ಬಳ್ಳಾರಿ: ಕಾಂಗ್ರೆಸ್ ನಿಂದ ಆಫರ್ ಬಂದಿರಲಿ, ಬರದಿರಲಿ, ಕರೆದಿರಬಹುದು. ಯಾರೇ ಕರೆದರೂ ಹೋಗಲು ನನ್ನ ಮನಸ್ಥಿತಿ ಇರಬೇಕು. ಬಿಜೆಪಿ ನನ್ನ ತಾಯಿ. ನನಗೆ ಗೌರವ ಕೊಟ್ಟಿರುವ ಕಾಂಗ್ರೆಸ್ ನವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ಬಿಜೆಪಿಯಲ್ಲಿ ರೆಬೆಲ್ ಆಗಿರುವ ಮಾಜಿ ಸಚಿವ ಶ್ರೀರಾಮುಲು ಅವರನ್ನು ಕಾಂಗ್ರೆಸ್ ನಾಯಕರು ಆಹ್ವಾನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.
ನಾವು ಒಳ್ಳೆಯವರಿದ್ದರೇನೆ ಕರೆಯುವುದು. ರಾಮುಲು ಒಳ್ಳೆಯವರಾಗಿ ಕಂಡಿದ್ದಾರೆ. ನನ್ನ ಮೇಲೆ ಗೌರವದಿಂದ ಇಟ್ಟಿದ್ದಾರೆ. ಅದಕ್ಕೆ ಆ ಗೌರವದಿಂದ ಕರೆಯುತ್ತಿದ್ದಾರೆ. ಕಾಂಗ್ರೆಸ್ ನವರು ರಾಜಕೀಯ ಹೊರತುಪಡಿಸಿ, ಅಭಿಮಾನದಿಂದ ಮಾತನಾಡಿದ್ದಾರೆ ಎಂದರು.
ನನ್ನ ನಿಲುವು ವೆರಿ ಕ್ಲಿಯರ್. ನಾನು ಬಿಜೆಪಿಯಲ್ಲೇ ಇರುತ್ತೇನೆ ಎಂದ ರಾಮುಲು ರಾಜ್ಯದಲ್ಲಿ ಎಲ್ಲಾ ಕಡೆ ರಾಮುಲು ಉಪ ಮುಖ್ಯಮಂತ್ರಿ ಆಗಬೇಕು ಎನ್ನುವುದಿತ್ತು. ಅಧಿಕಾರ ಶಾಶ್ವತ ಅಲ್ಲ ಎಂದರು.
ಇನ್ನೂ ಕಾಂಗ್ರೆಸ್ ಸೇರುತ್ತೀರಾ ಎನ್ನುವ ವಿಚಾರಕ್ಕೂ ಪ್ರತಿಕ್ರಿಯಿಸಿದ ರಾಮುಲು, ಮಾಧ್ಯಮದ ಮೂಲಕ ಕಾಂಗ್ರೆಸ್ ನವರು ಬಹಿರಂಗವಾಗಿ ಕರೆಯುತ್ತಿದ್ದಾರೆ. ಏನೇ ಮಾಡಬೇಕಿದ್ದರೂ ನಿಮ್ಮನ್ನೆಲ್ಲಾ ಕೂರಿಸಿಕೊಳ್ಳುತ್ತೇನೆ. ಎಲ್ಲವನ್ನೂ ಓಪನ್ ಆಗಿ ಹೇಳುತ್ತೇನೆ. ಹಾಗಿದ್ದಲ್ಲಿ ನಿಮಗೆ ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…
ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಉಬರ್' ಸೇವೆ ಆರಂಭ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ…
ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ…
ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ; ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ ಉಡುಪಿ: ಉಡುಪಿ…
ಇಂದಿನಿಂದ ಟೆಲಿಗ್ರಾಮ್ ಮೇಲಿನ ನಿಷೇಧ ತೆರವು: ಮೆಸೇಜ್ ಎಡಿಟಿಂಗ್ ನಿರ್ಬಂಧ ಜೂ. 30ರವರೆಗೆ ಮುಂದುವರಿಕೆ ನವದೆಹಲಿ : ನೀಟ್ -ಯುಜಿ…
246 ಕೋಟಿ ರೂ.ಗಳ 46 ಯೋಜನೆಗಳು ರದ್ದು; ದೇವಸ್ಥಾನಗಳ ಹಣ ಬೇರೆ ಕೆಲಸಕ್ಕೆ ಬಳಸುವಂತಿಲ್ಲ: ಸಿಎಂ ವಿಜಯ್ ಚೆನ್ನೈ: ತಮಿಳುನಾಡಿನಾದ್ಯಂತ…