Featured

ಅತೃಪ್ತ ಶಾಸಕರು ಕಾಂಗ್ರೆಸ್ ಗೆ ಕೈ ಕೊಟ್ಟವರು, ಇನ್ನು ಯಡಿಯೂರಪ್ಪರನ್ನು ಸುಮ್ಮನೇ ಬಿಡುತ್ತಾರಾ ?? : ಡಿಕೆ ಶಿವಕುಮಾರ್ -Vishwanews24

ಬೆಂಗಳೂರು:“ಒಂದು ವೇಳೆ ಯಡಿಯೂರಪ್ಪ ಅವರ ಜತೆ ಪ್ರಮಾಣ ವಚನ ಸ್ವೀಕರಿಸಲು ಅತೃಪ್ತ ಶಾಸಕರಿಗೆ ಸಾಧ್ಯವಾಗದಿದ್ದರೆ ಯಡಿಯೂರಪ್ಪನನ್ನು ಬಿಡುತ್ತಾರಾ? ಅವರನ್ನು ಕಿತ್ತು ತಿನ್ನುತ್ತಾರೆ ಅಷ್ಟೆ,” ಎಂದು ಡಿಕೆ ಶಿವಕುಮಾರ್​ ಪ್ರಶ್ನಿಸಿದರು.

ಅತೃಪ್ತ ಶಾಸಕರ ರಾಜೀನಾಮೆ ವಿಷಯ ಇತ್ಯರ್ಥವಾದ ಬಳಿಕ ಸರ್ಕಾರ ರಚನೆ ಮಾತು. ಅವರ ಬಗ್ಗೆ ನನಗೆ ಎಲ್ಲವೂ ಗೊತ್ತು. ಯಡಿಯೂರಪ್ಪ ಪ್ರಮಾಣವಚನದ ದಿನವೇ ಇವರಿಗೂ ಪ್ರಮಾಣವಚನ ಆಗಬೇಕು. ಇಲ್ಲದಿದ್ದರೆ ಯಡಿಯೂರಪ್ಪ ಸ್ಥಿತಿ ಗೋವಿಂದ. ಕ್ಷೇತ್ರದ ಜನರು ನಂಬಿಕೆ ದ್ರೋಹ ಮಾಡಿ, 30-40 ವರ್ಷ ಸಾಕಿ ಸಲುಹಿದ ಪಕ್ಷವನ್ನೇ ಬಿಡದವರು, ಈಗ ಯಡಿಯೂರಪ್ಪ ಅವರನ್ನು ಬಿಡುತ್ತಾರಾ, ಎಂದು ಡಿಕೆಶಿ ಪ್ರಶ್ನಿಸಿದರು.

“ಇಷ್ಟು ವರ್ಷ ಎಲ್ಲವನ್ನೂ ನೀಡಿದ ಪಕ್ಷವನ್ನು ಬಿಡದವರು, ಯಡಿಯೂರಪ್ಪ ಅವರನ್ನು ಬಿಡುತ್ತಾರಾ? ಅವರ ಪ್ಯಾಂಟು – ಶರ್ಟ್​ ಎಲ್ಲವನ್ನೂ ಕಿತ್ತು ಹಾಕಿ ನುಂಗುತ್ತಾರೆ. ಈಗಾಗಲೇ ಬೆಂಗಳೂರು ನನಗೆ ಬೇಕು, ಇಂಧನ, ಅದು ಇದು ಎಂದು ಸಾಲು ಸಾಲು ಬೇಡಿಕೆಯನ್ನು ಅತೃಪ್ತ ಶಾಸರಕರು ಇಟ್ಟಿದ್ದಾರೆ. ಯಡಿಯೂರಪ್ಪ ಅವರ ಬಳಿ ಇರುವ ಎಲ್ಲಾ ಮುತ್ತು ರತ್ನಗಳನ್ನು ಅವರು ಕೀಳುವುದು ಗ್ಯಾರಂಟಿ,” ಎಂದು ಲೇವಡಿ ಮಾಡಿದರು.

ನನಗೆ ಯಾವುದೇ ಸ್ಥಾನಮಾನ ಬೇಡ. ಆದರೆ ನನ್ನ ಸ್ನೇಹಿತರು ಹೇಗೆ ಎಂಬುವುದು ನನಗೆ ಗೊತ್ತು. ಒಬ್ಬರಿಗೆ ಬೆಂಗಳೂರು ಸಿಟಿ ಬೇಕು, ಒಬ್ಬರಿಗೆ ಪಿಡಬ್ಲೂಡಿ ಮತ್ತೊಬ್ಬರಿಗೆ ಪವರ್ ಬೇಕು. ಅಮಿತ್ ಶಾ ಹೇಗೆ ಕಂಟ್ರೋಲ್ ಮಾಡುತ್ತಾರೆ ನನಗೆ ಗೊತ್ತಿಲ್ಲ. ಆದರೆ ನಮ್ಮವರ ಬುದ್ಧಿ ನಂಗೆ ಗೊತ್ತಿದೆ. ಎಂದರು ವ್ಯಂಗ್ಯವಾಡಿದರು.

Vishwa News 24

Recent Posts

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

5 hours ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

6 hours ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

6 hours ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

6 hours ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

8 hours ago

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ – vishwanews24

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡ್ತಿದೆ :  ಡಿಕೆಶಿ ಬೆಂಗಳೂರು : ಕೇಂದ್ರ ಸರ್ಕಾರ…

8 hours ago