ಕಾರ್ಗಿಲ್ ಯುದ್ಧವಾಗಿ ಇಂದಿಗೆ 19 ವರ್ಷಗಳೇ ಕಳೆದಿವೆ. ಎಂದೂ ಮರೆಯದ ಅಮೋಘ ವಿಜಯದ ಮೆಲುಕು ಹಾಕೋಣ.. ಆ ಹುತಾತ್ಮ ಯೋಧರಿಗೆ ನಮಿಸೋಣ…
ಕಾಶ್ಮೀರದ ಶ್ರೀನಗರದಿಂದ 205ಕಿ.ಮೀ.ಗಳ ದೂರದಲ್ಲಿರುವ ಕಾರ್ಗಿಲ್ ಕಠಿಣವಾದ ನೀರ್ಗಲ್ಲುಗಳಿಂದ ಆವೃತವಾದ, ಪ್ರಪಂಚದ ಕೆಲವು ಅತ್ಯಂತ ಎತ್ತರದ ಪರ್ವತಗಳಿಂದ ಕೂಡಿದ ಲಡಾಖ್ ಶ್ರೇಣಿಗೆ ಸೇರಿದ ಪ್ರದೇಶ. ಶ್ರೀನಗರ ಮತ್ತು ಲೇಹ್ ಪ್ರದೇಶಕ್ಕೆ ಇರುವ ಏಕೈಕ ಭೂಮಾರ್ಗ. ಅತ್ಯಂತ ಕ್ಲಿಷ್ಟ ಮತ್ತು ದುರ್ಗಮವಾದ ಭೂ ಸರಹದ್ದು. ವರ್ಷದ ಮುಕ್ಕಾಲು ಅವಧಿಯಲ್ಲಿ 48 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಶೀತಲ ಮರಭೂಮಿ. 160ಕಿ.ಮೀ.ಗಳ ಹಿಮಚ್ಛಾದಿತ ಪರ್ವತ ಹೊಂದಿರುವ ಊಹಾತೀತ ಸ್ಥಳ.
ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಬೇಕು. ಸಿಯಾಚಿನ್ ನೀರ್ಗಲ್ಲಿನ ಮೇಲೆ ಸಂಪೂರ್ಣ ಒಡೆತನ ಹೊಂದಬೇಕೆಂಬ ದುರಾಸೆಗೆ ಮತ್ತು ಅಂತಾರಾಷ್ಟ್ರೀಯ ಗಮನ ತನ್ನತ್ತ ಸೆಳೆದುಕೊಳ್ಳಲು ಪಾಕ್ ಈ ಪ್ರದೇಶಕ್ಕೆ ತನ್ನ ಸೇನೆ ನುಗ್ಗಿಸಿತ್ತು. ಈ ಆಕ್ರಮಣಕ್ಕೆ ಪಾಕಿಸ್ತಾನಕ್ಕೀ ಸೇನೆ ಕೊಟ್ಟ ಹೆಸರು `ಆಪರೇಷನ್ ಬದ್ರ್’.
ಭಾರತೀಯ ಭೂಸೇನೆ ಮತ್ತು ವಾಯುಸೇನಾ ಪಡೆಗಳು ಜಂಟಿಯಾಗಿ ಮೇ ಮತ್ತು ಜುಲೈ 1999ರಲ್ಲಿ ಜಯಿಸಿದ್ದು ಕಾರ್ಗಿಲ್ ಕದನ. ಈ ಕ್ರಿಯೆಗೆ ಕೊಟ್ಟ ನಾಮಧೇಯ `ಆಪರೇಶನ್ ವಿಜಯ್’. ಭಾರತೀಯ ಸೇನಾ ಇತಿಹಾಸದಲ್ಲೇ ಅತ್ಯಂತ ಮಹತ್ತರವಾದ ವಿಜಯವದು. ಸಮುದ್ರಮಟ್ಟದಿಂದ ಅತೀ ಎತ್ತರ ಪ್ರದೇಶದಲ್ಲಿ ನಡೆದ ಮೊದಲ ಯುದ್ಧವೂ ಹೌದು. 60 ದಿನಗಳ ಕಾಲ ರಾತ್ರಿ ಹಗಲೂ ಸತತ ಕಾದಾಟದ ನಂತರ 572 ಭಾರತೀಯ ಯೋಧರು ದೇಶಕ್ಕಾಗಿ ಪ್ರಾಣ ತೆತ್ತಿದ್ದಕ್ಕೆ 1999ರ ಜುಲೈ 26ರಂದು ವಿಜಯ ಸಿಕ್ಕಿತು. ಸಿಪಾಯಿಗಳ ಗೌರವಾರ್ಥವಾಗಿ ಅಂದಿನಿಂದ ಈ ದಿನವನ್ನು ದೇಶದಾದ್ಯಂತ `ಕಾರ್ಗಿಲ್ ವಿಜಯ ದಿವಸ’ ಎಂದು ಆಚರಿಸಲಾಗುತ್ತದೆ..
ಕಾಲಮಿತಿ
ಯುದ್ಧ ನಡೆದ ಒಟ್ಟು ಅವಧಿ : 74 ದಿನಗಳು
ಯುದ್ಧಕ್ಷೇತ್ರದ ಒಟ್ಟು ಅವಧಿ : 150 ಕಿ.ಮೀ.
ಬಳಸಿದ ಬಲಾಬಲ
ಭಾರತೀಯ ಸೇನೆ : 20,000
ಪಾಕಿಸ್ತಾನಿ ಸೇನೆ : ಅಘೋಷಿತ
ಅತಿಕ್ರಮಣಕಾರಿಗಳು : 1,500
ಮಡಿದವರು
ಭಾರತಸೇನೆ : 407
ಗಾಯಗೊಂಡವರು : 584
ನಾಪತ್ತೆಯಾದವರು : 6
ಪಾಕ್ ಸೇನೆ ಮಡಿದವರು : 696
ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ಕನ್ನಡದ ಕೆಲವರು ಕಡುಗಲಿಗಳ ಕುರಿತು ಮಾಹಿತಿ..
* ಭಾರತೀಯ ವಾಯುಪಡೆಯ ಪ್ಲೈಟ್ ಲೆಫ್ಟಿನೆಂಟ್ ಎಂ.ಸುಬ್ರಹ್ಮಣ್ಯಂ (ಬೆಳಗಾವಿ)
* ಮಡಿವಾಳಪ್ಪ ನಾಯ್ಕರ್ (ಆಸುಂಡಿ ಗ್ರಾಮ, ಸವದತ್ತಿ ತಾಲೂಕು, ಬೆಳಗಾವಿ)
* ಸಿಪಾಯಿ ಧೋಂಡಿಬಾ ದೇಸಾಯಿ (ವಡಗಾಂವ, ಖಾನಾಪುರ, ತಾಲೂಕು, ಬೆಳಗಾವಿ)
ಸಿದ್ಧನಗೌಡ ಬಸನಗೌಡ ಪಾಟೀಲ, ಸಿ.ಆರ್.ಪಿ.ಎಫ್. (ಕೆರೂರು ಗ್ರಾಮ, ಚಿಕ್ಕೋಡಿ ತಾಲೂಕು, ಬೆಳಗಾವಿ ಜಿಲ್ಲೆ)
* ಅಪ್ಪಾಸಾಹೇಬ ಪೀರಪ್ಪ ಧನವಾಡೆ, ಸಿ.ಆರ್.ಪಿ.ಎಫ್. (ಇಂಗಳಿ ಗ್ರಾಮ, ಚಿಕ್ಕೋಡಿ ತಾಲೂಕು, ಬೆಳಗಾವಿ)
* ನಾಯಕ ಶಿವಬಸಯ್ಯ ಕುಲಕರ್ಣಿ, 20ನೆಯ ರಾಷ್ಟ್ರೀಯ ರೈಫಲ್ಸ್ (ಚೊಳಚಗುಡ್ಡ ಗ್ರಾಮ, ಬಾದಾಮಿ, ಬಾಗಲಕೋಟ ಜಿಲ್ಲೆ)
* ಸಿದ್ಧರಾಮಪ್ಪ (ರೇಕುಳಿ ಗ್ರಾಮ, ಬೀದರ್ ಜಿಲ್ಲೆ)
* ಲ್ಯಾನ್ಸ್ ಹವಿಲ್ದಾರ್ ಮಲ್ಲಯ್ಯ ಚನ್ನಬಸಯ್ಯ ಮೇಗಳಮಠ (ಅಳವಂಡಿ ಗ್ರಾಮ, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ)
* ಎಸ್.ಕೆ.ಮೇದಪ್ಪ, ಮರಾಠಾ ಲೈಟ್ ಇನ್‍ಫೆಂಟ್ರಿ (ಕಿರಂಗನದೂರು, ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ)
* ದಾವಲಸಾಬ್ ಅಲಿಸಾಬ್ ಕಂಬಾರ್, ಬಿ.ಎಸ್.ಎಫ್. (ಬಲವಟ್ ಗ್ರಾಮ, ಮುದ್ದೇಬಿಹಾಳ ತಾಲೂಕು, ಬಿಜಾಪುರ)
* ಸುಬೇದಾರ್ ಪೆಮ್ಮಂಡ ದೇವಯ್ಯ ಕಾವೇರಪ್ಪ (ವಿರಾಜಪೇಟೆ, ಕೊಡಗು ಜಿಲ್ಲೆ)
* ಲಾನ್ಸ್ ನಾಯಕ್ ಎಚ್.ವಿ.ವೆಂಕಟ್ (ಅಗ್ರಹಾರ ಗ್ರಾಮ, ಅರಕಲಗೂಡು ತಾಲೂಕು, ಹಾಸನ ಜಿಲ್ಲೆ)
* ಲಾನ್ಸ್ ನಾಯಕ್ ಯಶವಂತ ಕೋಲಕಾರ (ಮೇಕಲಮರಡಿ ಗ್ರಾಮ, ಬೈಲಹೊಂಗಲ ತಾಲೂಕು, ಬೆಳಗಾವಿ ಜಿಲ್ಲೆ)
* ದಿಲೀಪ ಪೀರಪ್ಪ ಪೋತ್ರಾಜ (ಗದ್ಯಾಳ ಗ್ರಾಮ, ಜಮಖಂಡಿ ತಾಲೂಕು, ಬಿಜಾಪುರ ಜಿಲ್ಲೆ)
* ಗೋವಿಂದ ಶೆಡೋಳೆ (ವರದಟ್ಟಿ ಗ್ರಾಮ, ಭಾಲ್ಕಿ ತಾಲೂಕು, ಬೀದರ ಜಿಲ್ಲೆ)
ಬನ್ನಿ ಕಾರ್ಗಿಲ್ ವಿಜಯದ ಭಾಗವಾದ ಕನ್ನಡಿಗರಿಗೆ ನಮಿಸೋಣ ..
ಪ್ರಧಾನಿಯಾಗಿ ಮೋದಿ ಸರ್ಕಾರಕ್ಕೆ 12 ವರ್ಷ: ನೆಹರೂ ದಾಖಲೆ ಮುರಿದ ನಮೋ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ…
ಉಡುಪಿ : ಜೂ.12 ರಂದು ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್…
ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಜೂನ್…
ಉಡುಪಿ : ಜೂ.11ರಂದು ಖಾಸಗಿ ಬಸ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ ಉಡುಪಿ : ರಾಜ್ಯದ ಖಾಸಗಿ ಬಸ್…
ಮಲ್ಪೆ ಬಂದರು ಪ್ರವೇಶ ದ್ವಾರ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭ :ಯಶ್ಪಾಲ್ ಸುವರ್ಣ ಮಳೆಗಾಲದ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರಿಕಾ…
ಗುರುತಿನ ಚೀಟಿ ಇಲ್ಲದೆ ಪಬ್, ಬಾರ್ ಮತ್ತು ಕ್ಲಬ್‌ಗಳಿಗೆ ಪ್ರವೇಶವಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು : ಅಪ್ರಾಪ್ತ…