ಬೆಂಗಳೂರು :ಸಚಿವ ಜಮೀರ್ ಅಹ್ಮದ್ ಖಾನ್ ಇದ್ದ ಹೋಟೆಲ್ ಮೇಲೆ ಹೈದರಾಬಾದ್ ಪೊಲೀಸರು ದಾಳಿ ನಡೆಸಿರುವ ಘಟನೆ ತಡರಾತ್ರಿ ನಡೆದಿದೆ.
ಅಕ್ರಮವಾಗಿ ಹಣ ಸಾಗಾಟ ಆರೋಪದ ಹಿನ್ನೆಲೆಯಲ್ಲಿ ಜಮೀರ್ ವಾಸ್ತವ್ಯವಿದ್ದ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಮೇಲೆ ಪೊಲೀಸರು ಇದ್ದಕ್ಕಿದ್ದಂತೆ ದಾಳಿ ನಡೆಸಿದ್ದಾರೆ. ಮಧ್ಯರಾತ್ರಿ ದಾಳಿ ನಡೆಸಿ ಜಮೀರ್ ಕೊಠಡಿ ಮತ್ತು ಬೆಂಬಲಿಗರ ಕೊಠಡಿಗಳನ್ನ ಪರಿಶೀಲಿಸಿದ್ದಾರೆ.
ಈ ದಾಳಿ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಸಚಿವ ಜಮೀರ್, ನಾನು ಉಳಿದುಕೊಂಡಿರುವ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದರು.
ಆದ್ರೆ ಯಾವುದೇ ಸಾಕ್ಷ್ಯಗಳೂ ಸಿಗದೇ ಹಿಂದಿರುಗಿದರು. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದೆ. ಇದರಿಂದ ಕೇಂದ್ರ ಬಿಜೆಪಿ ಮತ್ತು ರಾಜ್ಯದ ಬಿಆರ್‌ಎಸ್ ಸರ್ಕಾರ ಹತಾಶೆಗೊಂಡಿದ್ದು, ಜಂಟಿ ರಾಜಕೀಯ ದಾಳಿ ನಡೆಸಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಹೆದರಿಸಿ ಹಿಮ್ಮೆಟ್ಟಿಸುವ ಕುತಂತ್ರಕ್ಕೆ ನಾವು ಹೆದರಲ್ಲ ಎಂದು ತಿರುಗೇಟು ನೀಡಿದ್ದಾರೆ
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…
ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…
ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…
ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…
ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…
180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…