Featured

ಅಯ್ಯಪ್ಪ ಭಕ್ತರ ಪಾದಯಾತ್ರೆಗೆ ಜೊತೆಯಾದ ಶ್ವಾನ , ನಿರಂತರ ಪಾದಯಾತ್ರೆಯಲ್ಲಿ ಶಬರಿಮಲೆಯತ್ತ ಮಾಳಗಿ – Vishwanews24

ಅಯ್ಯಪ್ಪ ಭಕ್ತರ ಪಾದಯಾತ್ರೆಗೆ ಜೊತೆಯಾದ ಶ್ವಾನ , ನಿರಂತರ ಪಾದಯಾತ್ರೆಯಲ್ಲಿ ಶಬರಿಮಲೆಯತ್ತ ಮಾಳಗಿ

ಶಬರಿಮಲೆ ಪಾದಾಯಾತ್ರೆಗೆ ಹೊರಟಿದ್ದ ಅಯ್ಯಪ್ಪ ಸ್ವಾಮಿ ವೃತಾಧಾರಿಗಳೊಂದಿಗೆ ಶ್ವಾನವೊಂದು ಹೆಜ್ಜೆ ಹಾಕಿ ನೂರಾರು ಕಿ.ಮೀ ಕ್ರಮಿಸಿರುವ ಅಚ್ಚರಿಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಧಾರವಾಡದಿಂದ ಕೇರಳದ ಶಬರಿಮಲೆಗೆ ಹೊರಟ ಅಯ್ಯಪ್ಪ ಸ್ವಾಮಿ ಭಕ್ತರಾದ ನಾಗನಗೌಡ ಪಾಟೀಲ್, ಮಂಜು ಹಾಗೂ ರವಿ ಎನ್ನುವವರಿಗೆ ಮಾರ್ಗ ಮಧ್ಯೆ ಶ್ವಾನವೊಂದು ಜೊತೆಯಾಗಿದ್ದು, ವೃತಾಧಾರಿಗಳೊಂದಿಗೆ ತಾನು ಕೂಡ ನೂರಾರು ಕಿಲೋ ಮೀಟರ್‌ ಕ್ರಮಿಸಿದೆ.

ಮೂವರು ಭಕ್ತರು ಬರಿಗಾಲಿನಲ್ಲಿ ಧಾರವಾಡದಿಂದ ಯಾತ್ರೆ ಪ್ರಾರಂಭಿಸಿದಾಗ ಧಾರವಾಡದ ನರೇಂದ್ರ ಟೋಲ್ ಬಳಿ ಶ್ವಾನ ಜೊತೆಯಾಗಿದೆ. ಪ್ರಾರಂಭದಲ್ಲಿ ಶ್ವಾನ ತಮ್ಮನ್ನು ಹಿಂಬಾಲಿಸಿ ಬರುತ್ತಿರುವುದು ಯಾರ ಗಮನಕ್ಕೆ ಬಂದಿರಲಿಲ್ಲ. ಆದರೆ ಬಹುದೂರ ಸಾಗಿ ಬಂದಾಗಲೂ ಶ್ವಾನ ತಮ್ಮ ತಂಡದ ಬೆನ್ನ ಹಿಂದೆಯೇ ಬರುತ್ತಿರುವುದನ್ನು ಕಂಡು ಸ್ವಾಮಿಗಳ ತಂಡ ಅಚ್ಚರಿಗೊಂಡಿದೆ. ಶ್ವಾನಕ್ಕೆ ತಿಂಡಿ ಹಾಕಿದ್ದಾರೆ. ಬಳಿಕವೂ ಹಿಂಬಾಲಿಸಿದೆ.

ಶ್ವಾನವನ್ನು ಹಿಂದೆ ಹೋಗಲಿ ಎಂದು ಓಡಿಸಿದ್ದರೂ ಕೂಡ ತೆರಳದೆ ನಿರಂತರವಾಗಿ 9 ದಿನಗಳ‌ ಕಾಲ ಜೊತೆ ಹೆಜ್ಜೆ ಹಾಕಿದೆ. ಪಾದಯಾತ್ರೆ ವೇಳೆ ಈ ತಂಡದ ಜೊತೆಗ ಹೆಜ್ಜೆ ಹಾಕುವ ಶ್ವಾನ, ವೃತಧಾರಿಗಳ ತಂಡ ವಿಶ್ರಾಂತಿ ಪಡೆಯುವ‌ ಸಂದರ್ಭ ಅದೂ ವಿಶ್ರಾಂತಿ ಪಡೆಯುತ್ತದೆ. ಮುಂಜಾನೆ ಬೇಗ ಈ ತಂಡದ ಜೊತೆಗೆ ಹೆಜ್ಜೆ ಹಾಕಲು ಆರಂಭಿಸುವ ಶ್ವಾನ, ತಂಡದಿಂದ ಸುಮಾರು ಮುಂದೆ ಹೋಗಿ ತಂಡದ ದಾರಿ ಕಾಯುತ್ತದೆ ಎನ್ನಲಾಗಿದೆ.

ಇನ್ನು ಈ ಪ್ರೀತಿಯ ಶ್ವಾನಕ್ಕೆ ಮಾಳಗಿ ಎಂದು ಹೆಸರಿಸಿದ್ದಾರೆ. ಮಾಳಗಿ ಎಂದರೆ ಶಬರಿಮಲೆಗೆ ಬರುವ ಮಹಿಳಾ ವೃತ್ತಧಾರಿಗಳನ್ನು ಮಾಳಿಗೆಪುರತ್ತಮ್ಮ ಅಂತಾ ಕರೆಯುತ್ತಾರೆ. ಹೀಗಾಗಿ ಶಬರಿಮಲೆ ಪಾದಯಾತ್ರೆಗೆ ಜೊತೆಯಾದ ಶ್ವಾನಕ್ಕೆ ಮಾಳಗಿ ಎಂದು ಹೆಸರನ್ನು ಇಡಲಾಗಿದೆ. ಮಾಳಗಿ ಈಗ ನಾಗನಗೌಡ ಪಾಟೀಲ್ , ಮಂಜು ಹಾಗೂ ರವಿ ಅವರ ಪ್ರೀತಿಯ ಶ್ವಾನವಾಗಿದೆ.

ಒಟ್ಟಾರೆ ಭಕ್ತಿಯ ಮಹಿಮೆ ಎಂಬಂತೆ ಶಬರಿಮಲೆ ಯಾತ್ರಿಕರನ್ನು ಹಿಂಬಾಲಿಸಿದ ಶ್ವಾನವೊಂದು ಸಹಸ್ರಾರು ಕಿ.ಮೀ ಚಾರಣ ಮಾಡುತ್ತಿರುವುದು ಎಲ್ಲರಲ್ಲೂ ಅಚ್ಚರಿಮೂಡಿಸಿದೆ.

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

17 hours ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

17 hours ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

17 hours ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

18 hours ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

18 hours ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

18 hours ago