Featured

ಅಟಲ್ ರ ಕನಸಿನ ಯೋಜನೆ, ಉಡುಪಿಯಲ್ಲಿ ಮೋದಿಯವರಿಂದ ನನಸು!!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಶಸ್ವಿಯಾಗಿ ನಾಲ್ಕು ವರ್ಷ ಅಧಿಕಾರವನ್ನು ಪೂರೈಸಿ ಐದನೇ ವರ್ಷದತ್ತ ಹೆಜ್ಜೆ ಇಟ್ಟಿದ್ದಾರೆ. ಒಂದರ ಮೇಲೊಂದರಂತೆ ಹಲವು ಯಶಸ್ವಿ ಯೋಜನೆಗಳನ್ನು ತಂದು ಭಾರತೀಯರ ಮನ ಗೆದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಮೋದಿಯವರು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅವರ ಜೊತೆ ನಾವಿದ್ದೇವೆ ಎಂಬುದನ್ನು ಭಾರತೀಯರು ಇಪ್ಪತ್ತಕ್ಕೂ ಅಧಿಕ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರಕಾರವನ್ನು ಅಧಿಕಾರಕ್ಕೆ ತರುವ ಮೂಲಕ ಸಾಬೀತು ಪಡಿಸಿದ್ದಾರೆ. ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಶಿಷ್ಯರಾಗಿ ಅವರದೇ ಹಾದಿಯಲ್ಲಿ ನಡೆಯುತ್ತಿರುವಂತಹ ಪ್ರಧಾನಿ ಮೋದಿ ಇದೀಗ ಅಟಲ್ ಅವರ ಕನಸಿನ ಯೋಜನೆಯೊಂದಕ್ಕೆ ಚಾಲನೆ ನೀಡುತ್ತಿದ್ದಾರೆ!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಮಂತ್ರಿ ಮಂಡಲ ಉಡುಪಿಯ ಪಾದೂರಿನಲ್ಲಿ ಭೂಗತ ತೈಲ ಸಂಗ್ರಹಾಗಾರವನ್ನು ಸ್ಥಾಪನೆ ಮಾಡಲು ಅನುಮೋದನೆ ನೀಡಿದೆ. ಉಡುಪಿ ಜಿಲ್ಲೆಯ ಪಾದೂರು ಹಾಗೂ ಒಡಿಸ್ಸಾದ ಚಂಡಿಕೋಲ್ ನಲ್ಲಿ ಎರಡು ವ್ಯೂಹಾತ್ಮಕ ಬೃಹತ್ ತೈಲ ಸಂಗ್ರಹಗಾರದ ಸ್ಥಾಪನೆಗೆ ಮೋದಿ ಸರ್ಕಾರ ಮುಂದಾಗಿದೆ. ಈ ಮೂಲಕ ಭಾರತದಲ್ಲಿರುವ ಒಟ್ಟು ತುರ್ತು ತೈಲ ಸಂಗ್ರಹಾಗಾರಗಳ ಸಂಖ್ಯೆ ನಾಲ್ಕಕ್ಕೆ ಏರಲಿದೆ. ಈಗಾಗಲೇ ಮಂಗಳೂರು ಹಾಗೂ ವಿಶಾಖಪಟ್ಟಣಂಗಳಲ್ಲಿ ತುರ್ತು ತೈಲ ಸಂಗ್ರಹಾಗಾರಗಳಿವೆ. ಇದರ ಜೊತೆ ಜೊತೆಗೆ ಈಗ ಉಡುಪಿ ಹಾಗೂ ಒಡಿಸ್ಸಾದಲ್ಲಿ ಮತ್ತೆರಡು ತೈಲ ಸಂಗ್ರಹಾಗಾರಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಸಚಿವ ಸಂಪುಟ ಇತ್ತೀಚೆಗೆ ಅನುಮೋದಿಸಿರುವ ಕರ್ನಾಟಕದ ಪಾದೂರು ಮತ್ತು ಒಡಿಸ್ಸಾದ ಚಂಡಿಕೋಲ್ ತೈಲ ಸಂಗ್ರಹಗಳಲ್ಲಿ ಒಟ್ಟು 69 ಲಕ್ಷ ಮೆಟ್ರಿಕ್ ಟನ್ ತೈಲೋತ್ಪನ್ನ ಸಂಗ್ರಹದ ಗುರಿ ಹೊಂದಲಾಗಿದೆ. ಚಂಡಿಕೋಲ್ ನಲ್ಲಿ ಒಟ್ಟು 40 ಲಕ್ಷ ಮೆಟ್ರಿಕ್ ಟನ್ ಹಾಗೂ ಪಾದೂರಿನಲ್ಲಿ 25 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ತೈಲ ಸಂಗ್ರಹಾಗಾರ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಚಂಡಿಕೋಲ್ ಮತ್ತು ಪಾದೂರಿನ ತೈಲ ಸಂಗ್ರಹಗಾರಗಳು ಬಂಡೆಗಳ ಗುಹೆಯಂತೆ ಭೂಗತವಾಗಿರಲಿದೆ. ಎರಡೂ ಕಡೆಗಳಿಂದ ಒಟ್ಟು 69 ಲಕ್ಷ ಟನ್ ತೈಲ ಸಂಗ್ರಹವಾಗಲಿದ್ದು, ಈ ಮೂಲಕ ತುರ್ತು ಪರಿಸ್ಥಿತಿಯಲ್ಲಿ ವಿದೇಶಗಳಿಂದ ತೈಲ ಪೂರೈಕೆಯಾಗದ ವೇಳೆ ಈ ಭೂಗತ ಕಚ್ಚಾ ತೈಲ ಸಂಗ್ರಹಾಗಾರಗಳಿಂದ ದೇಶದ ತೈಲ ಬೇಡಿಕೆ ಈಡೇರಿಸುವ ಸಾಮರ್ಥ್ಯ 22 ದಿನಗಳವರೆಗೆ ಏರಿಕೆಯಾಗಲಿದೆ. ಒಟ್ಟು 22 ದಿನಗಳ ಕಾಲ ಭಾರತವನ್ನು ತೈಲದ ಸಮಸ್ಯೆಯಿಂದ ರಕ್ಷಿಸಬಹುದಾಗಿದೆ.

ಅಟಲ್ ರ ಕನಸಿನ ಯೋಜನೆ..

ದಶಕಗಳ ಹಿಂದೆ ಗಲ್ಫ್ ಯುದ್ಧದಲ್ಲಿ ಪಶ್ಚಿಮ ಏಷ್ಯಾಕ್ಕೆ ಹಿನ್ನಡೆಯಾಗಿತ್ತು. ಆಗ ಭಾರತ ಬಹುತೇಕ ದಿವಾಳಿಯಾಗುವ ಹಂತಕ್ಕೆ ಬಂದಿತ್ತು, ತೈಲ ಬೆಲೆ ಗಗನಕ್ಕೇರಿತ್ತು. ಕೇವಲ ಮೂರು ವಾರಗಳ ಆಮದು ಕಾರಣದಿಂದಾಗಿ ವಿದೇಶಿ ವಿನಿಮಯ ಬಿಕ್ಕಟ್ಟು ಪ್ರಾರಂಭವಾಯ್ತು. ಈ ಬಿಕ್ಕಟ್ಟು ಪರಿಹಾರಕ್ಕಾಗಿ ಭಾರತ ಆರ್ಥಿಕ ನೀತಿಯನ್ನು ಜಾರಿಗೊಳಿಸಿತ್ತು. ಅದೇ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ. ಆದಾಗ್ಯೂ ತೈಲ ಬೆಲೆ ಏರಿಕೆ ಭಾರತದ ಮೇಲೆ ನಿರಂತರ ವ್ಯತಿರಿಕ್ತ ಪರಿಣಾಮ ಬೀರುತ್ತಿತ್ತು. ಇದಕ್ಕೆ ದೀರ್ಘಕಾಲಿಕ ಪರಿಹಾರವಾಗಿ 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ತೈಲ ಸಂಗ್ರಹಾಗಾರಗಳ ನಿರ್ಮಾಣದ ಹೊಸ ಪರಿಕಲ್ಪನೆಯನ್ನು ದೇಶದ ಮುಂದಿಟ್ಟಿತ್ತು. ಸದ್ಯ ಪಾದೂರಿನಲ್ಲಿ ನಿರ್ಮಾಣವಾಗುತ್ತಿರುವ ತೈಲ ಸಂಗ್ರಹಾಗಾರ ಕರ್ನಾಟಕದ ಅತಿ ದೊಡ್ಡ ಸಂಗ್ರಹಾಗಾರವಾಗಲಿದ್ದು, ಈಗಾಗಲೇ ಕಾಮಗಾರಿಗಳು ಆರಂಭವಾಗಿವೆ.

 

 

 

Vishwa News 24

Recent Posts

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…

1 day ago

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…

2 days ago

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  – vishwanews24

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…

2 days ago

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು – vishwanews24

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…

2 days ago

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ – vishwanews24

 ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್‌.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…

2 days ago

ಉಡುಪಿ: ತುಳುನಾಡಿನ, ತುಳು ಜನರ ಭಾವನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ : ರಮೇಶ್ ಕಾಂಚನ್ – vishwanews24

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…

2 days ago