ಮುಂಬೈ: ತಮ್ಮ ಮನೆ ಮತ್ತು ಕಚೇರಿ ನೆಲಸಮ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಏಕವಚನದಲ್ಲಿ ಪ್ರಹಾರ ನಡೆಸಿದ್ದಾರೆ.
ಶಿವಸೇನೆಯ ಬೆದರಿಕೆ ನಡುವೆಯೂ ಇಂದು ಮಧ್ಯಾಹ್ನ ಮುಂಬೈಗೆ ಬಂದಿಳಿದ ಕಂಗನಾ, ಟ್ವಿಟ್ಟರ್ ನಲ್ಲಿ ನೆಲಸಮವಾಗಿರುವ ಕಟ್ಟಡದ ವಿಡಿಯೋ ಹಾಕಿ ಪ್ರಜಾಪ್ರಭುತ್ವದ ಕೊಲೆ ಆಗುತ್ತಿದೆ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.
ಜೊತೆ ವಿಡಿಯೋ ಮೂಲಕ ಮಹಾರಾಷ್ಟ್ರ ಸರ್ಕಾರ ಮತ್ತು ಫಿಲಂ ಮಾಫಿಯಾ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.
ಉದ್ಧವ್ ಠಾಕ್ರೆ ಫಿಲಂ ಮಾಫಿಯಾ ಜೊತೆ ಶಾಮೀಲಾಗಿ ಮನೆ ನಾಶ ಮಾಡಿ ನನ್ನ ವಿರುದ್ಧ ಸೇಡು ತೀರಿಸಿಕೊಂಡೆ ಎಂದು ತಿಳಿದುಕೊಂಡಿದ್ದೀಯಾ?.
ಇಂದು ನನ್ನ ಮನೆ ನೆಲಸಮ ಆಗಿರಬಹುದು, ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ. ಇದು ಸಮಯದಾಟ, ಪ್ರತಿ ಬಾರಿ ಒಂದೇ ಆಗಿರಲ್ಲ.
ಕಾಶ್ಮೀರಿ ಪಂಡಿತರ ಮೇಲೆ ಏನಾಗುತ್ತಿತ್ತು ಎಂಬುವುದು ಇಂದು ನನಗೆ ಅರ್ಥವಾಗಿದೆ. ನಾನು ಕೇವಲ ಅಯೋಧ್ಯೆ ಮಾತ್ರವಲ್ಲ, ಕಾಶ್ಮೀರದ ಕುರಿತು ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಮಾತು ನೀಡುತ್ತೇನೆ.ಸಿನಿಮಾಗಳ ಮೂಲಕ ದೇಶದ ಜನರನ್ನ ಎಚ್ಚರಿಸುವ ಕೆಲಸ ಮಾಡುತ್ತೇನೆ.ಈ ರೀತಿ ಕೆಲಸಗಳ ನಡೆಯುತ್ತಿರುವ ಬಗ್ಗೆ ಕೇಳಿದ್ದೆ. ಆದ್ರೆ ಇಂದು ನನ್ನೊಂದಿಗೆ ನಡೆದಿದೆ.
ಉದ್ಧವ್ ಠಾಕ್ರೆಯ ಕ್ರೂರತ್ವದ ಭಯೋತ್ಪಾದನೆ ನನ್ನೊಂದಿಗೆ ನಡೆದಿರೋದು ಒಳ್ಳೆಯದು ಆಯ್ತು. ಕಾರಣ ಇದಕ್ಕೆ ಕೆಲ ಮಹತ್ವದ ಕಾರಣವಿದೆ.
ಜೈ ಹಿಂದ್, ಜೈ ಮಹಾರಾಷ್ಟ್ರ. ಎಂದಿದ್ದಾರೆ.
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…
ಕಾಸರಗೋಡು : ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…
ಮಂಗಳೂರಿನಲ್ಲಿ ಹಜ್ ಭವನ, ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯ ಒದಗಿಸುವಂತೆ ಎಸ್‌ಡಿಪಿಐ ಆಗ್ರಹ ಮಂಗಳೂರು: ಮಂಗಳೂರಿನಲ್ಲಿ ಹಜ್ ಭವನ…
ಕಟಪಾಡಿ : ಶೀಘ್ರ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಮುಕ್ತ ಕಟಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್ ಕಾಮಗಾರಿ ವೇಗದಲ್ಲಿ ನಡೆಯುತಿದ್ದು,…
ಉಡುಪಿ: ಸಂತೆಕಟ್ಟೆ ಅಂಡರ್‌ಪಾಸ್‌ನ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತ ; ಶೀಘ್ರವೇ ಅಧಿಕೃತ ಉದ್ಘಾಟನೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ…