ಮುಂಬೈ: ಅಮೆರಿಕದ ಸಂಶೋಧನಾ ಸಂಸ್ಥೆಯ ವರದಿ ಪರಿಣಾಮವಾಗಿ ಅದಾನಿ ಸಮೂಹದ ಷೇರು ಮೌಲ್ಯಗಳಲ್ಲಿ ಭಾರೀ ಕುಸಿತವಾಗಿರುವುದು ಭಾರತೀಯ ಜೀವ ವಿಮಾ ನಿಗಮ ಎಲ್ಐಸಿಗೂ ದೊಡ್ಡ ಹೊಡೆತ ನೀಡಿದೆ. ಅದಾನಿ ಸಮೂಹ ಸಂಸ್ಥೆಗಳಲ್ಲಿ ಎಲ್ಐಸಿ ಕೂಡ ಹಣ ಹೂಡಿರುವುದರಿಂದ ಆ ಕಂಪನಿಯ ಷೇರು ಮೌಲ್ಯದಲ್ಲಿ ಕುಸಿತವಾಗಿರುವುದರ ಹೊಡೆತ ಎಲ್ಐಸಿ ಮೇಲೂ ಬಿದ್ದಿದೆ. ಪರಿಣಾಮವಾಗಿ ಎರಡೇ ದಿನಗಳಲ್ಲಿ ಎಲ್ಐಸಿ 18,647 ಕೋಟಿ ರೂ. ಕಳೆದುಕೊಂಡಿದೆ. ಅದಾನಿ ಸಮೂಹದ ಕಂಪನಿಗಳಲ್ಲಿ ಎಲ್ಐಸಿ ಹೂಡಿಕೆಯ ಮೌಲ್ಯ ಜನವರಿ 24ರ ವೇಳೆಗೆ 81,268 ಕೋಟಿ ರೂ. ಆಗಿತ್ತು. ಇದು ಜನವರಿ 27ಕ್ಕೆ 62,621 ಕೋಟಿ ರೂ.ಗೆ ಕುಸಿದಿದೆ.
ಅದಾನಿ ಗ್ರೀನ್ ಎನರ್ಜಿ, ಅದಾನಿ ಎಂಟರ್ಪ್ರೈಸಸ್, ಅದಾನಿ ಪೋರ್ಟ್ಸ್, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್ಮಿಷನ್ಗಳ ಶೇ 1ರಷ್ಟು ಷೇರು ಅನ್ನು ಎಲ್ಐಸಿ ಹೊಂದಿದೆ ಎಂಬುದು ದತ್ತಾಂಶಗಳಿಂದ ತಿಳಿದುಬಂದಿದೆ. ಇತ್ತೀಚೆಗೆ ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿಯಲ್ಲೂ ಹೂಡಿಕೆ ಮಾಡಿದೆ ಎಂದು ವರದಿಯಾಗಿದೆ. ಈ ಕಂಪನಿಗಳ ಷೇರುಗಳು ಕಳೆದ ಎರಡು ಟ್ರೇಡಿಂಗ್ ಸೆಷನ್ಗಳಲ್ಲಿ ಶೇ 27 ಹಾಗೂ ಶೇ 19ರ ನಡುವೆ ಕುಸಿದಿವೆ.
ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್ಬರ್ಗ್ ರಿಸರ್ಚ್ ಲೆಕ್ಕಪತ್ರ ವಂಚನೆ ಮತ್ತು ಷೇರು ಬೆಲೆಯ ಮೇಲೆ ಪರಿಣಾಮ ಬೀರಿರುವ ಬಗ್ಗೆ ಅದಾನಿ ಸಮೂಹದ ಮೇಲೆ ಆರೋಪ ಮಾಡಿದ ಬೆನ್ನಲ್ಲೇ ಸಮೂಹದ ಷೇರುಗಳ ಮೌಲ್ಯದಲ್ಲಿ ಕುಸಿತ ಆರಂಭವಾಗಿತ್ತು.
ಮಿತಿಯಲ್ಲೇ ಸಾಲ ನೀಡಿದ್ದೇವೆ ಎಂದ ಎಸ್ಬಿಐ
ಅದಾನಿ ಸಮೂಹ ಸಂಸ್ಥೆಗಳಿಗೆ ಸಾಲ ನೀಡಿರುವ ಎಸ್ಬಿಐ ಕೂಡ ಇತ್ತೀಚಿನ ಬೆಳವಣಿಗೆಯಿಂದಾಗಿ ನಷ್ಟದ ಭೀತಿಯಲ್ಲಿದೆ. ಎಸ್ಬಿಐ ಷೇರು ಮೌಲ್ಯದಲ್ಲಿಯೂ ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಭಾರೀ ಕುಸಿತವಾಗಿದೆ. ಆದರೆ, ಆರ್ಬಿಐ ಮಾನದಂಡದ ಪ್ರಕಾರ, ಇತಿಮಿತಿಯ ಒಳಗೇ ಅದಾನಿ ಸಮೂಹದ ಕಂಪನಿಗಳಿಗೆ ಸಾಲ ನೀಡಲಾಗಿದೆ ಎಂದು ಬ್ಯಾಂಕ್ ಹೇಳಿದೆ. ಯಾವುದೇ ಕಂಒನಿಗಳ ಸಮೂಹಕ್ಕೆ ಶೇ 25ಕ್ಕಿಂತ ಹೆಚ್ಚಿನ ಸಾಲ ನೀಡಲು ಆರ್ಬಿಐ ನಮಗೆ ಅನುಮತಿಸಿಲ್ಲ. ಆ ಮಿತಿಯ ಒಳಗೆಯೇ ನಾವು ಸಾಲ ನೀಡಿದ್ದೇವೆ ಎಂದು ಎಸ್ಬಿಐ ಹೇಳಿದೆ.
ಎಸ್ಬಿಐ, ಎಲ್ಐಸಿ ಷೇರು ಮೌಲ್ಯದಲ್ಲಿ ಕುಸಿತ
ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಕುಸಿತವಾದ ಬೆನ್ನಲ್ಲೇ ಅದರ ಜತೆ ಸಂಬಂಧ ಹೊಂದಿರುವ ಎಲ್ಐಸಿ ಹಾಗೂ ಎಸ್ಬಿಐ ಷೇರು ಮೌಲ್ಯದಲ್ಲಿಯೂ ಕುಸಿತವಾಗಿದೆ. ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ ಎಸ್ಬಿಐ ಷೇರು ಮೌಲ್ಯದಲ್ಲಿ ಶೇ 28.75ರಷ್ಟು ಕುಸಿತ ದಾಖಲಾಗಿತ್ತು. ಮತ್ತೊಂದೆಡೆ, ಎಲ್ಐಸಿ ಷೇರು ಮೌಲ್ಯದಲ್ಲಿ ಶೇ 23.45ರಷ್ಟು ಕುಸಿತವಾಗಿದೆ.
ಉದ್ಯಾವರ : ಪಾಪನಾಶಿನಿ ಹೊಳೆಯ ಸೇತುವೆಯ ಮೇಲೆ ಸ್ಕೂಟರ್ ಪತ್ತೆ ; ವ್ಯಕ್ತಿ ಹೊಳೆಗೆ ಹಾರಿರುವ ಶಂಕೆ ಉಡುಪಿ: ಉದ್ಯಾವರ…
ಮಂಗಳೂರು: ಕಾಂಗ್ರೆಸ್ ಗಾಗಿ ಕೆಲಸ ಮಾಡದವರು ಪಕ್ಷದ ಬಗ್ಗೆ ಮಾತನಾಡುವುದು ಬೇಡ: ಸಚಿವ ಯು.ಟಿ.ಖಾದರ್ ಮಂಗಳೂರು: ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ…
ಉಡುಪಿ: ನೀಟ್ ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಶಾಸಕ ಯಶ್‌ಪಾಲ್ ಸುವರ್ಣಗೆ ವ್ಯಾಪಕ ಶ್ಲಾಘನೆ…
ಕಾರ್ಕಳ :ಯಕ್ಷರಂಗಾಯಣ ದ ಹೆಸರು ಬದಲಾವಣೆಗೆ ಶಾಸಕ ಸುನಿಲ್ ಕುಮಾರ್ ಆಕ್ರೋಶ ಮೂಲ ಹೆಸರನ್ನೇ ಉಳಿಸಿಕೊಳ್ಳಲು ಸರಕಾರಕ್ಕೆ ಆಗ್ರಹ ಕಾರ್ಕಳ:…
ಟಿಎಂಸಿ ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿ ವಜಾ ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು…
ಉಡುಪಿ : ಹೆಣ್ಣು ಮಗುವಿನ ಅಕ್ರಮ ಮಾರಾಟ ಪ್ರಕರಣ ; ವೈದ್ಯ ಸಹಿತ ನಾಲ್ವರು ಆರೋಪಿಗಳ ಬಂಧನ ಉಡುಪಿ :…