Featured

ಆನೇಕಲ್ : ನಿರ್ಮಾಣ ಹಂತದ ಕಾಂಕ್ರೀಟ್ ಕಾಮಗಾರಿ ವೇಳೆ ದುರಂತ; ಮೂವರು ಕಾರ್ಮಿಕರು ಸಾವು – vishwanews24

ಆನೇಕಲ್ : ನಿರ್ಮಾಣ ಹಂತದ ಕಾಂಕ್ರೀಟ್ ಕಾಮಗಾರಿ ವೇಳೆ ದುರಂತ; ಮೂವರು ಕಾರ್ಮಿಕರು ಸಾವು

ಆನೇಕಲ್: ನಿರ್ಮಾಣ ಹಂತದ ಕಾಂಕ್ರೀಟ್ ಕಾಮಗಾರಿ ವೇಳೆ ದುರಂತವೊಂದು ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಹೊಸೂರು ಸಮೀಪದ ಸಿಪ್ ಕಾಟ್ ಬಳಿ ನಡೆದಿದೆ.

ಖಾಸಗಿ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದ್ದು, ಕುಮರೇಶನ್(39), ಮೈಕೆಲ್(26), ಶ್ರೀನಿವಾಸನ್(26) ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಕಾರ್ಖಾನೆಯ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕಾರ್ಮಿಕರು ಮೋಲ್ಡ್‌ಗೆ ಕಾಂಕ್ರೀಟ್ ಹಾಕುತ್ತಿದ್ದಾಗ ಸೆಂಟ್ರಿಂಗ್‌ಗೆ ಹಾಕಿದ್ದ ಮರಗಳು ಕುಸಿದು ಬಿದ್ದಿವೆ. ಪರಿಣಾಮ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸದ್ಯ ಗಾಯಗೊಂಡ ಕಾರ್ಮಿಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ದಿನೇಶ್, ಎಸ್ಪಿ ಅನಿತಾ ಭೇಟಿ ನೀಡಿದ್ದಾರೆ. ಕಾಮಗಾರಿ ವೇಳೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ದುರಂತ ಸಂಭವಿಸಿದೆ. ಸದ್ಯ ಪೊಲೀಸರು ಕ್ರೇನ್‌ಗಳ ಮೂಲಕ ಮೃತದೇಹಗಳನ್ನ ಹೊರತೆಗೆದಿದ್ದಾರೆ.

Vishwa News 24

Recent Posts

ಮಂಗಳೂರು: ವಂದೇಭಾರತ್‌, ಎಕ್ಸ್‌ಪ್ರೆಸ್‌ ಸಹಿತ ಹಲವು ರೈಲುಗಳಿಗೆ ಜ. 1ರಿಂದ ಹೊಸ ಸಂಖ್ಯೆ ಜಾರಿ – vishwanews24

ಮಂಗಳೂರು: ರೈಲ್ವೇ ವಿಭಾಗಗಳ ವ್ಯಾಪ್ತಿ ಬದಲಾವಣೆ; ಮಂಗಳೂರು ಸಂಪರ್ಕಿಸುವ ಹಲವು ರೈಲುಗಳ ಸಂಖ್ಯೆಯಲ್ಲಿ ಬದಲಾವಣೆ ಮಂಗಳೂರು: ನೈಋತ್ಯ ರೈಲ್ವೇಯ ಮೈಸೂರು…

15 minutes ago

ಕೆಎಸ್‌ಆರ್‌ಟಿಸಿ ಪ್ರಯಾಣ ದರ ಹೆಚ್ಚಳ: ಉಡುಪಿ, ದಕ್ಷಿಣ ಕನ್ನಡ ಮಾರ್ಗಗಳ ದರಪಟ್ಟಿ – vishwanews24

ಕೆಎಸ್‌ಆರ್‌ಟಿಸಿ ಪ್ರಯಾಣ ದರ ಹೆಚ್ಚಳ: ಉಡುಪಿ, ದಕ್ಷಿಣ ಕನ್ನಡ ಮಾರ್ಗಗಳ ದರಪಟ್ಟಿ ಉಡುಪಿ/ ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರವನ್ನು…

35 minutes ago

ಮಂಗಳೂರು: ಶಾಲಾ ಟ್ಯಾಕ್ಸಿಗೆ ಕಂಟೇನರ್ ಲಾರಿ ಡಿಕ್ಕಿ; ನಾಲ್ವರು ವಿಶೇಷ ಚೇತನ ಮಕ್ಕಳು ಸೇರಿ ಆರು ಮಂದಿ ಪ್ರಾಣಾಪಾಯದಿಂದ ಪಾರು – vishwanews24

ಮಂಗಳೂರು: ಶಾಲಾ ಟ್ಯಾಕ್ಸಿಗೆ ಕಂಟೇನರ್ ಲಾರಿ ಡಿಕ್ಕಿ; ನಾಲ್ವರು ವಿಶೇಷ ಚೇತನ ಮಕ್ಕಳು ಸೇರಿ ಆರು ಮಂದಿ ಪ್ರಾಣಾಪಾಯದಿಂದ ಪಾರು…

1 hour ago

ಉಡುಪಿ : ನೇರ ಸಂದರ್ಶನ – vishwanews24

ನೇರ ಸಂದರ್ಶನ ಉಡುಪಿ : ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಖಾಲಿ ಇರುವ 3 ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಒಂದು…

1 hour ago

ಚಿಕ್ಕಮಗಳೂರು: ದೇವೀರಮ್ಮ ಜಾತ್ರೆಗೆ ಹೊಸ ನಿಯಮ ಜಾರಿ; ಬೆಟ್ಟ ಏರುವ ಭಕ್ತರಿಗೆ ಜಿಲ್ಲಾಡಳಿತದಿಂದ ಮಾರ್ಗಸೂಚಿ – vishwanews24

ಚಿಕ್ಕಮಗಳೂರು: ದೇವೀರಮ್ಮ ಬೆಟ್ಟ ಏರಲು ಭಕ್ತರಿಗೆ ಹೊಸ ನಿಯಮ, ರಾತ್ರಿ ಸಂಚಾರಕ್ಕೆ ಬ್ರೇಕ್ ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಶಕ್ತಿದೇವತೆ ಬಿಂಡಿಗ…

2 days ago

ಕಾಪು ಜೇಸಿಐಗೆ ವಲಯದ ಅತ್ಯುತ್ತಮ ಘಟಕ ಪ್ರಶಸ್ತಿ ಪ್ರದಾನ – vishwanews24

ಕಾಪು ಜೇಸಿಐಗೆ ವಲಯದ ಅತ್ಯುತ್ತಮ ಘಟಕ ಪ್ರಶಸ್ತಿ ಪ್ರದಾನ ಕಾಪು ಪರಿಸರದಲ್ಲಿ ಸೇವಾ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಕಾಪು ಜೇಸಿಐಗೆ…

2 days ago