Featured

ಅಕ್ರಮದಲ್ಲಿ ಭಾಗಿಯಾಗೋ ಪೊಲೀಸರನ್ನ ಕೆಲಸದಿಂದ ವಜಾ ಮಾಡುವ ಕೆಲಸ ಸರ್ಕಾರ ಮಾಡ್ತಿದೆ : ಪರಮೇಶ್ವರ್ – vishwanews24

ಅಕ್ರಮದಲ್ಲಿ ಭಾಗಿಯಾಗೋ ಪೊಲೀಸರನ್ನ ಕೆಲಸದಿಂದ ವಜಾ ಮಾಡುವ ಕೆಲಸ ಸರ್ಕಾರ ಮಾಡ್ತಿದೆ : ಪರಮೇಶ್ವರ್

ಬೆಳಗಾವಿ: ದರೋಡೆ, ಕಳ್ಳತನ ಸೇರಿ ಅಕ್ರಮಗಳಲ್ಲಿ ಭಾಗಿಯಾಗೋ ಪೊಲೀಸರನ್ನ ಕೆಲಸದಿಂದಲೇ ವಜಾ ಮಾಡುವ ಕೆಲಸ ಸರ್ಕಾರ ಮಾಡ್ತಿದೆ ಎಂದು ಗೃಹ ಸಚಿವ ಪರಮೇಶ್ವರ್  ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶರವಣ ಪ್ರಶ್ನೆ ಕೇಳಿದ್ರು. ರಾಜ್ಯದಲ್ಲಿ ದರೋಡೆ, ಮನೆಗಳ್ಳತನ, ಹಗಲು ದರೋಡೆಗಳು ಜಾಸ್ತಿ ಆಗ್ತಿದೆ. ಪೊಲೀಸ್ ಅಧಿಕಾರಗಳೇ ಕಳ್ಳತನದಲ್ಲಿ ಭಾಗಿಯಾಗ್ತಾ ಇದ್ದಾರೆ. ಬೇಲಿಯೇ ಎದ್ದು ಹೊಲ ಮೆಯ್ಯುತ್ತಿದೆ. ಜನರು ಇದನ್ನ ‌ಮಾತಾಡ್ತಾ ಇದ್ದಾರೆ. ಪೊಲೀಸರ ಮೇಲೆ ನಂಬಿಕೆ ಕಳೆದು ಹೋಗ್ತಿದೆ. ಕಳ್ಳತನ, ದರೋಡೆ ಕೇಸ್‌ನಲ್ಲಿ ಪೊಲೀಸರು ಭಾಗಿಯಾಗ್ತಾ ಇದ್ದಾರೆ. ರಕ್ಷಕರೇ ಭಕ್ಷಕರು ಆಗ್ತಿದ್ದಾರೆ. ಇಂತಹ ಅಕ್ರಮದಲ್ಲಿ ಭಾಗಿಯಾಗೋರನ್ನ ಕೆಲಸದಿಂದ ವಜಾ ಮಾಡಿ. ಇದಕ್ಕೆ ಕಾನೂನು ತರಬೇಕು ಅಂತ ಒತ್ತಾಯ ಮಾಡಿದರು.

ಇದಕ್ಕೆ ಸಚಿವ ಪರಮೇಶ್ವರ್ ಉತ್ತರ ನೀಡಿ, 37 ಜಿಲ್ಲೆಗಳಲ್ಲಿ 88 ಜನ ಪೊಲೀಸರು ಅಕ್ರಮಗಳಲ್ಲಿ ಭಾಗಿಯಾದ ಕೇಸ್ ಇದೆ. ನಮ್ಮ ಸರ್ಕಾರ ಬಂದಾಗಿನಿಂದ ಮಾತ್ರ ಇದು ಆಗಿಲ್ಲ. 1.6 ಲಕ್ಷ ಸಿಬ್ಬಂದಿ ಇದ್ದಾರೆ‌ ಎಲ್ಲರನ್ನು ಒಂದೇ ತಕ್ಕಡಿಯಾಗಿ ತೂಗೋಕೆ ಆಗೊಲ್ಲ. ಎಲ್ಲರೂ ಕಳ್ಳರು ಅನ್ನೋದು ಸರಿಯಲ್ಲ. ಬೇಲಿನೇ ಎದ್ದು ಹೊಲ ಮೇಯ್ತಾ ಇದ್ದಾರೆ ಅಂದರೆ ಹೇಗೆ‌? ಒಳ್ಳೆ ಅಧಿಕಾರಿಗಳು ಇದ್ದಾರೆ. ಎಲ್ಲರನ್ನೂ ಒಟ್ಟಿಗೆ ಸೇರಿಸೋದು ಬೇಡ ಎಂದರು.

ಅಕ್ರಮದಲ್ಲಿ ಪೊಲೀಸರು ಶಾಮೀಲಾಗಿರೋರನ್ನ ಸೂಕ್ಷ್ಮವಾಗಿ ನೋಡ್ತೀವಿ‌. 88 ಜನರ ಮೇಲೆ ಕೇಸ್ ಹಾಕಲಾಗಿದೆ. FIR ಹಾಕಲಾಗಿದೆ. ಅಮಾನತು ಮಾಡಲಾಗಿದೆ‌. ಬಂಧನ ಮಾಡಲಾಗಿದೆ. ಅನೇಕ ಕ್ರಮಗಳನ್ನ ನಾವು ತೆಗೆದುಕೊಂಡಿದ್ದೇವೆ. ಸಾವಿರಾರು ಕೋಟಿ ಡ್ರಗ್ಸ್ ಹಿಡಿದ್ದೇವೆ. ಪೊಲೀಸ್ ಇಲಾಖೆ ಚೆನ್ನಾಗಿ ಕೆಲಸ ಮಾಡ್ತಿರೋದಕ್ಕೆ ನಮ್ಮ ರಾಜ್ಯ ಶಾಂತವಾಗಿದೆ‌. ಬೇರೆ ರಾಜ್ಯದ ಬಗ್ಗೆಯೂ ನೋಡಬೇಕು. ಅಕ್ರಮದಲ್ಲಿ ಭಾಗಿಯಾಗೋ ಪೊಲೀಸರನ್ನ ಅಮಾನತು ಅಲ್ಲ. ಅವರನ್ನ ಕೆಲಸದಿಂದ ವಜಾ ಮಾಡೋ ಕೆಲಸ ಮಾಡ್ತಾ ಇದ್ದೇವೆ ಅಂತ ತಿಳಿಸಿದರು

Vishwa News 24

Recent Posts

ಉಡುಪಿ: ಮಹಾವೀರ ಜಯಂತಿ – ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ  – vishwanews24

ಉಡುಪಿ: ಮಹಾವೀರ ಜಯಂತಿ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ  ಮಾ.31ರ ಮಂಗಳವಾರ ಬದಲಾಗಿ ಮಾ. 30ರ ಸೋಮವಾರ ರಜೆ ಘೋಷಣೆ ಉಡುಪಿ:…

12 hours ago

ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ – vishwanews24

ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಬೆಂಗಳೂರು: ಮಾ.30ಕ್ಕೆ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ  ಮಾ.31ಕ್ಕೆ ಮುಂದೂಡಿಕೆ…

12 hours ago

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ – vishwanews24

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ ನಿಯಮದಲ್ಲಿಈ ವರ್ಷವೂ 60 ದಿನಗಳ ವಿನಾಯಿತಿ : ಮಧು ಬಂಗಾರಪ್ಪ ಬೆಂಗಳೂರು:…

12 hours ago

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ – vishwanews24

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಆಹ್ವಾನ ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ…

13 hours ago

ಬಂಟ್ವಾಳ: ಯುವತಿ ನಾಪತ್ತೆ ; ಪ್ರಕರಣ ದಾಖಲು – vishwanews24

ಬಂಟ್ವಾಳ: ಯುವತಿ ನಾಪತ್ತೆ; ಪ್ರಕರಣ ದಾಖಲು ಬಂಟ್ವಾಳ: ಕೆಲಸಕ್ಕೆಂದು ಹೊರಟ ಯುವತಿ ಮನೆಗೆ ಮರಳದೇ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ…

14 hours ago

ಉಡುಪಿ : ಗ್ಯಾರಂಟಿ ಯೋಜನೆಗಳಿಂದ ಜನ ಸಾಮಾನ್ಯರಿಗೆ ಸಾಕಷ್ಟು ಅನುಕೂಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ – vishwanews24

 ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಜಯ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ…

14 hours ago