Featured

ಉಡುಪಿ : ಅವಿಭಜಿತ ಜಿಲ್ಲೆಯಲ್ಲಿ ಓಸ್ಕರ್ ಫೆರ್ನಾಂಡಿಸ್ ಮಾಡಿದಂತಹ ಅಭಿವೃದ್ದಿ ಕೆಲಸಗಳು ಅವಿಸ್ಮರಣೀಯ : ರಮಾನಾಥ ರೈ – Vishwanews24

ಉಡುಪಿ : ರಾಜಕೀಯ ಜೀವನದಲ್ಲಿ ಓಸ್ಕರ್ ತಾಯಿಗೆ ಸಮಾನ..

ಅವಿಭಜಿತ ಜಿಲ್ಲೆಯಲ್ಲಿ ಓಸ್ಕರ್ ಫೆರ್ನಾಂಡಿಸ್ ಮಾಡಿದಂತಹ ಅಭಿವೃದ್ದಿ ಕೆಲಸಗಳು ಅವಿಸ್ಮರಣೀಯ : ರಮಾನಾಥ ರೈ – Vishwanews24

ಉಡುಪಿ : ಅವಿಭಜಿತ ಜಿಲ್ಲೆಯಲ್ಲಿ ಓಸ್ಕರ್ ಫೆರ್ನಾಂಡಿಸ್ ಮಾಡಿದಂತಹ ಅಭಿವೃದ್ದಿ ಕೆಲಸಗಳು ಅವಿಸ್ಮರಣೀಯ. ರಾಜಕೀಯ ಎದುರಾಳಿಗಳನ್ನು ವೈರಿಗಳಂತೆ ಕಾಣದೆ, ಅವರೆಲ್ಲರನ್ನು ಪ್ರೀತಿಸಿದ ಓಸ್ಕರಣ್ಣ, ದೇಶದಲ್ಲಿ ಹಲವಾರು ನಾಯಕರನ್ನು ಸಾರ್ವಜನಿಕ ಜೀವನದಲ್ಲಿ ಬೆಳೆಸಿದವರು ಓಸ್ಕರ್ ಫೆರ್ನಾಂಡಿಸ್. ನಮ್ಮೆಲ್ಲರ ಸಾರ್ವಜನಿಕ ಬದುಕಿನಲ್ಲಿ ಓಸ್ಕರ್ ಫೆರ್ನಾಂಡಿಸ್ ತಾಯಿಗೆ ಸಮಾನರು ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದರು.

ದಿ. ಓಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದ ನೇತೃತ್ವದಲ್ಲಿ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವಠಾರದಲ್ಲಿ ನಡೆದ ‘ನುಡಿ ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲೆಯಲ್ಲಿ ದೀರ್ಘಾವಧಿ ರಾಜಕೀಯ ನಾಯಕನಾಗಿ ಪ್ರಜ್ವಲಿಸಿದವರು ಓಸ್ಕರ್ ಫೆರ್ನಾಂಡಿಸ್. ದೆಹಲಿಯ ತನ್ನ ಕಚೇರಿಯಲ್ಲಿ ತಡರಾತ್ರಿಯವರೆಗೂ ಜನರ ಸಂಪರ್ಕಕ್ಕೆ ಸಿಗುತ್ತಿದ್ದ ಓಸ್ಕರ್ ಸಮಸ್ತ ಜನಪ್ರತಿನಿಧಿಗಳಿಗೆ ಪ್ರೇರಣೆ. ಓಸ್ಕರ್ ಫೆರ್ನಾಂಡಿಸ್ ರವರು ಮಾನವೀಯ ನೆಲೆ ಅವರ ಮೇಲೆ ನನಗೆ ಪ್ರೇರಣೆಯಾಗಲು ಕಾರಣ. ನನ್ನ ವೈಯಕ್ತಿಕ ಜೀವನದಲ್ಲಿ ತೀರಾ ಕಷ್ಟದಲ್ಲಿದ್ದಾಗ ಓಸ್ಕರ್ ಫೆರ್ನಾಂಡಿಸ್ ನನಗೆ ಸಾಂತ್ವನ ಹೇಳಿತು ಮರೆಯಲಾರದ್ದು. ಉಡುಪಿ ಜಿಲ್ಲೆ ಅಭಿವೃದ್ಧಿಗೆ ಮತ್ತು ರಾಜಕೀಯಕ್ಕೆ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದೆ ಎಂದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡುತ್ತಾ, ಓಸ್ಕರ್ ಫೆರ್ನಾಂಡಿಸ್ ಧರ್ಮ ಮತ್ತು ರಾಜಕೀಯ ಮೀರಿ ಬೆಳೆದವರು. ನೆಹರು ಕುಟುಂಬಕ್ಕೆ ಹತ್ತಿರವಾಗಿದ್ದ ಅವರು ಜನರ ಪ್ರೀತಿ ವಿಶ್ವಾಸಕ್ಕೆ ಕಾರಣಕರ್ತರಾಗಿದ್ದರು. ಅವರಲ್ಲಿದ್ದ ಕಠಿಣ ಶ್ರಮ, ನಂಬಿಕೆ, ವಿಶ್ವಾಸ ರಾಷ್ಟ್ರದ ಪ್ರಭಾವಿ ವ್ಯಕ್ತಿಯಾಗಿ ಬೆಳೆಯಲು ಕಾರಣ. ಅವಿಭಜಿತ ಜಿಲ್ಲೆಯಲ್ಲಿ ಮಾತ್ರವಲ್ಲದೆ ದೇಶದಲ್ಲಿಯೇ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ, ಯಾವುದೇ ಪ್ರಚಾರವನ್ನು ಬಯಸದೆ ಬೆಳೆದ ರಾಜಕಾರಣಿ ಓಸ್ಕರ್ ಫೆರ್ನಾಂಡಿಸ್. ದೇಶದಲ್ಲಿ ಕಾರ್ಮಿಕರಿಗೆ ವಿವಿಧ ಸವಲತ್ತುಗಳ ಸಹಿತ 8 ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕಾರಣಕರ್ತರು. ದೇಶದಲ್ಲಿ ಹಲವಾರು ಅಭಿವೃದ್ಧಿಗೆ ಕಾರಣಕರ್ತರಾಗಿರುವ ಓಸ್ಕರ್ ಫೆರ್ನಾಂಡಿಸ್ ಅವರ ವ್ಯಕ್ತಿತ್ವ ಶಾಶ್ವತ ಎಂದರು.

ದಿವಂಗತ ಓಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದ ಅಧ್ಯಕ್ಷ ಮತ್ತು ಉದ್ಯಮಿ ರೊನಾಲ್ಡ್ ಮನೋಹರ್ ಕರ್ಕಡ ಮಾತನಾಡಿ, ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದ ಓಸ್ಕರ್ ಧರ್ಮ ಮತ್ತು ಪಕ್ಷವನ್ನು ಮೀರಿ ಬೆಳೆದವರು. ತನ್ನ ಪಕ್ಷದವರನ್ನು ಮಾತ್ರವಲ್ಲದೆ ಇತರ ಪಕ್ಷದವರನ್ನು ಗೌರವಿಸುತ್ತಿದ್ದ ಓಸ್ಕರ್ ಪುಸ್ತಕ ಕಾಲದ ರಾಜಕಾರಣಿಗಳಿಗೆ ಮಾದರಿ. ಉದ್ಯಾವರದಂತಹ ಸಣ್ಣ ಗ್ರಾಮದಲ್ಲಿ ಬೆಳೆದು ದೆಹಲಿಯ ವರೆಗೂ ಪ್ರಭಾವಿ ರಾಜಕಾರಣಿಯಾಗಿ ಬೆಳೆದದ್ದು ಅವಿಸ್ಮರಣೀಯ. ತಾನು ಮಾಡಿದ ಹಲವು ಅತ್ಯಂತ ಪ್ರಭಾವಿ ಕೆಲಸಗಳನ್ನು ಯಾವುದೇ ಪ್ರಚಾರ ಬಯಸದೆ ಮಾಡಿದವರು. ಹಲವು ಯುವಕರಿಗೆ ಉದ್ಯೋಗದ ವ್ಯವಸ್ಥೆ, ಜತೆಗೆ ಸಂಕಷ್ಟದಲ್ಲಿದ್ದ ಹಲವಾರು ಕುಟುಂಬಗಳಿಗೆ ಆಸ್ಕರ್ ಆಸರೆಯಾಗಿದ್ದರು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಅಭಯಚಂದ್ರ ಜೈನ್, ಪ್ರಮೋದ್ ಮಧ್ವರಾಜ್, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಅ. ವಂ. ಫಾ. ಸ್ಟ್ಯಾನಿ ಬಿ ಲೋಬೊ, ಆದರ್ಶ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ನಾಗೇಶ್ ಕುಮಾರ್ ಉದ್ಯಾವರ, ಎಂ ಎ ಗಪೂರ್, ಬಿಪಿನ್ ರಾವ್, ಓಸ್ಕರ್ ಫೆರ್ನಾಂಡಿಸ್ ಅವರ ಸೊಸೆ ಫ್ರೆಜಿಲ್ ಫೆರ್ನಾಂಡಿಸ್ ಮತ್ತಿತರರು ನುಡಿನಮನ ಸಲ್ಲಿಸಿದರು.

ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಕಾರ್ಪೊರೇಟರ್ ನವೀನ್ ಡಿಸೋಜಾ, ವಂ. ಫಾ. ವಿಲಿಯಂ ಮಾರ್ಟಿಸ್, ಪ್ರಮುಖರಾದ ದಿನೇಶ್ ಪುತ್ರನ್, ಡೆರಿಕ್ ಡಿಸೋಜ, ನವೀನ್ ಚಂದ್ರ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಮೇರಿ ಡಿಸೋಜ, ಹರೀಶ್ ಶೆಟ್ಟಿ, ರೋಶನಿ ಒಲಿವೆರಾ, ಅನಿತಾ ಡಿಸೋಜಾ, ದೀಪಕ್ ಹೆಗ್ಡೆ, ಮೇರಿ ಡಿಸೋಜಾ, ನೇರಿ ಕರ್ನೇಲಿಯೊ, ಅರ್ವಿಂದ್ ಫೆರ್ನಾಂಡಿಸ್, ರೋಯ್ಡನ್ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.

ನುಡಿನಮನ ಕಾರ್ಯಕ್ರಮಕ್ಕೂ ಮೊದಲು ಪವಿತ್ರ ಬಲಿಪೂಜೆ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಬಲಿಪೂಜೆಯ ನೇತೃತ್ವವನ್ನು ನಿವೃತ್ತ ಧರ್ಮಗುರು ವಂ. ಫಾ. ಝೇವಿಯರ್ ಪಿಂಟೊ ನೆರವೇರಿಸಿದರೆ, ಮಂಗಳೂರು ದಕ್ಷಿಣದ ಮಾಜಿ ಶಾಸಕ ಜೆ ಆರ್ ಲೋಬೊ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

ದಿವಂಗತ ಓಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದ ಸಂಘಟಕ ಮೊಹಮ್ಮದ್ ಶ್ರೀಶ್ ಸ್ವಾಗತಿಸಿದರೆ, ಸಂಚಾಲಕ ಸ್ಟೀವನ್ ಕುಲಾಸೊ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಆಲ್ವಿನ್ ದಾಂತಿ ಕಾರ್ಯಕ್ರಮ ನಿರೂಪಿಸಿದರು.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

13 hours ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

1 day ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

2 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

2 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

2 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

2 days ago