Featured

ಅಬುಧಾಬಿಯಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಪ್ರಧಾನಿ ಮೋದಿ.. ; 2020ಕ್ಕೆ ಮುಸ್ಲಿಂ ರಾಷ್ಟ್ರದಲ್ಲಿ ಹಾರಾಡಲಿದೆ ಕೇಸರಿ ಪತಾಕೆ..

ವಸುದೈವ ಕುಟುಂಬದ ತತ್ವ ಸಾಕಾರವಾಗುತ್ತಿದೆ ಎನ್ನುವುದಕ್ಕೆ ಅತ್ಯುತ್ತಮ ಉದಾರಹರಣೆಯಾಗಿ ನಿಂತಿರುವುದೇ ವಿಶ್ವದ ಅನೇಕ ರಾಷ್ಟ್ರಗಳು ಹಿಂದೂ ಧರ್ಮವನ್ನು ಅಪ್ಪಿಕೊಳ್ಳುತ್ತಿರುವುದು. ಅದರ ಜೊತೆಗೆ ತಮ್ಮ ರಾಷ್ಟ್ರಗಳಲ್ಲಿ ಹಿಂದೂ ದೇವಾಲಯಗಳನ್ನು ನಿರ್ಮಿಸುತ್ತಿರುವುದು!! ಇದೆಲ್ಲವೂ ಸಾಧ್ಯವಾಗಿರೋದು ಮಾತ್ರ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಅನ್ನೋದು ಅಕ್ಷರಶಃ ನಿಜ..

ಕೆಲ ತಿಂಗಳುಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಯುನೈಟೆಡ್ ಅರಬ್ ಎಮರೈಟ್ಸ್ (ಯುಎಇ) ಜತೆ ಐದು ಮಹತ್ವದ ಒಪ್ಪಂದಗಳಿಗೆ ಅಂಕಿತ ಹಾಕಿದ್ದಾರಲ್ಲದೇ ಮುಸ್ಲಿಂ ರಾಷ್ಟ್ರ ಯುಎಇಯಲ್ಲಿ ಮೊದಲ ಹಿಂದೂ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನೆರವೇರಿಸಿ ಮುಸ್ಲಿಂ ರಾಷ್ಟ್ರದಲ್ಲಿರುವ ಏಕೈಕ ದೇವಾಲಯವನ್ನು ನಿರ್ಮಿಸಲು ಅಡಿಪಾಯವನ್ನು ಹಾಕಿದ್ದರು.. ಆದರೆ ಇದೀಗ ಅಬುಧಾಬಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊತ್ತ ಮೊದಲ ಹಿಂದೂ ದೇಗುಲ 2020ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಅತೀ ದೊಡ್ಡ ಹಿಂದೂ ದೇವಾಲಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಪ್ರಧಾನಿ ನರೇಂದ್ರ ಮೋದಿ ದುಬೈನ “ಬೊಚಸನ್ವಾಸಿ ಶ್ರೀ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ್ ಸಂಸ್ಥಾ (ಬಿಎಪಿಎಸ್)” ದೇವಾಲಯ ನಿರ್ಮಾಣ ಯೋಜನೆಯನ್ನು ಉದ್ಘಾಟನೆ ಮಾಡಿದ್ದರು!! 55 ಸಾವಿರ ಚದರ ಮೀಟರ್ ವಿಸ್ತೀರ್ಣ ಜಾಗದಲ್ಲಿ ನಿರ್ಮಾಣವಾಗಲಿರುವ ಅಬುಧಾಬಿಯಲ್ಲಿನ ಸ್ವಾಮೀ ನಾರಾಯಣ ದೇವಾಲಯದಲ್ಲಿ ಪ್ರಾರ್ಥನಾ ಮಂದಿರ, ಅಧ್ಯಯನ ಕೊಠಡಿ, ಮಕ್ಕಳಿಗಾಗಿ ಕ್ರೀಡಾಂಗಣ, ಉದ್ಯಾನವನ, ನೀರಿನ ಕಾರಂಜಿ, ಆಹಾರ ಮಳಿಗೆ, ಪುಸ್ತಕ ಮತ್ತು ಉಡುಗೊರೆ ನೀಡಲು ಮಳಿಗೆಗಳು ಈ ದೇವಾಲಯದ ಜಾಗದಲ್ಲಿ ಇರಲಿದೆ.

ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮಕ್ಕೆ ಮಾರುಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಅದಕ್ಕೆ ಸಾಕ್ಷಿ ಎನ್ನುವಂತೆ, ಶೇಕಡಾ 64ರಷ್ಟು ಕ್ರಿಶ್ಚಿಯನ್ನರೇ ತುಂಬಿ ತುಳುಕಾಡುತ್ತಿರುವ ಹಿಂದೂ ರಾಷ್ಟ್ರವೇ ಅಲ್ಲದ ಆಸ್ಟ್ರೇಲಿಯಾದಲ್ಲೂ ಹಿಂದೂ ಧರ್ಮದ ದೇವರುಗಳಿಗೆ ಅಲ್ಲಿನ ಸರ್ಕಾರವೇ ಮಾರು ಹೋಗಿದೆ. ಹೌದು… ಆಸ್ಟ್ರೇಲಿಯಾದ ವಿಕ್ಟೋರಿಯನ್ ಸರಕಾರವೇ ಶಿವ ವಿಷ್ಣು ದೇವಾಲಯ ನಿರ್ಮಿಸಲು 160,000 ಡಾಲರ್ ಹಣವನ್ನು ಸಹಾಯಧನ ನೀಡಿದೆ. ಅಷ್ಟೇ ಅಲ್ಲದೇ, ವಿಕ್ಟೋರಿಯಾದಲ್ಲಿರುವ ಹಿಂದೂ ಸೊಸೈಟಿಯ ಹಿಂದೂ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರ ಮತ್ತು ಶಿವ ವಿಷ್ಣು ದೇವಾಲಯದ ಅಭಿವೃದ್ಧಿಗೆ ವಿಕ್ಟೋರಿಯನ್ ಸರಕಾರ ಹಣ ನೀಡುವುದಾಗಿ ಘೋಷಣೆ ಮಾಡಿದೆ.

ಅಬುದಾಬಿ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆಡ್ ಅಲ್ ನೆಹ್ಯಾನ್ ಅವರು ಜೈ ಶ್ರೀರಾಮ್ ಎನ್ನುವ ಮೂಲಕ ಭಾಷಣ ಆರಂಭಿಸಿದ್ದು, ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗೆ ಪ್ರಧಾನಿ ನರೇಂದ್ರ ಮೋದಿಯವರು ತಾನು ವಿದೇಶಿ ಪ್ರವಾಸ ಕೈಗೊಂಡಿದ್ದೆಲ್ಲೆಡೆ ತನ್ನ ಧರ್ಮದ ಸಾರವನ್ನು ಎಲ್ಲೆಡೆ ಪ್ರಚುರ ಪಡಿಸುತ್ತಿದ್ದು, ಅದಕ್ಕೆ ಸಾಕ್ಷಿಯಾಗಿದೆ ಅಬುಧಾಬಿನಲ್ಲಿ ತಲೆಯೆತ್ತಲಿರುವ ದೇಗುಲ.

ಒಟ್ಟಿನಲ್ಲಿ ಮುಸ್ಲಿಂ ದೇಶದಲ್ಲಿ ತಲೆ ಎತ್ತಲಿರುವ ಮೊದಲ ದೇವಸ್ಥಾನ ಎಂದೆನಿಸಿಕೊಳ್ಳಲಿರುವ ದೇವಾಲಯವು ಯುಎಇನ ಅತೀ ದೊಡ್ಡ ಹಿಂದೂ ದೇವಾಲಯವಾಗಲಿದ್ದು, 2020ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮುಸ್ಲಿಂ ರಾಷ್ಟ್ರವಾಗಿರುವ ಅಬುಧಾಬಿನಲ್ಲಿ ಕೇಸರಿ ಪತಾಕೆ ಹಾರಾಡಲಿರುವುದಂತೂ  ನಿಜ.

 

ಜಾಹಿರಾತು: vyshali Bar& Family Restaurant kaup: 

prop: NAYESH P SHETTY: 9620427036

Vishwa News 24

Recent Posts

ಮುಂಬೈ: ಹೆಂಡತಿ ಮೇಲಿನ ಅನುಮಾನಕ್ಕೆ ಮನೆ ತುಂಬಾ ಸಿಸಿಟಿವಿ ಅಳವಡಿಸಿದ್ದ ಪತಿ ; ಕಿರುಕುಳ ತಾಳಲಾರದೇ ಪತ್ನಿ ಆತ್ಮಹತ್ಯೆ – vishwanews24

ಮುಂಬೈ: ಹೆಂಡತಿ ಮೇಲಿನ ಅನುಮಾನಕ್ಕೆ ಮನೆ ತುಂಬಾ ಸಿಸಿಟಿವಿ ಅಳವಡಿಸಿದ್ದ ಪತಿ ; ಕಿರುಕುಳ ತಾಳಲಾರದೇ ಪತ್ನಿ ಆತ್ಮಹತ್ಯೆ ಮುಂಬೈ:…

41 minutes ago

ಕಾಪು : ಸ್ಕೂಟಿಗೆ ಬಸ್ ಢಿಕ್ಕಿ ; ಸವಾರ ಗಂಭೀರ – vishwanews24

ಕಾಪು : ಸ್ಕೂಟಿಗೆ ಬಸ್ ಢಿಕ್ಕಿ ; ಸವಾರ ಗಂಭೀರ ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕಾಪು ಸಾಯಿ ಸರ್ವಿಸ್…

1 hour ago

ಬೆಳ್ತಂಗಡಿ ಸೇತುವೆ ಪುನಃ ನಿರ್ಮಾಣ ಕಾಮಗಾರಿ: ಸಂಚಾರ ಮಾರ್ಗ ಬದಲಾವಣೆ – vishwanews24

ಬೆಳ್ತಂಗಡಿ ಸೇತುವೆ ಪುನಃ ನಿರ್ಮಾಣ ಕಾಮಗಾರಿ: ಸಂಚಾರ ಮಾರ್ಗ ಬದಲಾವಣೆ ಮಂಗಳೂರು: ಬೆಳ್ತಂಗಡಿ ತಾಲೂಕಿನ ಉಜಿರೆ-ಇಂದಬೆಟ್ಟು ಜಿಲ್ಲಾ ಮುಖ್ಯ ರಸ್ತೆಯಲ್ಲಿನ…

1 hour ago

ಅನುಮತಿ ಇಲ್ಲದೆ ವ್ಯಕ್ತಿಯೊಬ್ಬರ ಖಾಸಗಿ ಚಿತ್ರ ಹಂಚಿಕೊಂಡರೆ ತಕ್ಷಣ ಎಫ್‌ಐಆರ್ ಗೆ ಆದೇಶ – vishwanews24

ಅನುಮತಿ ಇಲ್ಲದೆ ವ್ಯಕ್ತಿಯೊಬ್ಬರ ಖಾಸಗಿ ಚಿತ್ರ ಹಂಚಿಕೊಂಡರೆ ತಕ್ಷಣ ಎಫ್‌ಐಆರ್ ಗೆ ಆದೇಶ ಬೆಂಗಳೂರು, : ವ್ಯಕ್ತಿಯೊಬ್ಬರ ಒಪ್ಪಿಗೆಯಿಲ್ಲದೆ ಅವರ…

1 hour ago

ನಾವೇನು ಆಪರೇಷನ್ ಮಾಡೋಣ? ನಮ್ಮದು ಸಣ್ಣ ಪಕ್ಷ :  ಹೆಚ್‌ಡಿಕೆ ವಾಗ್ದಾಳಿ – vishwanews24

ನಮ್ಮದು ಸಣ್ಣ ಪಕ್ಷ ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ ? :  ಹೆಚ್‌ಡಿಕೆ ವಾಗ್ದಾಳಿ ಬೆಂಗಳೂರು: ನಮ್ಮದು ಸಣ್ಣ…

2 hours ago

ಮಂಗಳೂರು : ಶಾಸ್ತ್ರೀಯ ನೃತ್ಯ ಕಲಾವಿದೆಯಾಗಿ ರೆಮೋನಾ ಎವೆಟ್ ಪೆರೇರಾ ಆಯ್ಕೆ – vishwanews24

ಮಂಗಳೂರು : ಶಾಸ್ತ್ರೀಯ ನೃತ್ಯ ಕಲಾವಿದೆಯಾಗಿ ರೆಮೋನಾ ಎವೆಟ್ ಪೆರೇರಾ ಆಯ್ಕೆ ಮಂಗಳೂರು : ಮಂಗಳೂರಿನ ಸಂತ ಅಲೋಸಿಯೆಸ್ ಪರಿಗಣಿತ…

2 hours ago