ನವದೆಹಲಿ: ಪಿಎಂ-ಕಿಸಾನ್ ಯೋಜನೆಯಡಿ ಅರ್ಹತೆ ಇಲ್ಲದೆಯೇ ರೈತರು ಸರ್ಕಾರದಿಂದ ಅತಿ ಹೆಚ್ಚು ಹಣವನ್ನು ಜೇಬಿಗಿಳಿಸಿದ ಅಗ್ರ ಐದು ರಾಜ್ಯಗಳಲ್ಲಿ ಪಂಜಾಬ್, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿವೆ ಎಂದು ಆರ್‌ಟಿಐ ಮಾಹಿತಿಯಲ್ಲಿ ಬಹಿರಂಗಗೊಂಡಿದೆ.
ಒಟ್ಟಾರೆಯಾಗಿ, 2020 ಜುಲೈ 31 ರವರೆಗೆ ಯೋಜನೆಯಡಿ ಐದು ಪ್ರಮುಖ ಪಂಜಾಬ್, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ 20.48 ಲಕ್ಷ ಅನರ್ಹ ರೈತರಿಗೆ ₹1,364.13 ಕೋಟಿ ಹಣವನ್ನು 68.20 ಲಕ್ಷ ಕಂತುಗಳಲ್ಲಿ ವಿತರಿಸಲಾಗಿದೆ. ವಿತರಿಸಲಾದ ಒಟ್ಟು ನಿಧಿಯ 67.92% ಅಥವಾ 926.56 ಕೋಟಿ ರೂ. ಅನರ್ಹ ರೈತರ ಪಾಲಾಗಿದೆ.
ಅರ್ಹತೆೆ ಇಲ್ಲದಿದ್ದರೂ ಪಿಎಂ ಕಿಸಾನ್ ಯೋಜನೆಯಡಿ ಹಣ ಜೇಬಿಗಿಳಿಸಿದ ರೈತರ ಪೈಕಿ ಪಂಜಾಬ್ ಮೊದಲ ಸ್ಥಾನದಲ್ಲಿದ್ದು ಇಲ್ಲಿ 4.194 ಲಕ್ಷ ಕಂತುಗಳಲ್ಲಿ 4.74 ಲಕ್ಷ ಪಂಜಾಬ್ ರೈತರು ಅತಿ ಹೆಚ್ಚು ₹ 323.85 ಕೋಟಿ ಹಣ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ(10.84 ಕಂತುಗಳಲ್ಲಿ 2.86 ಲಕ್ಷ ರೈತರಿಗೆ ₹ 216.90 ಕೋಟಿ) ಇದೆ, ಮೂರನೇ ಸ್ಥಾನದಲ್ಲಿ ಗುಜರಾತ್ (8.11 ಲಕ್ಷ ಕಂತುಗಳಲ್ಲಿ 1.64 ಲಕ್ಷ ರೈತರಿಗೆ ₹ 162.34 ಕೋಟಿ) ಮತ್ತು ಉತ್ತರ ಪ್ರದೇಶ (7.30 ಲಕ್ಷ ಕಂತುಗಳಲ್ಲಿ 1.64 ಲಕ್ಷ ರೈತರಿಗೆ 146.01 ₹ ಕೋಟಿ ) 4ನೇ ಸ್ಥಾನದಲ್ಲಿದೆ.
ಕರ್ನಾಟಕ ರಾಜ್ಯ ಐದನೇ ಸ್ಥಾನದಲ್ಲಿದ್ದು, 86,419 ರೈತರು ಅರ್ಹತೆೆ ಇಲ್ಲದಿದ್ದರೂ ₹ 77.44 ಕೋಟಿ ಹಣವನ್ನು 3.87 ಲಕ್ಷ ಕಂತುಗಳಲ್ಲಿ ಪಡೆದಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರು ಸಲ್ಲಿಸಿದ ಆರ್‌ಟಿಐ ಪ್ರಶ್ನೆಗೆ ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆ ಉತ್ತರ ನೀಡಿದೆ.
ಸಂಕಷ್ಟದಲ್ಲಿದ್ದ ರೈತರಿಗೆ ಮೂರು ಕಂತುಗಳಲ್ಲಿ ವರ್ಷಕ್ಕೆ ₹ 6,000 ಗಳನ್ನು ಒದಗಿಸಲು 2019 ರ ಫೆಬ್ರುವರಿಯಲ್ಲಿ ಆರಂಭಿಸಲಾದ ಪಿಎಂ-ಕಿಸಾನ್ ಯೋಜನೆಯ ಪರಿಷ್ಕೃತ ಮಾರ್ಗಸೂಚಿಯಲ್ಲಿ ಸಾಂಸ್ಥಿಕ ಭೂಮಾಲೀಕರಾಗಿರುವ ರೈತರು, ಆದಾಯ ತೆರಿಗೆ ಪಾವತಿಸುವವರು, ವೃತ್ತಿಪರರು, ಮಾಜಿ ಮತ್ತು ಹಾಲಿ ಸಚಿವರು, ಸಂಸದರು ಮತ್ತು ಶಾಸಕರು, ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿದವರು, ಹಾಲಿ ಮತ್ತು ನಿವೃತ್ತ ಅಧಿಕಾರಿಗಳು ಮತ್ತು ₹ 10,000ಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುವವರೆಲ್ಲರನ್ನೂ ಯೋಜನೆ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. .
ಯೋಜನೆಗೆ ಫಲಾನುಭವಿಗಳ ನೋಂದಣಿ ಮತ್ತು ಹಣ ಪಾವತಿಗೆ ಡಿಜಿಟಲ್ ಮೂಲಸೌಕರ್ಯ ಬಳಕೆ ಹೊರತಾಗಿಯೂ 20 ಲಕ್ಷಕ್ಕೂ ಹೆಚ್ಚು ಅನರ್ಹ ವ್ಯಕ್ತಿಗಳನ್ನು ಈ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ನಾಯಕ್ ಹೇಳಿದ್ದಾರೆ. ಅನರ್ಹರೆಂದು ಪತ್ತೆಹಚ್ಚುವ ಹೊತ್ತಿಗೆ ಕೆಲವಡೆ ಎಲ್ಲ ಐದು ಕಂತುಗಳನ್ನು ಪಾವತಿಸಲಾಗಿದೆ ಎಂದು ತಿಳಿದು ಬಂದಿದೆ. ಇತರ ಸಂದರ್ಭಗಳಲ್ಲಿ, 1-2 ಕಂತುಗಳನ್ನು ಪಾವತಿಸಿದ ಬಳಿಕ ಅನರ್ಹರನ್ನು ಪತ್ತೆ ಮಾಡಲಾಗಿದೆ.
ಅನರ್ಹರಿಗೆ ಪಾವತಿಯಾದ ಹಣ ಹಿಂಪಡೆಯುವ ಬಗ್ಗೆ ವರದಿಗಳು ಇದ್ದರೂ, ನಮ್ಮ ವಿಶಾಲ ಭೌಗೋಳಿಕ ವ್ಯವಸ್ಥೆಯಲ್ಲಿ ಈ ದೊಡ್ಡ ಮೊತ್ತವನ್ನು ವಸೂಲಿ ಮಾಡುವುದು ಕಠಿಣ ಕೆಲಸವಾಗಿದೆ ಎಂದು ನಾಯಕ್ ಅಭಿಪ್ರಾಯಪಟ್ಟಿದ್ದಾರೆ. “2020 ರಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಕೃಷಿ ಸಮುದಾಯ ಅನುಭವಿಸಿದ ಆರ್ಥಿಕ ತೊಂದರೆಯು ಈ ಕಾರ್ಯಕ್ಕೆ ಮತ್ತಷ್ಟು ಕಠಿಣ ಸವಾಲಾಗಿದೆ” ಎಂದು ಅವರು ಹೇಳುತ್ತಾರೆ. ಅಧಿಕೃತ ಆಂತರಿಕ ಪತ್ರ ವ್ಯವಹಾರದ ಮಾಹಿತಿ ಪ್ರಕಾರ, ಅನರ್ಹರಿಂದ ಹಣ ವಾಪಸ್ ಪಡೆಯುವ ಕುರಿತ ಡೇಟಾಬೇಸ್ ನಿರ್ವಹಣೆಯನ್ನು ಅಧಿಕಾರಿಗಳು ಇನ್ನಷ್ಟೇ ಪ್ರಾರಂಭಿಸಬೇಕಿದೆ.
ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…
ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…
ಉಡುಪಿ: ಅ. 17 ರಂದು ನೇರ ಸಂದರ್ಶನ ಉಡುಪಿ: ನಗರದ ಗ್ರೋಸ್ಪೆöÊರ್ ಗ್ರೂಪ್, ಎರಡನೇ ಮಹಡಿ, ಕೈಗಾರಿಕಾ ಸಹಕಾರ ಸಂಘ,…
ಗೃಹಜ್ಯೋತಿ ಯೋಜನೆಯ ದಾಖಲೆ ಮರುಪರಿಶೀಲನಾ ಪ್ರಕ್ರಿಯೆ ಅ. 31 ರ ವಿಸ್ತರಣೆ : ರಮೇಶ್ ಕಾಂಚನ್ ಉಡುಪಿ: ರಾಜ್ಯ ಸರ್ಕಾರದ…
ಕಾರ್ಕಳ: ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಾರ್ಕಳ: ನಾಪತ್ತೆಯಾಗಿದ್ದ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…