ಮೈಸೂರು: ‘ಮೂರು ಶಾಪಗಳು ಹಾಗೂ ಅಧಿಕಾರದಲ್ಲಿದ್ದಾಗ ತೋರಿದ ದರ್ಪ, ಅಹಂಕಾರದಿಂದ ಕಾಂಗ್ರೆಸ್ ದೂಳೀಪಟವಾಗುತ್ತಿದೆ’ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲು ಬಿಜೆಪಿ ಆಯೋಜಿಸಿರುವ ‘ಜನ ಸೇವಕ್’ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಗಾಂಧೀಜಿ ಹೆಸರು ಹೇಳಿಕೊಂಡು ಅಧಿಕಾರಕ್ಕೇರಿದ ಕಾಂಗ್ರೆಸ್ ಪಕ್ಷವು ಅವರ ವಿಚಾರಧಾರೆ, ಗ್ರಾಮ ಸ್ವರಾಜ್ಯವನ್ನು ಮರೆಯಿತು. ಮತ ಬೇಟೆಗಾಗಿ ಅಂಬೇಡ್ಕರ್ ಫೋಟೊ ಬಳಸುವ ಈ ಪಕ್ಷವು ಅವರು ಜೀವಂತವಾಗಿದ್ದಾಗ ಸರಿಯಾಗಿ ಗೌರವವನ್ನೇ ಕೊಡಲಿಲ್ಲ. ಹತ್ತಾರು ಚುನಾವಣೆಗಳಲ್ಲಿ ಗೋಮಾತೆಯ ಚಿಹ್ನೆ (ಹಸು ಹಾಗೂ ಕರು) ಅಡಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಆದರೆ, ಅದನ್ನು ಮರೆತು ಹಸು ಹಂತಕರಿಗೆ ಮಣೆ ನೀಡಿತು. ಗೋಮಾಂಸ ತಿನ್ನುವ ಹೇಳಿಕೆ ನೀಡಿ ದೇಶದ ಸಂಸ್ಕೃತಿಗೆ ಅವಮಾನ ಮಾಡುತ್ತಿದೆ’ ಎಂದರು.
‘ಹೀಗಾಗಿ, ಗಾಂಧಿ, ಅಂಬೇಡ್ಕರ್ ಹಾಗೂ ಗೋಹತ್ಯೆ ಶಾಪ ಕಾಂಗ್ರೆಸ್ ಪಕ್ಷವನ್ನು ತಟ್ಟಿದೆ. ಈಗ ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕಾಗಿ ಜಗಳ ನಡೆಯುತ್ತಿದೆ. ಸಿದ್ರಾಮಣ್ಣ ಟವೆಲ್ ಹಾಕಿದ್ದಾರೆ. ಅದನ್ನು ಎಳೆಯಲು ಡಿ.ಕೆ.ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ’ ಎಂದು ನುಡಿದರು.
ಕಾರ್ಕಳ: ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಾರ್ಕಳ: ನಾಪತ್ತೆಯಾಗಿದ್ದ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಬಳ್ಳಾರಿ: ಗಂಡನ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು…
ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ;ನೂತನ 'ಚಳಿಗಾಲದ ವೇಳಾಪಟ್ಟಿ ಪ್ರಕಟ ಮಂಗಳೂರು : ಕರಾವಳಿಯ ಪ್ರಯಾಣಿಕರಿಗೆ ದೇಶೀಯ ಹಾಗೂ…
ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…
ಉಡುಪಿ: ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…