Featured

ಅಮಾಯಕರನ್ನು ಬಂಧಿಸಿದ ಪೊಲೀಸರ ವಿರುದ್ಧ SDPI ಕಾನೂನಾತ್ಮಕ ಹೋರಾಟ ನಡೆಸಲಿದೆ : ಅನ್ವರ್‌ ಸಾದಾತ್ – Vishwanews24

ಸಂಘಪರಿವಾರವನ್ನು ತೃಪ್ತಿ ಪಡಿಸಲು ಮಂಗಳೂರು ಪೊಲೀಸರಿಂದ ಎಸ್‌ಡಿಪಿಐ ಕಾರ್ಯಕರ್ತರ ಬಂಧನ..

SDPI ಬೆಳವಣಿಗೆ ಸಹಿಸದೇ ಸಂಘ ಪರಿವಾರದ ಅಣತಿಯಂತೆ ಪೊಲೀಸ್ ಇಲಾಖೆ ವರ್ತಿಸುತ್ತಿದೆ..

ಮಂಗಳೂರು: SDPI ಸಮಾವೇಶಕ್ಕೆ ತೆರಳುವ ವೇಳೆ ಪೊಲೀಸರನ್ನು ನಿಂದಿಸಲಾಗಿದೆ ಎಂದು ಆರೋಪಿಸಿ ಸುಮಾರು 10ಕ್ಕೂ ಹೆಚ್ಚು SDPI ಕಾರ್ಯಕರ್ತರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ SDPI, ಘಟನೆಯಲ್ಲಿ ಹಲವು ಅಮಾಯಕರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿದೆ.ಮಾಧ್ಯಮಗಳೊಂದಿಗೆ ಮಾತನಾಡಿದ SDPI ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರ್, ಪೊಲೀಸ್ ನಿಂದನೆ ಘೋಷಣೆ ಖಂಡನೀಯವಾಗಿದ್ದು, ನಾಗರಿಕ ಸಮಾಜ ಒಪ್ಪುವುದಿಲ್ಲ.

ಪೊಲೀಸರ ಬಗ್ಗೆ SDPI ಗೌರವ ಹೊಂದಿದ್ದು, ವೀಡಿಯೋ ವೈರಲ್ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳನ್ನು SDPI ನಾಯಕರು ಸಂಪರ್ಕಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು ಎಂದು ಸ್ಪಷ್ಟನೆ ನೀಡಿದರು.ಕಳೆದ ತಿಂಗಳು ಮಂಗಳೂರಿನಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಪ್ರಮೋದ್ ಮುತಾಲಿಕ್ ಗೆ ಪೊಲೀಸ್ ಆಯುಕ್ತರು ರಾಜಾತಿಥ್ಯ ನೀಡಿದ್ದರು. ಇದನ್ನು SDPI ನಾಯಕರು ಖಂಡಿಸಿ ಪೋಸ್ಟ್ ಮಾಡಿದ್ದರು.

ಆ ಬಳಿಕ SDPI ಅನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಮುಂದಾಗಿದೆ. ಇದು ಪೊಲೀಸ್ ಆಯುಕ್ತರಿಗೆ ಶೋಭೆ ತರುವುದಿಲ್ಲ ಎಂದು ಸಾದಾತ್ ಹೇಳಿದರು.ಘಟನೆಯಲ್ಲಿ ಹಲವು ಅಮಾಯಕರನ್ನು ಬಂಧಿಸಲಾಗುತ್ತಿದ್ದು, ಕೆಲವೇ ಜನರು ಮಾಡಿದ ತಪ್ಪಿಗೆ ಹಲವರನ್ನು ಬಂಧಿಸಲಾಗಿದೆ. ಸಮಾವೇಶದಲ್ಲಿ ಭಾಗವಹಿಸದವರನ್ನೂ ಬಂಧಿಸಲಾಗಿದೆ. ಇದರಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರೂ ಸೇರಿದ್ದಾರೆ. ಬೆಂಗಳೂರು, ಮೈಸೂರಿಗೆ ತೆರಳಿ ಕೆಲವರನ್ನು ಬಂಧಿಸಲಾಗಿದ್ದು, ಈ ವೇಳೆ ಜೊತೆಗಿದ್ದವರನ್ನು ಬಂಧಿಸಲಾಗಿದೆ. ಆಶ್ರಯ ನೀಡಿದ ಆರೋಪದಲ್ಲಿ ರೂಂ ಮೇಟ್ ಗಳನ್ನೂ ಬಂಧಿಸಲಾಗಿದೆ ಎಂದು ಅವರು ಆರೋಪಿಸಿದರು.

ಸಮಾವೇಶದ ಮುನ್ನವೇ ಘೋಷಣೆ ಕೂಗಿರುವ ವೀಡಿಯೋ ವೈರಲ್ ಆಗಿತ್ತು. SDPI ಬೆಳವಣಿಗೆ ಸಹಿಸದೇ ಸಂಘ ಪರಿವಾರದ ಅಣತಿಯಂತೆ ಪೊಲೀಸ್ ಇಲಾಖೆ ವರ್ತಿಸುತ್ತಿದೆ. ಜಗದೀಶ್ ಕಾರಂತ ಈ ಹಿಂದೆ ಹಲವು ಬಾರಿ ಪೊಲೀಸರಿಗೆ, ಡಿಸಿ ಗೆ ಬಹಿರಂಗ ಧಮ್ಕಿ ಹಾಕಿದ್ದರು. ಆದರೆ ಕಾರಂತ ಬಂಧಿಸಲು ಇಲ್ಲಿನ ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ಅನ್ವರ್ ಸಾದಾತ್ ಹೇಳಿದರು.

ಅಮಾಯಕರನ್ನು ಬಂಧಿಸಿದ ಪೊಲೀಸರ ವಿರುದ್ಧ SDPI ಕಾನೂನಾತ್ಮಕ ಹೋರಾಟ ನಡೆಸಲಿದೆ. ಅಲ್ಲದೆ, ಮಾನವ ಹಕ್ಕು ಆಯೋಗಕ್ಕೂ SDPI ದೂರು ನೀಡಲಿದೆ. ಘೋಷಣೆ ಕೂಗಿದವರನ್ನು ಆರೋಪಿಗಳೆಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಘಟನೆ ಸಂಬಂಧಪಡದವರನ್ನು ಬಂಧಿಸಲಾಗಿದೆ. ಸಂಘ ಪರಿವಾರವರನ್ನು ತೃಪ್ತಿ ಪಡಿಸಲು ಈ ರೀತಿ ಮಾಡಲಾಗಿದೆ. ಇದರ ಹಿಂದೆ ಇಲ್ಲಿನ ಶಾಸಕ, ಸಂಸದರ ಕೈವಾಡವೂ ಇದೆ ಅವರು ಎಂದು ಆರೋಪಿಸಿದರು

Vishwa News 24

Recent Posts

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ – vishwanews24

ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್‌ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…

3 hours ago

ಮಹಾರಾಷ್ಟ್ರ : ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ- vishwanews24

ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…

3 hours ago

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  – vishwanews24

ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ  ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…

3 hours ago

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ – vishwanews24

ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…

4 hours ago

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ – vishwanews24

ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…

4 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

3 days ago