Featured

ಆಝಾನ್ ವಿರುದ್ಧ ಈಶ್ವರಪ್ಪ ಹೇಳಿಕೆ ಮುಸ್ಲಿಮರ ನಂಬಿಕೆಗೆ ಘಾಸಿ ತರುವ ಷಡ್ಯಂತರ ,ಕೋಮು ಗಲಭೆ ನಡೆಸುವ ಹುನ್ನಾರ : ಎಸ್‌ ಡಿಪಿಐ – Vishwanews24

ಆಝಾನ್ ವಿರುದ್ಧ ಈಶ್ವರಪ್ಪ ಹೇಳಿಕೆ ಮುಸ್ಲಿಮರ ನಂಬಿಕೆಗೆ ಘಾಸಿ ತರುವ ಷಡ್ಯಂತರ ,ಕೋಮು ಗಲಭೆ ನಡೆಸುವ ಹುನ್ನಾರ : ಎಸ್‌ ಡಿಪಿಐ

ಮಂಗಳೂರು: ನಗರದ ಕಾವೂರಿನಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಶಾಸಕ ಹರಕಲು ಬಾಯಿಯ ಈಶ್ವರಪ್ಪ ಭಾಷಣ ಮಾಡುವ ಸಂದರ್ಭದಲ್ಲಿ ಪಕ್ಕದ‌ ಮಸೀದಿಯಿಂದ ಅಝಾನ್ ಆಗುವಾಗ ಉದ್ದೇಶಪೂರ್ವಕವಾಗಿ ಅಝಾನ್ ನನ್ನು ಮತ್ತು ಅಲ್ಲಾಹುವಿನ ಬಗ್ಗೆ ಅವಹೇಳನ ನಡೆಸಿ ಕೋಮುದ್ವೇಷ ಹರಡಿಸಿ ಗಲಭೆ ಮತ್ತು ಅಶಾಂತಿ ಹಬ್ಬಲು ಪ್ರಯತ್ನಿಸಿದ ಘಟನೆಯ ಬಗ್ಗೆ ಎಸ್‌ ಡಿಪಿಐ ದ.ಕ ಜಿಲ್ಲಾ ಪ್ರಧಾ‌ನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಅವರು, ಪ್ರಪಂಚಾದ್ಯಂತ ನಮಾಝ್ ಗೆ ಮುಂಚಿತವಾಗಿ ಅಝಾನ್ ಕೊಡುವುದು ಮುಸ್ಲಿಂ ಸಮುದಾಯದ ಆರಾಧನಾ ಪದ್ಧತಿಯ ಭಾಗವಾಗಿದೆ. ಅದನ್ನು ಅಝಾನ್ ನಡೆಯುತ್ತಿರುವ ಸಂದರ್ಭದಲ್ಲೇ ಅವಹೇಳನ ನಡೆಸಿರುವುದು ಲೋಕಾದ್ಯಂತ ಇರುವ ಮುಸ್ಲಿಮರ ನಂಬಿಕೆಗೆ ಘಾಸಿ ತರುವ ಷಡ್ಯಂತರ ವಾಗಿದೆ ಹಾಗೂ ಕೋಮು ಗಲಭೆ ನಡೆಸುವ ಹುನ್ನಾರವಾಗಿದೆ. ದೇಶಾದ್ಯಂತ ವಂಶಹತ್ಯೆ ‌ ಹಾಗೂ ನರಮೇಧಗಳ ನಿರ್ಮಾಪಕರಿಗೆ ಅಝಾನ್ ಶಬ್ದದ ಇಂಪಾದ ಧ್ವನಿ ಕರ್ಕಶವಾಗಿ ಕೇಳುತ್ತಿದೆ ಇದು ಅವರ ಕೊಳಕು ಮನಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಾಜ್ಯ ಕಂಡ ಅತ್ಯಂತ ದುರಂತ ಮತ್ತು ದುರ್ಬಲ ನಾಯಕ ಈಶ್ವರಪ್ಪ ತನ್ನ 40% ಕಮಿಷನ್ ದಂದೆಯಿಂದ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರನಾಗಿದ್ದ ಸಂತೋಷ ಪಾಟೀಲ ಆತ್ಮಹತ್ಯೆಗೈದ ಪರಿಣಾಮ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದಿತ್ತು. ಈ ನಾಯಕನ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲೆ ಅಸಮಾಧಾನವಿದೆ.ಇದರಿಂದ ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ಸಿಗುವುದು ಅನುಮಾನ ಎಂದರಿತಿರುವ ಈಶ್ವರಪ್ಪ ತನ್ನ ಹರಕಲು ನಾಲಗೆ ಹರಿಯಬಿಡುವ ಮೂಲಕ ಮುಸ್ಲಿಮ್ ಸಮುದಾಯದ ಆಚಾರ ವಿಚಾರಗಳ ಬಗ್ಗೆ ಮಾತನಾಡಿ ಅಂಧ ಭಕ್ತರ ಚಪ್ಪಾಳೆ ಗಿಟ್ಟಿಸಿ ಸಂಘಪರಿವಾರ ಮುಖಂಡರ ಮನವೊಲಿಸಿ ಮುಂದಿನ ಚುನಾವಣೆಗೆ ಟಿಕೆಟ್ ಪಡೆಯುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ಈ ಹರಕಲು ಬಾಯಿಯ ಬಿಜೆಪಿಯ ನಾಯಕ ಈ ಹಿಂದೆಯೂ ಅನೇಕ ಬಾರಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಬಗ್ಗೆ ನಾಲಗೆ ಹರಿಯಬಿಟ್ಟ ಘಟನೆ ನಡೆದಿತ್ತು. ಪೋಲಿಸ್ ಇಲಾಖೆ ಮತ್ತು ಸರ್ಕಾರ ಕಾನೂನು ಕ್ರಮ ಜರುಗಿಸದೇ ಇರುವುದರಿಂದ ಇಂತಹ ಅಶಾಂತಿ ಮೂಡಿಸುವ ಬಾಷಣಗಳು ಪುನರಾವರ್ತನೆಯಾಗುತ್ತಲೇ ಇದೆ,ಕೋಮುದ್ವೇಷದ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಬೇಕೆಂಬ ಸುಪ್ರೀಂ ಕೋರ್ಟ್ ನ ಆದೇಶ ಇದ್ದರು ಪೊಲೀಸ್ ಇಲಾಖೆ ಮೌನವಹಿಸಿರುವುದು ಖಂಡನೀಯವಾಗಿದೆ.

Vishwa News 24

Recent Posts

SSLC ಪರೀಕ್ಷೆ ಫಲಿತಾಂಶ: ದ.ಕ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ – vishwanews24

SSLC ಪರೀಕ್ಷೆ ಫಲಿತಾಂಶ: ದ.ಕ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ ಬೆಂಗಳೂರು: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು,ಈ…

8 hours ago

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ – vishwanews24

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) ನಡೆಸಿದ…

8 hours ago

ಉಡುಪಿ: ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ ಪುನರಾರಂಭ – vishwanews24

ಉಡುಪಿ: ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ ಪುನರಾರಂಭ ಉಡುಪಿ : ಹಲವು ದಿನಗಳಿಂದ ಉಡುಪಿಯಲ್ಲಿ ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ…

9 hours ago

ಇನ್ಮುಂದೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ FID ಕಡ್ಡಾಯ – vishwanews24

ಇನ್ಮುಂದೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ FID ಕಡ್ಡಾಯ ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದಿಂದ ರಸಗೊಬ್ಬರ  ಕಚ್ಚಾವಸ್ತುಗಳ ಕೊರತೆಯ ಆತಂಕ ಎದುರಾಗಿದೆ. ಈ…

10 hours ago

ನಾಳೆ SSLC ಫಲಿತಾಂಶ  ಪ್ರಕಟ – vishwanews24

ನಾಳೆ SSLC ಫಲಿತಾಂಶ  ಪ್ರಕಟ ಬೆಂಗಳೂರು: ನಾಳೆ ಎಸ್‌ಎಸ್‌ಎಲ್‌ಸಿ ಫಲಿತಾಂಶ  ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.…

1 day ago

ಕಾಪು : ಸ್ಕೂಟಿ ಹಿಂಬದಿಗೆ ತಡೆರಹಿತ ಬಸ್‌ ಢಿಕ್ಕಿ ; ಬಾಲಕಿ ಸಾವು -vishwanews24

ಕಾಪು : ಸ್ಕೂಟಿ ಹಿಂಬದಿಗೆ ತಡೆರಹಿತ ಬಸ್‌ ಢಿಕ್ಕಿ - ಬಾಲಕಿ ಸಾವು ಕಾಪು : ಸರ್ವಿಸ್‌ ರಸ್ತೆಯಿಂದ ರಾಷ್ಟ್ರೀಯ…

1 day ago