Featured

ಅಡುಗೆ ಮಾಡದ ವಿಚಾರ ; ತಾಯಿ-ಮಗನ ಜಗಳ ಕೊಲೆಯಲ್ಲಿ ಅಂತ್ಯ  ; ಆರೋಪಿ ಪುತ್ರನ ಸೆರೆ – vishwanews24

ಹಾಸನ : ಅಡುಗೆ ಮಾಡಿರದ ಕಾರಣಕ್ಕೆ ತಾಯಿಯ ಕೊಲೆ: ಆರೋಪಿ ಪುತ್ರನ ಸೆರೆ

ಹಾಸನ: ಮನೆಯಲ್ಲಿ ಅಡುಗೆ ಮಾಡಿರದ ಕಾರಣಕ್ಕೆ ಜಗಳಕ್ಕಿಳಿದ ಮಗ ದೊಣ್ಣೆಯಿಂದ ಹೊಡೆದು ತಾಯಿಯನ್ನು ಕೊಲೆಗೈದ ಆಘಾತಕಾರಿ ಘಟನೆ ಆಲೂರು ತಾಲೂಕಿನ ಕದಾಳು ಚನ್ನಾಪುರ ಗ್ರಾಮದಲ್ಲಿ ನಡೆದಿದೆ.

ಪ್ರೇಮಾ(45) ಕೊಲೆಯಾದವರು. ಅವರ ಪುತ್ರ ಸಂತೋಷ್ (19) ಕೊಲೆ ಆರೋಪಿ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗುರುವಾರ ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ ಸಂತೋಷ್, ಅಡುಗೆ ಮಾಡಿರದ ಕಾರಣಕ್ಕೆ ತಾಯಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಮಾತಿಗೆ ಮಾತು ಬೆಳೆದು ಕೋಪಗೊಂಡ ಸಂತೋಷ್ ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಪ್ರೇಮಾ ಗಂಭೀರವಾಗಿ ಗಾಯಗೊಂಡಿದ್ದರು. ಕುಟುಂಬಸ್ಥರು ಅವರನ್ನು ತಕ್ಷಣ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಪ್ರೇಮಾ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vishwa News 24

Recent Posts

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ – vishwanews24

ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ…

40 minutes ago

ಉಡುಪಿ : ಜೂ.12 ರಂದು ನೇರ ಸಂದರ್ಶನ – vishwanews24

ಉಡುಪಿ : ಜೂ.12 ರಂದು ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್…

47 minutes ago

ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ತಮಿಳುನಾಡು ಸಿಎಂ ಭೇಟಿ – vishwanews24

ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ತಮಿಳುನಾಡು ಸಿಎಂ ವಿಜಯ್ ಭೇಟಿ ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಜೂನ್…

53 minutes ago

ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ – vishwanews24

ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ ಉಡುಪಿ : ರಾಜ್ಯದ ಖಾಸಗಿ ಬಸ್…

1 hour ago

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ – vishwanews24

ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ ಮಳೆಗಾಲದ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ…

2 hours ago

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ – vishwanews24

ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು : ಅಪ್ರಾಪ್ತ…

2 hours ago