Featured

ಅಪಘಾತದಲ್ಲಿ ಪತ್ನಿ ಸಾವು : ನೊಂದ ಪತಿ ನೇಣಿಗೆ ಶರಣು – Vishwanews24

ಅಪಘಾತದಲ್ಲಿ ಪತ್ನಿ ಸಾವು – ನೊಂದ ಪತಿ ನೇಣಿಗೆ ಶರಣು

ಲಖನೌ:  ಉತ್ತರ ಪ್ರದೇಶದಲ್ಲೊಬ್ಬ ವ್ಯಕ್ತಿಯು, ಅಪಘಾತದಲ್ಲಿ ಪತ್ನಿ ತೀರಿಕೊಂಡ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್‌ನೋಟ್‌ ಬರೆದಿರುವ ಆತ, “ನಾವು ಇದ್ದರೂ ಜತೆಗೇ, ಸತ್ತರೂ ಜತೆಗೇ” ಎಂಬುದಾಗಿ ಬರೆದಿದ್ದಾರೆ.

ಆರು ತಿಂಗಳ ಹಿಂದೆ 36 ವರ್ಷದ ಯೋಗೇಶ್‌ ಕುಮಾರ್‌ ಹಾಗೂ 28 ವರ್ಷದ ಮಣಿಕರ್ಣಿಕಾ ಕುಮಾರಿ ಮದುವೆಯಾಗಿದ್ದರು. ಇಬ್ಬರೂ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನೆಲೆಸಿದ್ದರು. ಮಣಿಕರ್ಣಿಕಾ ಕುಮಾರಿ ನರ್ಸ್‌ ಆಗಿದ್ದರು. ಯೋಗೇಶ್‌ ಕುಮಾರ್‌ ಟೀಚರ್‌ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರ ದಾಂಪತ್ಯವೂ ಸುಮಧುರವಾಗಿತ್ತು. ಆದರೆ, ಕಳೆದ ಸೋಮವಾರ (ಏಪ್ರಿಲ್‌ 22) ಮಣಿಕರ್ಣಿಕಾ ಕುಮಾರಿ ಅವರು ತಡಿಯಾವಾಣ ಆರೋಗ್ಯ ಕೇಂದ್ರಕ್ಕೆ ತೆರಳುವಾಗ ಅಪರಿಚಿತ ವಾಹನವು ಮಣಿಕರ್ಣಿಕಾ ಕುಮಾರಿ ಅವರ ಸ್ಕೂಟಿಗೆ ಡಿಕ್ಕಿಯಾಗಿತ್ತು.

ಲಖನೌ-ಹರ್ದೋಯಿ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮಣಿಕರ್ಣಿಕಾ ಕುಮಾರಿ ಮೃತಪಟ್ಟಿದ್ದರು. “ಸುರ್ಸಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ. ಮಣಿಕರ್ಣಿಕಾ ಕುಮಾರಿ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಇದಾದ ಬಳಿಕ ಅವರು ಮೃತಪಟ್ಟಿದ್ದರು. ಮಣಿಕರ್ಣಿಕಾ ಅವರ ಕಚೇರಿಯ ಗುರುತಿನ ಚೀಟಿ ಆಧಾರದ ಮೇಲೆ ಅವರ ಪತಿಗೆ ಕರೆ ಮಾಡಿ ವಿಷಯ ತಿಳಿಸಲಾಯಿತು” ಎಂದು ಸುರ್ಸಾ ಎಸ್‌ಎಚ್‌ಒ ಇಂದ್ರೇಶ್‌ ಕುಮಾರ್‌ ಯಾದವ್‌ ಮಾಹಿತಿ ನೀಡಿದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ?
ಪತ್ನಿಯ ಸಾವಿನಿಂದ ನೊಂದ ಪತಿಯು ಮನೆಗೆ ಬಂದವರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಬಳಿ ಡೆತ್‌ನೋಟ್‌ ಪತ್ತೆಯಾಗಿದ್ದು, “ನಾವು ಇದ್ದರೂ ಜತೆಯಾಗಿಯೇ, ಸತ್ತರೂ ಜತೆಯಾಗಿಯೇ” ಎಂಬುದಾಗಿ ಬರೆದಿದ್ದಾರೆ. ಪತ್ನಿಯ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋದ ಯೋಗೇಶ್‌ ಕುಮಾರ್‌ ಬಾಗಿಲು ಹಾಕಿಕೊಂಡಿದ್ದಾರೆ. ಎಷ್ಟು ಹೊತ್ತಾದರೂ ಬಾಗಿಲು ತೆರೆಯದ ಕಾರಣ ಪಕ್ಕದ ಮನೆಯವರು ಹೋಗಿ ನೋಡಿದಾಗ ಯೋಗೇಶ್‌ ಕುಮಾರ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

12 hours ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

13 hours ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

15 hours ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

15 hours ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

16 hours ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

16 hours ago