ಅಶಕ್ತರಿಗೆ ನೆರವಾಗುತ್ತಿದೆ ಮೂಳೂರಿನ ವಾಟ್ಸಪ್ ನಿರೆಲ್ ತಂಡ.
ಕಾಪು: ಜನ ಸೇವೆಯೆ ದೇವರ ಸೇವೆ ಎಂಬ ಮಾತು ಅಕ್ಷರಶಃ ನಿಜವಾಗಬೇಕೆಂದರೆ ಇಂತಹ ತಂಡವೊಂದು ಪ್ರತಿಯೊಂದು ಊರಿನಲ್ಲೂ ಇರಬೇಕು ಹಾಗಾದರೆ ಈ ತಂಡ ಯಾವುದು, ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದ ಮಾಹಿತಿ ಇಲ್ಲಿದೆ.
ತುಳುನಾಡಿನ ಒಂದಿಷ್ಟು ಯುವಕರ ತಂಡ ಸಂಪಾದಿಸಿದ ಹಣದಲ್ಲಿ ಒಂದಿಷ್ಟು ಸಮಾಜಸೇವೆಗೆ ಮೀಸಲಿಟ್ಟು ಆಶಕ್ತರಿಗೆ ನೆರವಾಗುವ ಕಾರ್ಯವನ್ನ ಮಾಡುತ್ತಿದ್ದಾರೆ.
ಯಾವುದೇ ಕಾರ್ಯ ಮಾಡಬೇಕಾದರೂ ಅದಕ್ಕೊಂದು ಹೆಸರಿಡಬೇಕು ಈ ಹೆಸರು ಯಾವುದೆಂದರೆ ” ನಿರೆಲ್”(ನೆರಳು)
ಬಡತನದ ಬೇಗೆಯಲ್ಲಿ ಬೆಂದು ಆರೋಗ್ಯ ಕಾಪಾಡಲು ಸಾಧ್ಯವಾಗದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ನೆರಳಾಗಿ ನಿಂತು ಈ ಕಾರ್ಯವನ್ನ ಮಾಡುತ್ತಿದ್ದಾರೆ
ಇದು ಕೇವಲ ಒಂದೇ ಊರಿಗೆ ಮೀಸಲಾಗಿಲ್ಲ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಯಾವುದೇ ಮೂಲೆಯಾದರೂ ಸರಿ ಇವರ ಸೇವೆ ನಡೆಯುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ,ವಾಟ್ಸಪ್ ಗ್ರೂಪ್ ರಚಿಸಿಕೊಂಡು ತಮ್ಮದೇ ಶೈಲಿಯಲ್ಲಿ ಈ ಕೈಂಕಾರ್ಯ ನಡೆಸುತ್ತಿರುವ ಯುವಕರ ಕೆಲಸ ಶ್ಲಾಘನೀಯವೆ ಸರಿ.
ಅಷ್ಟು ಇಷ್ಟು ಎಂಬ ಭೇದ ಭಾವವಿಲ್ಲದೆ ಬಂದಷ್ಟನ್ನು ನೇರವಾಗಿ ಕುಟುಂಬಗಳಿಗೆ ಮುಟ್ಟಿಸುವ ಕೆಲಸ ಈ ಸಂಸ್ಥೆ ಮಾಡುತ್ತಿದೆ.ಯಾರಿಗೂ ಒತ್ತಾಯವಿಲ್ಲ ಕೊಟ್ಟದ್ದು ಪಂಚಾಮೃತ ಬಂದದ್ದು ಕಾರ್ಯಭಾಗ ಅನ್ನುವ ಮನೋಭಾವ ಈ ಯುವಕರದ್ದು,ಪ್ರಚಾರದ ಹುಚ್ಚಿಲ್ಲ ಕೊಟ್ಟೆವೂ ಎಂಬ ಆಡಂಬರ ಇಲ್ಲದೆ ಮಾಡುವ ಈ ಕಾರ್ಯಕ್ಕೆ ಜನಸ್ಪಂದನೆ ದೊರಕುತ್ತಿದೆ ಮಾತ್ರವಲ್ಲದೆ ಜನಸಾಮಾನ್ಯರಿಂದ ಶ್ಲಾಘನೆಯು ಬರುತ್ತಿದೆ.
ಮುಂದೆಯೂ ಇದೆ ರೀತಿಯಾಗಿ ಇವರ ಸೇವೆ ಮುಂದುವರಿಯಲಿ ಎಂದು ನಾವೆಲ್ಲರೂ ಆಶೀಸಬೇಕಾಗಿದೆ.
ಕಳೆದ ವಾರ ಧನಸಹಾಯ ಮಾಡಿದ ವಿವರ ಇಲ್ಲಿದೆ.
*”ನಿರೆಲ್ ಫ್ರೆಂಡ್ಸ್ ಬಳಗ”* ಇದರ ವತಿಯಿಂದ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಮಂಗಳೂರು ತಾಲೂಕಿನ ಪಕ್ಷಿಕೆರೆ ಗ್ರಾಮದ ನಿವಾಸಿ ಹರೀಶ ಮತ್ತು ಭಾರತಿ ಇವರ ಪುತ್ರ ಚೇತನ್(3 ವರ್ಷ)ರವರ ಕುಟುಂಬಕ್ಕೆ *35000ರೂ.* ನೆರವು ನೀಡಲಾಯಿತು.
ಮನೆ ತುಂಬ ನಲಿವಿನಿಂದ ಓಡಾಡಿಕೊಂಡು ಇರಬೇಕಾಗಿದ್ದ ಮೂರು ವರ್ಷದ ಪುಟ್ಟ ಮಗು ಚೇತನ್ ಮೂಳೆ ಕಾನ್ಸರ್ ಗೆ ತುತ್ತಾಗಿ ಹಾಸಿಗೆ ಹಿಡಿದಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಆಗಬಹುದು ಎಂದು ವೈದ್ಯರು ತಿಳಿಸಿರುತ್ತಾರೆ. ಮಗುವಿನ ಹೆತ್ತವರು ಚಿಕಿತ್ಸೆಯ ವೆಚ್ಚ ಬರಿಸಲಾಗದೆ ದಾನಿಗಳ ನೆರವು ಯಾಚಿಸಿದ್ದರು. ಇವರ ಕಣ್ಣೀರ ಕಥೆಗೆ ಸ್ಪಂದಿಸಿರುವ *ನಿರೆಲ್ ಫ್ರೆಂಡ್ಸ್* ಬಳಗದ ಸಹೃದಯ ಮಿತ್ರರು ಹಣ ಸಂಗ್ರಹ ನಡೆಸಿದ್ದು, ಒಟ್ಟಾದ ಹಣವನ್ನು ಚೇತನ್ ಅವರ ಮನೆಗೆ ತೆರಳಿ ಶ್ರೀಯುತ ಹರೀಶ್ ರವರಿಗೆ ಧನಸಹಾಯ ಹಸ್ತಾoತರ ಮಾಡಲಾಯಿತು.
ಈ ವೇಳೆ ನಿರೆಲ್ ಫ್ರೆಂಡ್ಸ್ ಬಳಗದ ನಿರ್ವಾಹಕರು ಅರುಣ್ ಕುಲಾಲ್ ಮೂಳೂರು, ಸದಸ್ಯರು ಹೇಮಂತ್ ಕುಮಾರ್ ಕಿನ್ನಿಗೋಳಿ, ಅವಿನಾಶ್ ಕುಲಾಲ್ ಮೂಳೂರು, ಪ್ರಶಾಂತ್ ಎಸ್.ಪೂಜಾರಿ ಉಚ್ಚಿಲ, ಸುರೇಶ್ ಶೆಟ್ಟಿ ಮೂಳೂರು, ದಿವಾಕರ್ ಕರ್ಕೇರ ಕಿನ್ನಿಗೋಳಿ (ಮಂಗಳೂರು ತಾಲೂಕು ಪಂಚಾಯತ್ ಸದಸ್ಯರು),
ಜಾಗರಣ ಸಂಜೀವಿನಿ ಪಕ್ಷಿಕೆರೆ ಇದರ ಸಕ್ರಿಯ ಸದಸ್ಯರು ಶಶಿಧರ್ ಪೂಜಾರಿ, ಧನುಷ್ ಕುಲಾಲ್, ಧನು ಅಂಚನ್ ಉಪಸ್ಥಿತರಿದ್ದರು.
ಸಹಾಯಹಸ್ತ ನೀಡುವವರು ಇದ್ದಲ್ಲಿ ಮಗುವಿನ ಖಾತೆಗೆ ನೆರವು ನೀಡಬಹುದು
*Chethan H*
*A/c no: 01362210047670*
*IFSC:SYNB0000136*
*Branch:Kinnigoli*
*Syndicate Bank*
*Contact:9148496812*
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…