Featured

ಅಣ್ಣ ಸಿಎಂ ಆಗಲಿ ಅನ್ನೋ ಆಸೆ ಈಗಲೂ ಇದೆ ,ಅದಕ್ಕೆ ಕಾಲ ಕೂಡಿ ಬರಬೇಕು : ಡಿ.ಕೆ ಸುರೇಶ್ – vishwanews24

ಸಿಎಂ ಸ್ಥಾನ ಬೇಕು ಅಂತ  ಸಿದ್ದರಾಮಯ್ಯರನ್ನಚೇರ್‌ನಿಂದ ಎಳೆದು ಕೂರಿಸೋಕೆ ಆಗುತ್ತಾ? : ಡಿ.ಕೆ ಸುರೇಶ್

ಬೆಂಗಳೂರು: ಅಣ್ಣ ಸಿಎಂ ಆಗಲಿ ಅನ್ನೋ ಆಸೆ ಈಗಲೂ ಇದೆ. ಆದರೆ ಅದಕ್ಕೆ ಕಾಲ ಕೂಡಿ ಬರಬೇಕು ಎಂದು ಮಾಜಿ ಸಂಸದ ಡಿ.ಕೆ ಸುರೇಶ್  ಹೇಳಿದ್ದಾರೆ.

ಬೆಂಗಳೂರಿನಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಹೈಕಮಾಂಡ್ ಭೇಟಿ ಯಾವುದು ಹೊಸತಲ್ಲ. ನಿರಂತರವಾಗಿ ಭೇಟಿ ಮಾಡುತ್ತಲ್ಲೇ ಇರುತ್ತಾರೆ. ಹೈಕಮಾಂಡ್ ಮುಂದೆ ಡಿಮ್ಯಾಂಡ್ ಇಡಲು ಏನಿದೆ ಪಾರ್ಟಿ ಅವರನ್ನ ಡಿಸಿಎಂ ಮಾಡಿದೆಯಲ್ಲ ಇನ್ನೇನು ಬೇಕು ಎಂದಿದ್ದಾರೆ.

ಈಗ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಇದ್ದಾರೆ, ಸ್ಥಾನ ಬೇಕು ಅಂತ ಎಂದು ಚೇರ್‌ನಿಂದ ಎಳೆದು ಕೂರಿಸೋಕೆ ಆಗುತ್ತಾ? ಪಕ್ಷದ ಅಧ್ಯಕ್ಷರು ದೆಹಲಿಗೆ ಹೋಗುತ್ತಾ ಇರುತ್ತಾರೆ. ಹೈಕಮಾಂಡ್ ಜೊತೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಹೈಕಮಾಂಡ್ ಭೇಟಿ ಮಾಡಿ ಬರುವುದು ಪ್ರವೃತ್ತಿ. ಡಿಕೆಶಿ ಮುಂದೆ ಯಾವುದೇ ಅಜೆಂಡ ಇಲ್ಲ. ಬೇರೆ ಯಾವುದೇ ಚಿಂತನೆಗಳೂ ಇಲ್ಲ. ಹಕ್ಕು ಅನ್ನೋ ಪ್ರಶ್ನೆ ಇಲ್ಲ ಎಂದು ನುಡಿದ್ದಾರೆ.

ಡಿ.ಕೆ.ಶಿವಕುಮಾರ್ ಹಿಂದೆ ಪ್ರಧಾನಿ ಭೇಟಿ ಆಗುವುದು ಹೈಕಮಾಂಡ್ ಗಮನಕ್ಕೆ ತಂದಿದ್ದರು. ಶಿವರಾತ್ರಿ ಹಬ್ಬದಲ್ಲಿ ಅಮಿತ್ ಶಾ ಭೇಟಿಯೂ ಹೈಕಮಾಂಡ್ ಗಮನಕ್ಕೆ ತಂದಿದ್ದರು ಎಂದು ಹೇಳಿದ್ದಾರೆ.

ಕೇಂದ್ರದ ತೆರಿಗೆ ಕಡಿತ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಈ ವಿಷಯ ಅಲ್ಲಲ್ಲಿ ಚರ್ಚೆ ಆಗುತ್ತಿದೆ. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲ ಮಾಡುವ ಕೆಲಸ ನಡೆಯುತ್ತಿದೆ. ರಾಜ್ಯಗಳಿಗೆ ಶಕ್ತಿ ತುಂಬುವುದು ಬಿಟ್ಟು ಬಲವಂತವಾದ ಕಾನೂನು ಹೇರಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯಗಳ ಅಭಿವೃದ್ಧಿ ಕುಂಠಿತಕ್ಕೆ ಕೇಂದ್ರ ಸರ್ಕಾರ ಯಾವ ರೀತಿ ಕಾರಣ ಆಗುತ್ತಿದೆ ನಾವು ನೋಡ್ತಾ ಇದ್ದೇವೆ. ರಾಷ್ಟ್ರ ಹಾಗೂ ರಾಜ್ಯದ ಜನರು ತಿರುಗಿ ಬೀಳಬಹುದು. ತೆರಿಗೆ ಹಣ ಕೊಡಿ ಎಂದು ನಾನು ಮನವಿ ಮಾಡ್ತೇನೆ. ಜನಸಂಖ್ಯೆ ಆಧಾರದ ಮೇಲೆ ತೆರಿಗೆ ಹಣ ವಿಭಜನೆ ಆಗುತ್ತಿದೆ. ಮಹಿಳಾ ಮೀಸಲಾತಿ ಅನುಮೋದನೆ ಆಗಿದೆ. ಜಾತಿಗಣತಿ ಆಗುವ ಸಾಧ್ಯತೆ ಇದೆ. ಕ್ಷೇತ್ರಗಳನ್ನ ಜಾಸ್ತಿ ಮಾಡಿದರೆ, ಸಂಪೂರ್ಣವಾಗಿ ಉತ್ತರ ಭಾರತದ ಹಿಡಿತಕ್ಕೆ ಹೋಗುತ್ತದೆ. ಬಿಜೆಪಿ ನಾಯಕರು ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

Vishwa News 24

Recent Posts

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

18 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

20 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

20 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

20 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

21 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

21 hours ago