Featured

ಆರೋಗ್ಯ ಸಮಸ್ಯೆಯಿಂದ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ : ಅಭಿಮಾನಿಗಳಿಗೆ ವಿಡಿಯೋ ಮೂಲಕ ಮನವಿ ಮಾಡಿದ ದರ್ಶನ್‌ – vishwanews24

ಆರೋಗ್ಯ ಸಮಸ್ಯೆಯಿಂದ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ : ಅಭಿಮಾನಿಗಳಿಗೆ ವಿಡಿಯೋ ಮೂಲಕ ಮನವಿ ಮಾಡಿದ ದರ್ಶನ್‌

ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ  ಫೆ.16ರಂದು ಹುಟ್ಟುಹಬ್ಬ. ಈ ಹಿನ್ನೆಲೆ ಫ್ಯಾನ್ಸ್‌ಗೆ ದಾಸ ದರ್ಶನ್ ಪ್ರೀತಿಯ ಮನವಿವೊಂದನ್ನು ಮಾಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದು ಅಭಿಮಾನಿಗಳಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ ಹೇಳಲಾ, ಥ್ಯಾಂಕ್ಸ್ ಹೇಳೋದಾ ನೀವೆಲ್ಲರೂ ಕೊಟ್ಟಿರುವ ಪ್ರೀತಿಗೆ ಏನು ಹೇಳಿದ್ರೂ ಕಮ್ಮಿನೇ. ಅದನ್ನು ಹೇಗೆ ಹಿಂದಿರುಗಿಸಿ ಕೊಡೋದು ನನಗೆ ಗೊತ್ತಾಗುತ್ತಿಲ್ಲ. ಆದರೆ ಇದೇ ಫೆ.16ಕ್ಕೆ ನನ್ನ ಹುಟ್ಟುಹಬ್ಬ. ಪ್ರತಿಯೊಬ್ಬರಿಗೂ ಭೇಟಿಯಾಗಿ ಥ್ಯಾಂಕ್ಸ್ ಹೇಳೋಣ ಅಂತ ಆಸೆ ಇತ್ತು. ನನ್ನ ಆರೋಗ್ಯ ಸಮಸ್ಯೆಯಿಂದ ತುಂಬಾ ಹೊತ್ತು ನಿಂತುಕೊಳ್ಳೋಕೆ ಆಗಲ್ಲ. ಹಾಗಾಗಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಅಂತ ಅಭಿಮಾನಿಗಳಿಗೆ ದರ್ಶನ್ ಮನವಿ ಮಾಡಿದ್ದಾರೆ.

ನಿಂತುಕೊಂಡು ಎಲ್ಲರಿಗೂ ವಿಶ್ ಮಾಡೋಕೆ ನನ್ನ ಕೈಯಲ್ಲಿ ಆಗಲ್ಲ. ಒಂದು ಇಂಜೆಕ್ಷನ್ ತೆಗೆದುಕೊಂಡಾಗ ಒಂದು 15ರಿಂದ 20 ದಿನ ಆರಾಮ ಆಗಿರುತ್ತೇನೆ. ಅದರ ಪವರ್ ಕಮ್ಮಿಯಾಗುತ್ತಿದ್ದಂತೆ ನೋವು ಶುರುವಾಗುತ್ತದೆ. ಆಪರೇಷನ್ ಅನ್ನೋದು ಕಟ್ಟಿಟ್ಟ ಬುಟ್ಟಿ. ಅದು ನನಗೂ ಗೊತ್ತು. ಅದನ್ನು ಮುಂದೆ ಮಾಡಿಸಲೇಬೇಕು ನಾನು. ಈಗ ಇರೋ ಕೆಲಸಗಳಲ್ಲಿ ಈಗಾಗಲೇ ಒಪ್ಪಿಕೊಂಡಿರೋದನ್ನು ಮಾಡಬೇಕಿದೆ. ನನ್ನ ನಿರ್ಮಾಪಕರಿಗೆ ಥ್ಯಾಂಕ್ಯೂ ಹೇಳ್ತೀನಿ. ಯಾಕೆಂದರೆ ಇಷ್ಟು ದಿನ ನನಗಾಗಿ ಕಾದಿದ್ದಾರೆ. ಅವರಿಗೆ ನಾನು ಅನ್ಯಾಯ ಮಾಡಬಾರದು ಅಂತ ಎಷ್ಟು ದಿನ ಸಾಧ್ಯವಾಗುತ್ತದೋ ಅಷ್ಟು ದಿನ ಆಪರೇಷನ್ ಮುಂದಕ್ಕೆ ಹಾಕಲು ನೋಡ್ತಾ ಇದ್ದೀನಿ. ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ ಎಂದು ನಟ ಮನವಿ ಮಾಡಿದ್ದಾರೆ.

 

ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ. 101% ಹೌದು ನಾನು ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ದುಡ್ಡು ವಾಪಸ್ ಕೊಟ್ಟಿದ್ದೇನೆ. ನನ್ನ ಹತ್ತಿರ ಸಿನಿಮಾಗೆ ಬರುವಾಗಲೇ ಸಿಕ್ಕಾಪಟ್ಟೆ ಕಮಿಟ್‌ಮೆಂಟ್ ಇತ್ತು. ಹಾಗಾಗಿ ವಾಪಸ್ ಕೊಟ್ಟೆ. ಮುಂದೆ ನಾವಿಬ್ಬರೂ ಸಿನಿಮಾ ಮಾಡೇ ಮಾಡ್ತೀವಿ.

ಅದಷ್ಟೇ ಅಲ್ಲ, ಮುಂದೆ ನಾನು ಪ್ರೇಮ್ ಒಟ್ಟಾಗಿ ಸಿನಿಮಾ ಮಾಡೇ ಮಾಡುತ್ತೇವೆ. ನನ್ನ ಗುರುಗಳು, ನನ್ನ ಪ್ರೀತಿಯ ಸ್ನೇಹಿತೆಯ ಆಸೆ ಅದು. ಕೆವಿಎನ್ ಪ್ರೊಡಕ್ಷನ್‌ನವರು ಅವರು ಬೇರೆ ಸಿನಿಮಾ ಮಾಡ್ತಿದ್ದಾರೆ. ಮತ್ತೊಂದು ಪ್ರೊಡಕ್ಷನ್ ಅಂದಾಗ ಅವರಿಗೂ ಕಷ್ಟ ಆಗುತ್ತೆ. ಅದಕ್ಕೆ ಯಾರು ಯಾವುದೇ ಪ್ರೊಡಕ್ಷನ್ ಇಲ್ಲದೇ ಸುಮ್ಮನೆ ಇರತಾರಲ್ಲ ಅವರಿಗೆ ಅವಕಾಶ ಕೊಡೋಣ ಅಂತ ಎಂದಿದ್ದಾರೆ.

ನಿಮ್ಮ ಪ್ರೀತಿ, ಅಭಿಮಾನ, ಪ್ರೋತ್ಸಾಹ ನನ್ನ ಮೇಲೆ ಇರೋದಕ್ಕೆ ಯಾವಾಗಲೂ ಚಿರಋಣಿಯಾಗಿರುತ್ತೇನೆ. ಇದನ್ನು ನಾನೆಂದೂ ತೀರಿಸೋಕೆ ಆಗಲ್ಲ ಎಂದಿದ್ದಾರೆ. ಈ ವೇಳೆ, ನಾನು 3 ಜನರಿಗೆ ಥ್ಯಾಂಕ್ಸ್ ಹೇಳಬೇಕು. ಧನ್ವೀರ್ ಯಾವಾಗಲೂ ಪಾಪ ನನ್ನ ಜೊತೆಯಲಿಯೇ ಇರುತ್ತಿದ್ದರು. ನನ್ನ ದೊಡ್ಡ ಬೆಂಬಲವಾಗಿ ನಿಂತರು. ‘ಬುಲ್ ಬುಲ್’ ರಚಿತಾ ರಾಮ್‌ಗೂ ಥ್ಯಾಂಕ್ಯೂ. ನನ್ನ ಪ್ರಾಣ ಸ್ನೇಹಿತೆ ಆಗಿರುವ ರಕ್ಷಿತಾಗೂ ಥ್ಯಾಂಕ್ಸ್. ನನ್ನ ಎಲ್ಲಾ ಸೆಲೆಬ್ರಿಟಿಗಳು ಧನ್ಯವಾದಗಳು.

 

Vishwa News 24

Recent Posts

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

10 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

10 hours ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

11 hours ago

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

14 hours ago

ಜೂ.25 ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ – vishwanews24

ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…

14 hours ago

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು – vishwanews24

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…

14 hours ago