ಬೆಂಗಳೂರು: ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಪಾನ್ ಕಾರ್ಡ್ ಜೋಡಣೆಗೆ ಸೆಪ್ಟೆಂಬರ್ 30 ಕೊನೆಯ ದಿನ. ಪಾನ್ ಕಾರ್ಡ್ ಆಧಾರ್ ಜತೆಗೆ ಲಿಂಕ್ ಆಗಿರದಿದ್ದರೆ ಅಕ್ಟೋಬರ್ 1ರಿಂದ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುವ ಸಾಧ್ಯತೆಯಿದೆ.
ಸೆಪ್ಟೆಂಬರ್ 30ರೊಳಗೆ ಎರಡೂ ಕಾರ್ಡ್‌ಗಳ ಲಿಂಕ್ ಆಗದೆ ಪಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ನಿತ್ಯ ವ್ಯವಹಾರಗಳ ಮೇಲೆ ಏನು ಪರಿಣಾಮವಾಗಲಿದೆ? ಅಥವಾ ಬೇರೆ ಎಲ್ಲಿ ಸಮಸ್ಯೆ ಉಂಟಾಗಬಹುದು?– ಈ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಲಭ್ಯವಿಲ್ಲ. ಆದರೆ, ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಲ್ಲಿ ಆಧಾರ್ ಸಂಖ್ಯೆ ನಮೂದಿಸಿ ಮುಂದುವರಿಯಬೇಕು.
ನೇರ ತೆರಿಗೆ ಕೇಂದ್ರೀಯ ಮಂಡಳಿ(ಸಿಬಿಡಿಟಿ)ಯ ಹೊಸ ನಿಯಮಗಳ ಪ್ರಕಾರ, ಪಾನ್ ಮತ್ತು ಆಧಾರ್ ಲಿಂಕ್ ಮಾಡುವಲ್ಲಿ ವಿಫಲರಾದರೆ ಪಾನ್ ನಿಷ್ಕ್ರಿಯಗೊಳ್ಳಬಹುದಾಗಿದೆ. ಹಿಂದಿನ ಅಧಿಸೂಚನೆಗಳಲ್ಲಿ ತಿಳಿಸಿದಂತೆ ಅಸಿಂಧುಗೊಳ್ಳುವ ಸಾಧ್ಯತೆಯಿದೆ. ಸರ್ಕಾರ ಪಾನ್ ನಿಷ್ಕ್ರಿಯಗೊಳ್ಳುವ ಬಗ್ಗೆ ಇನ್ನಷ್ಟೇ ವಿವರಿಸಬೇಕಿದೆ.
ಈಗಾಗಲೇ ಹಲವು ಬಾರಿ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ನಿಗದಿಯಾಗಿದ್ದ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಈಗ ಮತ್ತೊಮ್ಮೆ ಅವಧಿ ವಿಸ್ತರಣೆ ಅಸಾಧ್ಯ ಎನ್ನಲಾಗುತ್ತಿದೆ.
ನಮ್ಮಲ್ಲಿರುವ ಎರಡೂ ಕಾರ್ಡ್‌ಗಳ ಜೋಡಣೆ ಅಥವಾ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ವಿವರ–
ಹಂತ 1: ತೆರಿಗೆ ಇಲಾಖೆಯ ಇ–ಫಿಲ್ಲಿಂಗ್ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಬೇಕು
ವೆಬ್‌ಸೈಟ್ ಲಿಂಕ್: https://www.incometaxindiaefiling.gov.in/home
ಹಂತ 2: ಪೋರ್ಟಲ್‌ನಲ್ಲಿ ಪಾನ್–ಆಧಾರ್ ಲಿಂಕ್ ಆಯ್ಕೆಯನ್ನು ಕಂಡುಕೊಂಡು ಅದರ ಮೇಲೆ ಕ್ಲಿಕ್ ಮಾಡಬೇಕು
ಹಂತ 3: ನಿಗದಿತ ಸ್ಥಳದಲ್ಲಿ ಪಾನ್ ಮತ್ತು ಆಧಾರ್ ಸಂಖ್ಯೆ ನಮೂದಿಸಬೇಕು
ಹಂತ 4: ಆಧಾರ್‌ನಲ್ಲಿ ಇರುವಂತೆ ಹೆಸರು ನಮೂದಿಸಬೇಕು
ಹಂತ 5: ನಿಮ್ಮ ಆಧಾರ್ ಕಾರ್ಡ್‌ನ ಜನ್ಮದಿನಾಂಕದ ವಿವರದಲ್ಲಿ ಕೇವಲ ಹುಟ್ಟಿದ ವರ್ಷ ಮಾತ್ರ ದಾಖಲಾಗಿದ್ದರೆ; ‘I have the only year of birth in Aadhar card’ ಆಯ್ಕೆ ಕ್ಲಿಕ್ಕಿಸಬೇಕು
ಹಂತ 6: ಸರಿಯಾದ ವಿವರ ನೀಡಿರುವುದನ್ನು ಖಾತ್ರಿ ಪಡಿಸಿಕೊಂಡು ಮುಂದುವರಿಯಲು ‘I agree to validate my Aadhar details with UIDAI’ ಆಯ್ಕೆ ಕ್ಲಿಕ್ ಮಾಡಬೇಕು
ಹಂತ 7: ಪರದೆಯಲ್ಲಿ ಕಾಣಿಸುವ ವಿಶೇಷ ಕೋಡ್(captcha code) ನಮೂದಿಸಬೇಕು
ಹಂತ 8: ಅಂತಿಮವಾಗಿ ಪಾನ್ ಮತ್ತು ಆಧಾರ್ ಲಿಂಕ್ ಮನವಿಗಾಗಿ ‘Link Aadhaar’ ಆಯ್ಕೆ ಕ್ಲಿಕ್ ಮಾಡಬೇಕು. ಇಲ್ಲಿಗೆ ಕಾರ್ಡ್‌ಗಳ ಲಿಂಕ್‌ಗಾಗಿ ಮನವಿ ಪೂರ್ಣಗೊಳ್ಳುತ್ತದೆ.
ಪಾನ್–ಆಧಾರ್ ಲಿಂಕ್ ಆಗಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ನಲ್ಲಿಯೇ ಖಾತ್ರಿ ಪಡಿಸಿಕೊಳ್ಳಬಹುದು. ಈಗಾಗಲೇ ನೀವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿದ್ದರೆ, ನಿಮ್ಮ ಪಾನ್–ಆಧಾರ್ ಲಿಂಕ್ ಆಗಿರುತ್ತದೆ. ಇದನ್ನು ಸ್ಪಷ್ಟಪಡಿಸಿಕೊಳ್ಳಲು ಮೇಲೆ ತಿಳಿಸಿದಂತೆ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ವಿವರ ಭರ್ತಿ ಮಾಡಿ ಗಮನಿಸಿ. ಕಾರ್ಡ್‌ಗಳು ಲಿಂಕ್ ಆಗಿದ್ದರೆ ಕೊನೆಯ ಹಂತದ ನಂತರ, ‘Your Pan is already linked….’ ಎಂದು ತೋರಿಸುತ್ತದೆ.
ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…
ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…
ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…
ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ…
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…
ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…