ಬೆಂಗಳೂರು : ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಕ್ಷೇತ್ರಗಳಿಗೆ ಇದೀಗ ಕೈ ನಿಂದ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಹಿರಿಯ ಮುಖಂಡರ ನೇತೃತ್ವದ ವೀಕ್ಷಕರನ್ನು ರಚಿಸಿದೆ..
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ, ಶಾಕ್ ಕೊಟ್ಟಿದ್ದ ಅನರ್ಹ ಶಾಸಕರಿಗೆ, ಇದೀಗ ಕಾಂಗ್ರೆಸ್ ಮತ್ತೊಂದು ಶಾಕ್ ನೀಡಿದೆ. ಕಾಂಗ್ರೆಸ್, ಜೆಡಿಎಸ್ ನ ಅನರ್ಹಗೊಂಡ ಶಾಸಕರ 17 ಕ್ಷೇತ್ರಗಳಲ್ಲೂ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಹಿರಿಯ ಮುಖಂಡರ ನೇತೃತ್ವದ ತಂಡವನ್ನು ಕೈ ರಚಿಸಿದೆ.
ಈ ಕುರಿತು ಚರ್ಚೆ ನಡೆಸಿದ ಕಾಂಗ್ರೆಸ್ ನ ರಾಜ್ಯದ ಹಿರಿಯ ನಾಯಕರು, 17 ಅನರ್ಹ ಶಾಸಕರ ಕ್ಷೇತ್ರದಲ್ಲಿ ಉಪಚುನಾವಣೆಗೆ ಪೂರ್ವವಾಗಿ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು. ಈ ಬಳಿಕ 17 ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಉಸ್ತುವಾರಿಗಳನ್ನು ನೇಮಕ ಮಾಡಲು ತೀರ್ಮಾನಿಸಿದೆ. ಅದರಂತೆ ಈ ಕೆಳಗಿನ ನಾಯಕರಿಗೆ ಆಯಾ ಕ್ಷೇತ್ರದ ಉಸ್ತುವಾರಿಯ ಜವಾಬ್ದಾರಿಯನ್ನು ಹೊರಿಸಿದೆ.
ಆರ್. ಆರ್ ನಗರಕ್ಕೆ ಸಂಸದ ಡಿ.ಕೆ ಸುರೇಶ್, ಕೆ.ಆರ್ ಪುರಂ ಕ್ಷೇತ್ರಕ್ಕೆ ಕೆ.ಜೆ ಜಾರ್ಜ್, ಯಶವಂತಪುರ ಕ್ಷೇತ್ರಕ್ಕೆ ಎಂ.ಕೃಷ್ಣಪ್ಪ ಮತ್ತು ಜಮೀರ್ ಅಹ್ಮದ್ ಖಾನ್, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ ಮಾಗಡಿ ಬಾಲಕೃಷ್ಣ, ಕೆ.ಆರ್ ಪೇಟೆ ಕ್ಷೇತ್ರಕ್ಕೆ ಚಲುವರಾಯಸ್ವಾಮಿ, ಹುಣಸೂರು ಕ್ಷೇತ್ರಕ್ಕೆ ಮಾಜಿ ಸಚಿವ ಮಹದೇವಪ್ಪರನ್ನ ನೇಮಕ ಮಾಡಿದೆ.
ಹಾಗೆಯೇ ರಾಣಿಬೆನ್ನೂರು ಕ್ಷೇಥ್ರಕ್ಕೆ ಹೆಚ್ಎಂ ರೇವಣ್ಣ, ಗೋಕಾಕ್ ಗೆ ಶೀವಾನಂದ ಪಾಟೀಲ್, ಹೊಸಕೋಟೆ ಕೃಷ್ಣೇಭೈರೇಗೌಡ, ಮಸ್ಕಿ ಈಶ್ವರ್ ಖಂಡ್ರೆ, ಹಿರೇಕೆರೂರುಗೆ ಹೆಚ್.ಕೆ ಪಾಟೀಲ್, ಅಥಣಿ ಕ್ಷೇತ್ರಕ್ಕೆ ಎಂ.ಬಿ ಪಾಟೀಲ್, ಕಾಗವಾಡ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಅವರನ್ನ ಕಾಂಗ್ರೆಸ್ ನೇಮಕ ಮಾಡಿದೆ.
ಇನ್ನುಳಿದ ಕ್ಷೇತ್ರಗಳಿಗೂ ಸದ್ಯದಲ್ಲಿಯೇ ವೀಕ್ಷಕರನ್ನು ನೇಮಿಸಲಿರುವ ಕಾಂಗ್ರೆಸ್, ಈ ನಾಯಕರು ಆಯಾ ಜವಾಬ್ದಾರಿ ವಹಿಸಿದ ಕ್ಷೇತ್ರಗಳಿಗೆ ತೆರಳಿ, ಕಾರ್ಯಕರ್ತರ ಜೊತೆಗೆ ಅಲ್ಲಿನ ಸ್ಥಳೀಯ ಮುಖಂಡರ ಜೊತೆಗೆ ಸಭೆ ನಡೆಸಿ, ಚರ್ಚೆ ನಡೆಸಿ, ಪಕ್ಷ ಬಲವರ್ಧನೆಗೆ ಪ್ರಯತ್ನ ನಡೆಸಲಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…