Featured

ಆರ್ಡರ್ ಮಾಡಿದ್ದು ಲ್ಯಾಪ್‌ಟಾಪ್‌ ಬಂದಿದ್ದು ಡಿಟರ್ಜೆಂಟ್‌ ಸೋಪ್ ; ಮರು ಪಾವತಿಗೆ ನಿರಾಕರಿಸಿದ ‘Flipkart’ – Vishwanews24

‘ಲ್ಯಾಪ್‍ ಟಾಪ್’ ಆರ್ಡರ್ ಮಾಡಿದ ವ್ಯಕ್ತಿಗೆ ಬಂತು ‘ಡಿಟರ್ಜೆಂಟ್ ಬಾರ್’, ಮರು ಪಾವತಿಗೆ ನಿರಾಕರಿಸಿದ ‘Flipkart’

ನವದೆಹಲಿ: ಗ್ರಾಹಕರೊಬ್ಬರು ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದು, ಸಾಬೂನು ಬಂದಿದೆ ಎಂದು ಆರೋಪಿಸಿದ್ದಾರೆ. ಅಚ್ಚರಿ ಅನ್ನುವಂತೆ ಫ್ಲಿಪ್ ಕಾರ್ಟ್‍ ಸಂಸ್ಥೆ ಇದನ್ನ ನಿರಾಕರಿಸಿದ್ದು, ಮರು ಪಾವತಿಸಲು ನಿರಾಕರಿಸಿದೆ.

ಹಬ್ಬದ ಸಮಯದಲ್ಲಿ ಗ್ರಾಹಕರನ್ನ ಸೆಳೆಯಲು ತಮ್ಮ ವ್ಯಾಪಾರವನ್ನ ಹೆಚ್ಚಿಸಲು ಅನೇಕ ಆನ್‌ಲೈನ್ ಸೈಟ್‌ಗಳು ಬಂಪರ್ ಕೊಡುಗೆಗಳನ್ನ ಘೋಷಿಸಿವೆ. ಆದ್ರೆ, ಬಿಗ್ ಬಿಲಿಯನ್ ಡೇಸ್ ಮಾರಾಟವು ನನ್ನ ಮನಸ್ಸನ್ನ ಛಿದ್ರಗೊಳಿಸಿದೆ ಎಂದು ಪ್ರಮುಖ ಆನ್‌ಲೈನ್ ಗ್ರಾಹಕರು ಹೇಳಿಕೊಂಡಿದ್ದಾರೆ. ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್ ಆಫರ್‌ನಲ್ಲಿ ಲ್ಯಾಪ್‌ಟಾಪ್‌ ಆರ್ಡರ್ ಮಾಡಿದ್ದಾರೆ. ತೀರಾ ವಿತರಿಸಿದಾಗ ಬಾಕ್ಸ್ ತೆರೆದು ನೋಡಿ ಬೆಚ್ಚಿ ಬೀಳುವ ಸರದಿ ನಮ್ಮ ಕುಟುಂಬದ್ದು ಎಂದು ಅಳಲು ತೋಡಿಕೊಂಡಿದ್ದಾರೆ.

ಬಿಗ್ ಬಿಲಿಯನ್ ಡೇಸ್ ಸೇಲ್‌ನ ಭಾಗವಾಗಿ ಯಶಸ್ವಿ ಶರ್ಮಾ ಎಂಬ ವ್ಯಕ್ತಿ ಲ್ಯಾಪ್‌ಟಾಪ್‌ಗಾಗಿ ಆನ್‌ಲೈನ್ ಆರ್ಡರ್ ಮಾಡಿದ್ದಾರೆ. ಆದ್ರೆ, ಆರ್ಡರ್ ಡೆಲಿವರಿ ಸಮಯದಲ್ಲಿ ಓಪನ್ ಬಾಕ್ಸ್ ಪರಿಕಲ್ಪನೆಯ ಬಗ್ಗೆ ತಿಳಿದಿರಲಿಲ್ಲ ಎಂದು ಅವ್ರು ಹೇಳಿದರು. ಓಪನ್-ಬಾಕ್ಸ್ ಎಂದರೆ ಡೆಲಿವರಿ ಬಾಯ್ ಲ್ಯಾಪ್‌ಟಾಪ್ ಪರಿಶೀಲಿಸಿದ ನಂತ್ರವೇ ಒಟಿಪಿ ನೀಡಬೇಕು. ಇದು ತಿಳಿಯದೇ ಡೆಲಿವರಿ ಬಾಯ್ ಕೊಟ್ಟ ಬಾಕ್ಸ್ ತೆಗೆದುಕೊಂಡು ಓಟಿಪಿ ಹೇಳಿ ಕಳುಹಿಸಿದ್ದಾರೆ. ಡೆಲಿವರಿ ಬಾಯ್ ಒಟಿಪಿ ಪಡೆದು ಬಾಕ್ಸ್ ತೆರೆಯದೇ ಹೊರಟು ಹೋಗಿದ್ದಾನೆ.

ಆದ್ರೆ, ತೀರಾ ಲ್ಯಾಪ್ ಟಾಪ್ ಬಾಕ್ಸ್ ತೆರೆದಾಗ ಲ್ಯಾಪ್ ಟಾಪ್ ಬದಲು ಸೋಪು ಕಂಡು ಯಶಸ್ವಿ ಶರ್ಮಾ ಅಕ್ಷರಶಃ ಶಾಕ್ ಆಗಿದ್ದಾರೆ. ಡೆಲಿವರಿ ಬಾಯ್ ಬಾಕ್ಸ್ ಚೆಕ್ ಮಾಡದೆ ಬಂದು ಹೋಗಿದ್ದಕ್ಕೆ ನನ್ನ ಬಳಿ ಸಿಸಿಟಿವಿ ಪುರಾವೆ ಇದೆ. ಡೆಲಿವರಿ ಬಾಯ್ ಬಂದು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಅವನ ಮುಂದೆ ಲ್ಯಾಪ್‌ಟಾಪ್ ಬಾಕ್ಸ್ ತೆರೆಯಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳ ಸಮೇತ ಫ್ಲಿಪ್‌ಕಾರ್ಟ್ ಕಸ್ಟಮರ್ ಕೇರ್‌ಗೆ ದೂರು ನೀಡಿದರೂ ಅವರೂ ಆತನನ್ನ ದೂಷಿಸಿದ್ದಾರೆ. ಈ ವಿಷಯವು ತನ್ನನ್ನ ತುಂಬಾ ವಿಸ್ಮಯಗೊಳಿಸುತ್ತಿದೆ ಎಂದು ಯಶಸ್ವಿ ಶರ್ಮಾ ಹೇಳಿದ್ದಾರೆ.

ಯಶಸ್ವಿ ಶರ್ಮಾ, ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಫ್ಲಿಪ್‌ಕಾರ್ಡ್‌ನಿಂದ ಹೇಗೆ ಮೋಸ ಹೋದರು ಎಂಬ ಸಂಪೂರ್ಣ ಕಥೆಯನ್ನ ಉಲ್ಲೇಖಿಸಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆದರೆ, ಫ್ಲಿಪ್‌ಕಾರ್ಟ್‌ನ ಹಿರಿಯ ಗ್ರಾಹಕ ಬೆಂಬಲ ಕಾರ್ಯನಿರ್ವಾಹಕರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಲ್ಯಾಪ್‌ಟಾಪ್ ನೀಡಲು ಅಸಾಧ್ಯ ಎಂದು ಹೇಳಿದ್ದಾರೆ. ಇನ್ನು ಡೆಲಿವರಿ ಸಮಯದಲ್ಲಿ ಲ್ಯಾಪ್‌ಟಾಪ್ ಪರಿಶೀಲಿಸದೆ ಒಟಿಪಿ ನೀಡಬಾರದು. ಈ ವಿಚಾರದಲ್ಲಿ ಇದು ತಮ್ಮ ಕೊನೆಯ ಪ್ರತಿಕ್ರಿಯೆ, ಇನ್ನು ಮುಂದೆ ಈ ವಿಚಾರಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

4 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

5 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

5 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

5 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

5 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

5 days ago