ಮಂಗಳೂರು: ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ನೂತನ ಅಗ್ನಿಪಥ್ ಯೋಜನೆಯನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಿನ್ನೆ ರಾತ್ರಿ ನಗರದ ಕ್ಲಾಕ್‌ಟವರ್ ಬಳಿ ಪ್ರತಿಭಟಿಸಿದರು.
ಈ ಸಂದರ್ಭ ರಸ್ತೆ ತಡೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮುಹಮ್ಮದ್ ನಲಪ್ಪಾಡ್ ಮಾತನಾಡಿ ‘ಕೇವಲ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ಅಗ್ನಿಪಥ್ ಯೋಜನೆಗೆ ಅರ್ಥವಿಲ್ಲ. ಪಿಯುಸಿ ಕಲಿಯುವ ವಯಸ್ಸಿನಲ್ಲಿ ಸೈನ್ಯ ಸೇರಿದರೆ ಆತ ಪದವಿ ಸಹಿತ ಮತ್ತಿತರ ಕೋರ್ಸ್‌ಗಳನ್ನು ಕಲಿಯುವುದು ಯಾವಾಗ ? ನಾಲ್ಕು ವರ್ಷದ ಬಳಿಕ ಆತ ಏನು ಮಾಡಬೇಕು ?
ಇವರು ಮಂಗಳೂರನ್ನು ಕೇಸರೀಕರಣಕ್ಕೆ ಪ್ರಖ್ಯಾತಗೊಳಿಸಿದ್ದಾರೆ. ಅಗ್ನಿಪಥ್ ಯೋಜನೆಯಲ್ಲಿ ಕೇವಲ 4 ವರ್ಷ ಸೇನೆಗೆ ಕರೆಯಿಸಿ ಆಮೇಲೆ ರಿಟ್ಯಾರ್ಡ್ ಆಯ್ತು ಮನೆಗೆ ಹೋಗಿ ಅನ್ನೋದು ಎಷ್ಟು ಸರಿ…? 80000 ಯೋಧರನ್ನು ತೆಗೆದುಕೊಳ್ಳುವ ಬದಲಿಗೆ ಕೇವಲ 46000 ಯೋಧರನ್ನೇ ತೆಗೆದುಕೊಳ್ಳಬೇಕು ಅಂತಾರೆ.
ಆದ್ರೂ ಅಷ್ಟು ಜನಕ್ಕೂ ಕೂಡಾ 15 ವರ್ಷ ಸರ್ವೀಸ್ ಇಲ್ಲ. ಕೇವಲ ನಾಲ್ಕೇ ವರ್ಷ. ಪೆಂಕ್ಷನ್ ಕೂಡಾ ಇಲ್ಲ, ಅವನಿಗೆ 17 ವರ್ಷದಲ್ಲಿ ಒಂದು ಡಿಗ್ರಿ ಕೂಡಾ ಇರುವುದಿಲ್ಲ.
ಬಿಜೆಪಿ ಸರ್ಕಾರ ಕೇವಲ 3 ಕಂಪೆನಿಗಳಿಗೆ ಮಾತ್ರ ಸೀಮಿತ. ನೀವು ಹೇಳಿರೋದು 2 ಕೋಟಿ ಕೆಲಸ. ಆದ್ರೆ ಇಲ್ಲಿಯವರೆಗೆ ನೀವು 16 ಕೋಟಿ ಕೆಲಸ ಕೊಡಬೇಕಿತ್ತು. ಆದರೆ ಕೋವಿಡ್‌ನಲ್ಲಿ ಮಾತ್ರ ವರ್ಷಕ್ಕೆ 2 ಕೋಟಿ ಜನ ಕೆಲಸ ಕಳೆದುಕೊಂಡಿದ್ದಾರೆ.
ಅವರಿಗೆ ಏನೂ ಮಾಡಿಲ್ಲ, ಸತ್ತೋದವರಿಗೆ ಕೂಡಾ ಏನು ಮಾಡಿಲ್ಲ, ಬಿಸಿನೆಸ್‌ನಲ್ಲಿ ಸೋತವರಿಗೆ ಕೂಡಾ ಏನೂ ಮಾಡಿಲ್ಲ. ಅಗ್ನಿಪಥ್ ಎಂಬ ಯೋಜನೆ ನಮ್ಮ ಯುವಕರನ್ನು ಹಾಳು ಮಾಡಲು ಇರುವ ಯೋಜನೆಯಾಗಿದೆ. ಪಿಎಸ್‌ಐ ಹಗರಣದಲ್ಲಿ 40 ಕಮಿಷನ್ ಹೊಡೆಯುವ ಹಾಗೆ ಇನ್ನು ಆರ್ಮಿಯಲ್ಲೂ ಕಮಿಷನ್ ಹೊಡೆಯೋ ಪ್ಲಾನಾ ..? ಎಂದು ಖಾರವಾಗಿ ಪ್ರಶ್ನಿಸಿದರು.
ಶಾಸಕ ಯು.ಟಿ.ಖಾದರ್ ಮಾತನಾಡಿ ‘ಯುವಕರ ಶಿಕ್ಷಣ ಮತ್ತು ಉದ್ಯೋಗದ ಹಕ್ಕನ್ನು ಕಸಿಯುವ ಕೇಂದ್ರದ ಅಗ್ನಿಪಥ್ ಯೋಜನೆಯು ದೇಶಕ್ಕೆ ಮಾರಕವಾಗಿದೆ’ ಎಂದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಮುಖಂಡ ಹೇಮನಾಥ್ ಶೆಟ್ಟಿ ಪುತ್ತೂರು, ಯುವ ಕಾಂಗ್ರೆಸ್ ಮುಖಂಡರಾದ ನಾಸಿರ್ ಸಾಮಣಿಗೆ, ಗಿರೀಶ್ ಆಳ್ವ, ಮೇರಿಲ್ ರೇಗೊ, ಆಶಿತ್ ಪಿರೇರಾ, ಸುರಯ್ಯಾ ಅಂಜುಮ್, ಫಿರೋಝ್ ಮಲಾರ್ ಮತ್ತಿತರರು ಪಾಲ್ಗೊಂಡಿದ್ದರು.
ಶಾಸಕರು ರಾಜೀನಾಮೆ ನೀಡಿದರೆ ಎರಡೇ ನಿಮಿಷದಲ್ಲಿ ಅಂಗೀಕಾರ : ರಾಜೀನಾಮೆ ನೀಡುವ ಶಾಸಕರಿಗೆ ಸಿಎಂ ಖಡಕ್ ವಾರ್ನಿಂಗ್ ಬೆಂಗಳೂರು: ಶಾಸಕರು…
ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಸಚಿವರಿಗೆ ಜಿಲ್ಲೆಗಳ ಹೊಣೆ : ತಕ್ಷಣ ಪ್ರವಾಸಕ್ಕೆ ಸಿಎಂ ಸೂಚನೆ ಬೆಂಗಳೂರು: ರಾಜ್ಯದಲ್ಲಿನ ಅತಿವೃಷ್ಟಿ /…
ಕುಂದಾಪುರ: ದಿನಸಿ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ; ಲಕ್ಷಾಂತರ ರೂ. ನಷ್ಟ ಕುಂದಾಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಇಡೀ ದಿನಸಿ…
ತ್ರಿಷಾ ವಿರುದ್ಧ ವಿವಾದಾತ್ಮಕ ಹೇಳಿಕೆ : ಉದಯನಿಧಿ ಸ್ಟಾಲಿನ್ ಬಂಧನ ಚೆನ್ನೈ: ನಟಿ ತ್ರಿಷಾ ಅವರನ್ನು ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ…
ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ; ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ…
ಕಾಪು: ಜಿಲ್ಲಾಧಿಕಾರಿಗಳಿಂದ ಕಡಲ್ಕೊರೆತ ಪರಿಶೀಲನೆ: ತುರ್ತು ಕಾಮಗಾರಿಗೆ 2 ಕೋ. ರೂ. ಬಿಡುಗಡೆ ಉಡುಪಿ: ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ,…