Featured

ಅಪಘಾತದಲ್ಲಿ ಸತ್ತರೆ ಮಗನ ಕಾಲೇಜು ಶುಲ್ಕ ಸರ್ಕಾರ ಭರಿಸುತ್ತದೆಂದು ಬಸ್ಸಿನ ಮುಂದೆ ಹಾರಿದ ಪ್ರಾಣಬಿಟ್ಟ ತಾಯಿ – Vishwanews24

ಅಪಘಾತದಲ್ಲಿ ಸತ್ತರೆ ಮಗನ ಕಾಲೇಜು ಶುಲ್ಕ ಸರ್ಕಾರ ಭರಿಸುತ್ತದೆಂದು ಬಸ್ಸಿನ ಮುಂದೆ ಹಾರಿದ ಪ್ರಾಣಬಿಟ್ಟ ತಾಯಿ

ಚೆನ್ನೈ: ತಾನು ಸತ್ತರೆ ಮಗನ ಕಾಲೇಜು ಶುಲ್ಕವನ್ನು ಸರ್ಕಾರ ಭರಿಸುತ್ತದೆ ಎಂದು ಮಹಿಳೆಯೊಬ್ಬರು ಚಲಿಸುತ್ತಿರುವ ಬಸ್ಸಿನ ಮುಂದೆ ಹಾರಿ ಪ್ರಾಣಬಿಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಪಾಪತಿ(45) ಮೃತ ಮಹಿಳೆ.

ಕಳೆದ 15 ವರ್ಷದಿಂದ ಗಂಡನಿಂದ ದೂರವಾಗಿ ಕಷ್ಟಪಟ್ಟು ಮಗನನ್ನು ಸಾಕಿ ಬೆಳೆಸಿದ ಪಾಪತಿ ಸೇಲಂನ ಕಲೆಕ್ಟರ್ ಕಛೇರಿಯಲ್ಲಿ ಕಳೆದ ಕೆಲ ಸಮಯದಿಂದ ಸ್ವಚ್ಛತೆಯ ಕೆಲಸವನ್ನು ಮಾಡುತ್ತಿದ್ದರು.

ಮಗನ ಕಾಲೇಜು ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ ಪಾಪತಿ ಖಿನ್ನತೆಗೆ ಒಳಗಾಗಿದ್ದರು. ಈ ವೇಳೆ ಯಾರೋ ಒಬ್ಬರು ಪಾಪತಿಯ ಬಳಿ “ನೀನು ಅಪಘಾತದಲ್ಲಿ ಸತ್ತರೆ ನಿನ್ನ ಮಗನ ಕಾಲೇಜು ಶುಲ್ಕದೊಂದಿಗೆ, ಆತನ ಭವಿಷ್ಯವನ್ನು ಸರ್ಕಾರ ನೋಡಿಕೊಳ್ಳುತ್ತದೆ” ಎಂದಿದ್ದರು. ಮೊದಲೇ ಖಿನ್ನತೆಗೆ ಒಳಗಾಗಿದ್ದ ಪಾಪತಿ ಈ ಮಾತನ್ನು ನಿಜವೆಂದು ನಂಬಿ ಚಲಿಸುತ್ತಿರುವ ಬಸ್ಸಿನ ಮುಂದೆ ಹೋಗಿ ನಿಂತಿದ್ದಾರೆ. ವೇಗವಾಗಿ ಬರುತ್ತಿದ್ದ ಬಸ್‌ ಪಾಪತಿ ಅವರ ಮೇಲೆ ಹರಿದಿದೆ.

ಜೂ.28 ರಂದು ಘಟನೆ ನಡೆದಿದ್ದು, ಸಾವಿನ ಹಿಂದಿನ ಕಾರಣ ತಡವಾಗಿ ಬೆಳಕಿಗೆ ಬಂದಿದೆ. ಬಸ್ಸಿನ ಮುಂದೆ ಹಾರುವ ಮುನ್ನ ಅದೇ ದಿನ ಪಾಪತಿ ಮತ್ತೊಂದು ಬಸ್ಸಿನ ಮುಂದೆ ಹಾರಲು ಯತ್ನಿಸಿದ್ದರು. ಆದರೆ ಆ ವೇಳೆ ದ್ವಿಚಕ್ರ ವಾಹನ ಅವರಿಗೆ ಢಿಕ್ಕಿ ಹೊಡೆದಿತ್ತು ಎಂದು ವರದಿ ತಿಳಿಸಿದೆ.

Vishwa News 24

Recent Posts

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ – vishwanews24

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…

14 hours ago

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು – vishwanews24

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…

15 hours ago

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ – vishwanews24

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…

15 hours ago

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ – vishwanews24

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…

16 hours ago

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ – vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…

16 hours ago

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

3 days ago