಿ ಸಂಚಾಲಕರಾದ ಶ್ರೀ ಸುರೇಶ್ ಕೆ, ಎಚ್.ಕೆ ಭಾಸ್ಕರ ಶೆಟ್ಟಿ, ಬಿ.ವಿಜಯ ನಾಯಿರಿ, ಪಧಾಧಿಕಾರಿಗಳಾದ ಸುಭಾಶ್ ತಿಂಗಳಾಯ, ಕಳತ್ತೂರು ದಿವಾಕರ ಬಿ.ಶೆಟ್ಟಿ, ಉಮೇಶ್ ನಾಯಕ್, ಮಾಧವ ಅಡಿಗ, ಸಿ.ಕೆ.ನಾರಾಯಣ್, ಬಸವ ಬಿಲ್ಲವ, ಸುರೇಶ್ ಶೇರಿಗಾರ್, ಜನಾರ್ಧನ್, ಎನ್.ಎ ನೇಜಾರ್, ಮತ್ತಿತರು ಉಪಸ್ಥಿತರಿದ್ದರು.

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

2 days ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

2 days ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

2 days ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

2 days ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

2 days ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

2 days ago