Featured

ಆರ್ ಎಸ್ ಎಸ್, ಜೆಡಿಎಸ್ ಗೆ ನನ್ನ ಕಂಡರೆ ಭಯ , ಅದಕ್ಕೆ ನನ್ನ ಟಾರ್ಗೆಟ್ ಮಾಡಿ ಮಾತನಾಡುತ್ತಾರೆ : ಸಿದ್ದರಾಮಯ್ಯ – Vishwanews24

ಆರ್ ಎಸ್ ಎಸ್, ಜೆಡಿಎಸ್ ಗೆ ನನ್ನ ಕಂಡರೆ ಭಯ , ಅದಕ್ಕೆ ನನ್ನ ಟಾರ್ಗೆಟ್ ಮಾಡಿ ಮಾತನಾಡುತ್ತಾರೆ : ಸಿದ್ದರಾಮಯ್ಯ

ಕೊಪ್ಪಳ: ಆರ್‌ಎಸ್‌ಎಸ್ ಗೆ ಹಾಗೂ ಕುಮಾರಸ್ವಾಮಿಗೆ ನನ್ನ ಕಂಡರೆ ಭಯವಿದೆ. ಅದಕ್ಕೆ ಅವರು ನನ್ನ ಬಗ್ಗೆ ಪದೇ ಪದೇ ಮಾತಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ಕೊಪ್ಪಳ ತಾಲ್ಲೂಕಿನ ಬಸಾಪೂರ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ಅವರಿಬ್ಬರಿಗೂ ನನ್ನ ಕಂಡರೆ ಭಯ ಅದಕ್ಕೆ ನನ್ನ ಟಾರ್ಗೆಟ್ ಮಾಡಿ ಮಾತನಾಡುತ್ತಾರೆ ಎಂದರು.

ಕುಮಾರಸ್ವಾಮಿ ‌ಸಿಎಂ ಆಗುತ್ತೇನೆ ಎಂಬ ಹೇಳಿಕೆ ವಿಚಾರ, ಜನ ಆಶೀರ್ವಾದ ಮಾಡಬೇಕು. ನಾವೇ ಹೋಗಿ ಕುಳಿಕೊಳ್ಳಲು ಆಗುತ್ತಾ? ಎಂದ ಅವರು ಶಿಕ್ಷಕರ ಚುನಾವಣೆಯಲ್ಲಿ ಜೆಡಿಎಸ್ ಯಾವ ಸ್ಥಾನದಲ್ಲಿದೆ? ಅಂತಹ ಪಾರ್ಟಿ ಅಧಿಕಾರಕ್ಕೆ ಬರುತ್ತದೆಯೇ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಮಹಾರಾಷ್ಟ್ರದಲ್ಲಿ ನಾವು ಅಧಿಕಾರ ಕಳೆದುಕೊಂಡಿಲ್ಲ. ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವಂತೆ ಬಿಜೆಪಿಗರು ಮಾಡುತ್ತಿದ್ದಾರೆ. ಆಪರೇಷನ್ ಕಮಲ ಮಾಡಿ ಮಹಾರಾಷ್ಟ್ರ ಸರ್ಕಾರ ಬೀಳಿಸುತ್ತಿದ್ದಾರೆ. ಬಿಜೆಪಿಗರು ಆಪರೇಷನ್ ಕಮಲ ಮಾಡ್ತಿರೋದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇವರು ತುಂಬಾ ಪ್ರಜಾಪ್ರಭುತ್ವದ ಬಗ್ಗೆ ಮಾತಾಡ್ತಾರೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ತಂದರು, ಕಪ್ಪು ಚುಕ್ಕೆ ಎನ್ನುತ್ತಾರೆ. ಆದರೆ, ಇವರು ಮಾಡುತ್ತಿರುವುದು ಏನು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಮಧ್ಯ ಪ್ರದೇಶದ ಸರ್ಕಾರ ಕಿತ್ತು ಹಾಕಿದ್ದು ಯಾರು? ಕರ್ನಾಟಕದ ಸಮ್ಮಿಶ್ರ ಸರ್ಕಾರ ಕಿತ್ತಾಕಿದ್ದು ಯಾರು? ಪಾಪದ ಹಣ ಅವರ‌ ಬಳಿ‌ ಇದೆ, ‌ಲೂಟಿ ಹೊಡೆದ ಹಣ ಇದೆ. ಒಬ್ಬೊಬ್ಬ ಶಾಕರಿಗೆ 25- 30 ಕೋಟಿ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಶಾಸಕರೆಲ್ಲ ಸುಮ್ಮನೇ ಬರ್ತಾರಾ? ಅಧಿಕಾರ ಇದೆಯಲ್ಲ ಎಲ್ಲ ಕಡೆ ಕಾಂಗ್ರೆಸ್ ಸರ್ಕಾರ ಕಿತ್ತು ಹಾಕುತ್ತಿದ್ದಾರೆ. ಕೇಂದ್ರದಲ್ಲಿ ‌ಅಧಿಕಾರ ಇದೆ, ದುಡ್ಡಿದೆ ಅದಕ್ಕಾಗಿ ಎಲ್ಲ ಸರ್ಕಾರ ಬೀಳಿಸುತ್ತಿದ್ದಾರೆ ಎಂದು ಆರೋಪಿಸಿದರು.

Vishwa News 24

Recent Posts

ಉಡುಪಿ : ಮೇ 5 ರಂದು ನೇರ ಸಂದರ್ಶನ -vishwanews24

ಉಡುಪಿ : ಮೇ 5 ರಂದು ನೇರ ಸಂದರ್ಶನ ಉಡುಪಿ : ಉದ್ಯೋಗ ಆಕಾಂಕ್ಷಿಗಳಿಗೆ ಮೇ 5 ರಂದು ಬೆಳಗ್ಗೆ…

3 days ago

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ – vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಡೈಮಂಡ್ಸ್ ಆಭರಣಗಳ ಪ್ರದರ್ಶನಕ್ಕೆ ಚಾಲನೆ ಉಡುಪಿ : ಮಾಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ…

3 days ago

ಬಿಜೆಪಿ ಬಡ, ಮಧ್ಯಮ ವರ್ಗದವರ ಬದುಕನ್ನು ದುರ್ಬಲ ಮಾಡಲು ಹೊರಟಿದೆ : ಈಶ್ವರ್ ಖಂಡ್ರೆ – vishwanews24

ಮೋದಿ ದುರಾಡಳಿತದ ವಿರುದ್ಧ ಮಾತಾಡಲು ಬಿಜೆಪಿಗರಿಗೆ ಸವಾಲು.. ಬಿಜೆಪಿಯ ಬಡಜನ ವಿರೋಧಿ ಬಣ್ಣ ಮತ್ತೆ ಬಯಲು.. ವಾಣಿಜ್ಯ ಸಿಲಿಂಡರ್ ದರ…

3 days ago

ಪತ್ನಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಗಂಡ ನೇಣಿಗೆ ಶರಣು – vishwanews24

ಪತ್ನಿಯ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಗಂಡ ನೇಣಿಗೆ ಶರಣು ಕಾರವಾರ: ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡ…

3 days ago

ಕೌಟುಂಬಿಕ ಕಲಹ : ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ  – vishwanews24

ಮನೆಯಲ್ಲಿದ್ದ ಚಿನ್ನಾಭರಣ ಸಮೇತ ಪತ್ನಿ ಪರಾರಿ: ಮಕ್ಕಳಿಬ್ಬರನ್ನು ಕೊಲೆಗೈದು ನೇಣಿಗೆ ಶರಣಾದ ಪತಿ ಕುಣಿಗಲ್ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ…

3 days ago

ನಿಮ್ಮ ಮೊಬೈಲ್‌ನಲ್ಲಿ ಅಲರ್ಟ್ ಸಂದೇಶ, ಸೈರನ್ ಮೊಳಗಿದ್ರೆ ಭಯಪಡಬೇಡಿ.. !! – vishwanews24

NDMAಯಿಂದ ಬರುತ್ತೆ ತುರ್ತು ಎಚ್ಚರಿಕೆ ಸಂದೇಶ.. ನಿಮ್ಮ ಮೊಬೈಲ್‌ನಲ್ಲಿ ಅಲರ್ಟ್ ಸಂದೇಶ, ಸೈರನ್ ಮೊಳಗಿದ್ರೆ ಭಯಪಡಬೇಡಿ.. ನಿಮ್ಮ ಮೊಬೈಲ್‌ ಫೋನ್‌…

3 days ago