ಬೆಂಗಳೂರು:“ಒಂದು ವೇಳೆ ಯಡಿಯೂರಪ್ಪ ಅವರ ಜತೆ ಪ್ರಮಾಣ ವಚನ ಸ್ವೀಕರಿಸಲು ಅತೃಪ್ತ ಶಾಸಕರಿಗೆ ಸಾಧ್ಯವಾಗದಿದ್ದರೆ ಯಡಿಯೂರಪ್ಪನನ್ನು ಬಿಡುತ್ತಾರಾ? ಅವರನ್ನು ಕಿತ್ತು ತಿನ್ನುತ್ತಾರೆ ಅಷ್ಟೆ,” ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.
ಅತೃಪ್ತ ಶಾಸಕರ ರಾಜೀನಾಮೆ ವಿಷಯ ಇತ್ಯರ್ಥವಾದ ಬಳಿಕ ಸರ್ಕಾರ ರಚನೆ ಮಾತು. ಅವರ ಬಗ್ಗೆ ನನಗೆ ಎಲ್ಲವೂ ಗೊತ್ತು. ಯಡಿಯೂರಪ್ಪ ಪ್ರಮಾಣವಚನದ ದಿನವೇ ಇವರಿಗೂ ಪ್ರಮಾಣವಚನ ಆಗಬೇಕು. ಇಲ್ಲದಿದ್ದರೆ ಯಡಿಯೂರಪ್ಪ ಸ್ಥಿತಿ ಗೋವಿಂದ. ಕ್ಷೇತ್ರದ ಜನರು ನಂಬಿಕೆ ದ್ರೋಹ ಮಾಡಿ, 30-40 ವರ್ಷ ಸಾಕಿ ಸಲುಹಿದ ಪಕ್ಷವನ್ನೇ ಬಿಡದವರು, ಈಗ ಯಡಿಯೂರಪ್ಪ ಅವರನ್ನು ಬಿಡುತ್ತಾರಾ, ಎಂದು ಡಿಕೆಶಿ ಪ್ರಶ್ನಿಸಿದರು.
“ಇಷ್ಟು ವರ್ಷ ಎಲ್ಲವನ್ನೂ ನೀಡಿದ ಪಕ್ಷವನ್ನು ಬಿಡದವರು, ಯಡಿಯೂರಪ್ಪ ಅವರನ್ನು ಬಿಡುತ್ತಾರಾ? ಅವರ ಪ್ಯಾಂಟು – ಶರ್ಟ್ ಎಲ್ಲವನ್ನೂ ಕಿತ್ತು ಹಾಕಿ ನುಂಗುತ್ತಾರೆ. ಈಗಾಗಲೇ ಬೆಂಗಳೂರು ನನಗೆ ಬೇಕು, ಇಂಧನ, ಅದು ಇದು ಎಂದು ಸಾಲು ಸಾಲು ಬೇಡಿಕೆಯನ್ನು ಅತೃಪ್ತ ಶಾಸರಕರು ಇಟ್ಟಿದ್ದಾರೆ. ಯಡಿಯೂರಪ್ಪ ಅವರ ಬಳಿ ಇರುವ ಎಲ್ಲಾ ಮುತ್ತು ರತ್ನಗಳನ್ನು ಅವರು ಕೀಳುವುದು ಗ್ಯಾರಂಟಿ,” ಎಂದು ಲೇವಡಿ ಮಾಡಿದರು.
ನನಗೆ ಯಾವುದೇ ಸ್ಥಾನಮಾನ ಬೇಡ. ಆದರೆ ನನ್ನ ಸ್ನೇಹಿತರು ಹೇಗೆ ಎಂಬುವುದು ನನಗೆ ಗೊತ್ತು. ಒಬ್ಬರಿಗೆ ಬೆಂಗಳೂರು ಸಿಟಿ ಬೇಕು, ಒಬ್ಬರಿಗೆ ಪಿಡಬ್ಲೂಡಿ ಮತ್ತೊಬ್ಬರಿಗೆ ಪವರ್ ಬೇಕು. ಅಮಿತ್ ಶಾ ಹೇಗೆ ಕಂಟ್ರೋಲ್ ಮಾಡುತ್ತಾರೆ ನನಗೆ ಗೊತ್ತಿಲ್ಲ. ಆದರೆ ನಮ್ಮವರ ಬುದ್ಧಿ ನಂಗೆ ಗೊತ್ತಿದೆ. ಎಂದರು ವ್ಯಂಗ್ಯವಾಡಿದರು.
ಕುಂದಾಪುರ: ಹೋಂ ಸ್ಟೇ ಎನ್ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…