ಬಾದಾಮಿ ಹೆಚ್ಚು ಆರೋಗ್ಯಕರ ಮತ್ತು ಪೌಷ್ಟಿಕಾಂಶಯುಕ್ತ ಬೀಜಗಳಲ್ಲಿ ಒಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಬಾದಾಮಿ ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಜನಪ್ರಿಯವಾಗಿವೆ. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ದಿನಕ್ಕೆ ಒಂದು ಹಿಡಿ ಬಾದಾಮಿ ತಿನ್ನುವುದು ಒಳಿತು ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಎನ್ನುತ್ತಾರೆ ತಜ್ಞರು.
ಅನಾರೋಗ್ಯಕರ ತಿಂಡಿಗಳ ಜೊತೆಗೆ ಬಾದಾಮಿಯನ್ನು ತಿನ್ನುವುದರಿಂದ ಸಣ್ಣ ಸಣ್ಣ ಹಸಿವನ್ನು ನೀಗಿಸುತ್ತದೆ. ತೂಕ ಇಳಿಸಲು ಯೋಚಿಸುತ್ತಿರುವವರಿಗೆ ಬಾದಾಮಿ ದೇಹದ ಒಟ್ಟಾರೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.
ಬಾದಾಮಿ ಆರೋಗ್ಯಕರವಾದ ಅಡಿಕೆಯಾಗಿ ಪ್ರಶಂಸಿಸಲ್ಪಟ್ಟಿದೆ. ಇದು ಏಕಕಾಲದಲ್ಲಿ ಕೊಬ್ಬಿನ ಆಮ್ಲ, ಫೈಬರ್, ವಿಟಮಿನ್ ಇ, ರಿಬೋಫ್ಲಾವಿನ್, ಮೆಗ್ನೀಷಿಯಂ, ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣ, ಸೆಲೆನಿಯಮ್ ಮತ್ತು ಇತರ ಅಗತ್ಯ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ.
ಬಾದಾಮಿಯನ್ನು ಸಾಮಾನ್ಯವಾಗಿ ಹಸಿಯಾಗಿಯೇ ತಿನ್ನುತ್ತೇವೆ. ಇದರ ಜೊತೆಗೆ ಸಲಾಡ್ ಮತ್ತು ಯೋಗರ್ಟ್ ನಲ್ಲೂ ಸೇರಿಸಿಕೊಳ್ಳಬಹುದು. ಬಾದಾಮಿ ಹಾಲು, ಫ್ಲೇವರ್ಡ್ ಮಿಲ್ಕ್ ರೂಪದಲ್ಲೂ ಲಭ್ಯವಿದೆ.
ಬಾದಾಮಿಯ ಆರೋಗ್ಯಕರ ಪ್ರಯೋಜನ:
ದಿನನಿತ್ಯ ಬಾದಾಮಿ ತಿನ್ನುವುದರಿಂದ ಕೆಲವು ಆರೋಗ್ಯಕರ ಪ್ರಯೋಜನಗಳಿವೆ:
ತೂಕ ಇಳಿಸಿಕೊಳ್ಳಲು ನೆರವು:
ಬಾದಾಮಿ ಆರೋಗ್ಯವರ್ಧಕ ಬೀಜವಾಗಿದ್ದರೂ ತೂಕ ಹೆಚ್ಚಾಗುತ್ತದೆ ಎಂಬ ಕಾರಣದಿಂದಾಗಿ ಅದನ್ನು ದೂರವಿಡುತ್ತಾರೆ. ಬಾದಾಮಿಯಲ್ಲಿ ಪ್ರೋಟೀನ್ ಮತ್ತು ಫೈಬರ್ ಹೆಚ್ಚಾಗಿದ್ದು, ತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ. ಅಂತಾರಾಷ್ಟ್ರೀಯ ಜರ್ನಲ್ ಆಫ್ ಒಬೆಸಿಟಿ ಮತ್ತು ಸಂಬಂಧಿತ ಮೆಟಾಬಾಲಿಕ್ ಡಿಸಾರ್ಡರ್ ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬಾದಾಮಿ-ಸಮೃದ್ಧ ಆಹಾರವಾಗಿದ್ದು, ಕಡಿಮೆ-ಕ್ಯಾಲೋರಿಯನ್ನು ದೇಹಕ್ಕೆ ಒದಗಿಸುತ್ತದೆ. ಇದು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಗದಿತವಾಗಿ ಆರು ತಿಂಗಳುಗಳ ಕಾಲ ಬಾದಾಮಿ ಸೇವನೆ ಮಾಡಿದವರಲ್ಲಿ ಬಿಎಂಐನಲ್ಲಿ ಶೇ. 62ರಷ್ಟು ಇಳಿಕೆ, ಸೊಂಟದ ಸುತ್ತಳತೆಯಲ್ಲಿ ಶೇ. 50 ಮತ್ತು ದೇಹದ ಕೊಬ್ಬಿನ ಪ್ರಮಾಣದಲ್ಲಿ ಶೇ. 56 ಕಡಿಮೆಯಾಗಿರುವುದು ಸಂಶೋಧನೆಯಿಂದ ಕಂಡುಬಂದಿದೆ.
ಅಹಿತಕರ ತೂಕ ನಷ್ಟದ ಕಟ್ಟುಪಾಡುಗಳ ಮೇಲೆ ಜನರಿಗೆ ಬಾದಾಮಿ ಹಾಲು ಸೂಕ್ತ ಆಯ್ಕೆಯಾಗಿದೆ. ಬಾದಾಮಿಯಲ್ಲಿರುವ ಫೈಬರ್ ಸ್ಥಿರವಾದ ಕರುಳಿನ ಚಲನೆಗೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಬಾದಾಮಿ ಸೇವಿಸುವ ಜನರಿಗೆ ಹೋಲಿಕೆ ಮಾಡಿದರೆ ಅಪರೂಪವಾಗಿ ಅಥವಾ ಬಾದಾಮಿ ಸೇವಿಸಿದವರ ದೇಹದ ತೂಕದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಗುರುತಿಸಬಹುದು.
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…
ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…
ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…
ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…
ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…
ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…