Featured

ಅಕಾಲಿಕ ಮಳೆ ಹಾಗೂ ಚಳಿಯಿಂದ ರಕ್ಷಿಸಲು ಮೇಕೆಗಳಿಗೆ ರೈನ್‍ಕೋಟ್ ಸಿದ್ಧ ಮಾಡಿದ ರೈತ – Vishwanews24

ಅಕಾಲಿಕ ಮಳೆ ಹಾಗೂ ಚಳಿಯಿಂದ ರಕ್ಷಿಸಲು ಮೇಕೆಗಳಿಗೆ ರೈನ್‍ಕೋಟ್ ಸಿದ್ಧ ಮಾಡಿದ ರೈತ

ಚೆನ್ನೈ: ಅಕಾಲಿಕ ಮಳೆಯ ಹಿನ್ನೆಲೆಯಲ್ಲಿ ರೈತರೊಬ್ಬರು  ತಮ್ಮ ಮೇಕೆಗಳಿಗೆ ತಿರುಗಾಡಿ ಮೇಯಿಸಲು ತೊಂದರೆ ಆಗಬಾರದು ಎಂದು ತಾತ್ಕಾಲಿಕ ರೈನ್‍ಕೋಟ್‍ಗಳನ್ನು ರಚಿಸಿದ್ದಾರೆ.

ತಮಿಳುನಾಡಿನ  ತಂಜಾವೂರಿನ  ಕುಲಮಂಗಲಂ ಗ್ರಾಮದ ಗಣೇಶನ್ (70) ಎಂಬವರಿಗೆ ಪ್ರಾಣಿಗಳೆಂದರೆ ಬಹಳ ಇಷ್ಟ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಜಮೀನಿನಲ್ಲಿ ಕುರಿಗಳು, ಹಸುಗಳು, ಕೋಳೀಗಳನ್ನು ಸಹ ಸಾಕುತ್ತಿದ್ದಾರೆ. ಅಕಾಲಿಕ ಮಳೆಯಿಂದಾಗಿ ತನ್ನ ಪ್ರಾಣಿಗಳಿಗೆ ತೊಂದರೆ ಆಗುತ್ತಿದೆ. ಹಾಗೂ ಮೇಕೆಗಳು ಮೇಯುವಾಗ ವಿಪರೀತ ಚಳಿಯಿಂದ ನಡುಗುತ್ತಿರುವುದನ್ನು ಅವರು ಗಮನಿಸಿದ್ದಾರೆ.

ಇದರಿಂದಾಗಿ ಅವುಗಳ ರಕ್ಷಣೆಗೆ ಏನಾದರೂ ಮಾಡಬೇಕು ಎಂದುಕೊಂಡ ಗಣೇಶನ್ ಅವುಗಳಿಗೆ ರೈನ್‍ಕೋಟ್‍ನ್ನು ನಿರ್ಮಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಕಿ ಮೂಟೆಗಳನ್ನು ತಂದ ಚೀಲವನ್ನು ಅವರು ತಮ್ಮ ಮೇಕೆಗಳಿಗೆಂದೇ ರೈನ್ ಕೋಟ್‍ಗಳನ್ನಾಗಿ ಪರಿವರ್ತಿಸಿದರು. ಇದನ್ನೂ ಓದಿ: ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅಧಿಕಾರ ದುರ್ಬಳಕೆ : ಸಿಎಂ ರಾಜೀನಾಮೆಗೆ ಕಾಂಗ್ರೆಸ್‌ ಒತ್ತಾಯ – Vishwanews24 

ಮೊದಲಿಗೆ ಅಲ್ಲಿನ ಗ್ರಾಮಸ್ಥರು ಗಣೇಶನ್ ಅವರ ಈ ಕೆಲಸದಿಂದ ಆಶ್ಚರ್ಯಕ್ಕೊಳಗಾದರೂ, ಆನಂತರದಲ್ಲಿ ಗಣೇಶನ್ ಅವರಿಗೆ ಮೇಕೆಗಳ ಮೇಲಿರುವ ಕಾಳಜಿಯ ಕುರಿತು ಶ್ಲಾಘಿಸಿದರು.

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

1 day ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

1 day ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

1 day ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

1 day ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

1 day ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

1 day ago