Featured

ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ಪತ್ನಿ ಬಗ್ಗೆ ಜೋಕ್​ : ನಿರೂಪಕನ ಕೆನ್ನೆಗೆ ಬಾರಿಸಿದ ನಟ ವಿಲ್​ ಸ್ಮಿತ್​; ವಿಡಿಯೋ ವೈರಲ್ – Vishwanews24​

ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ಪತ್ನಿ ಬಗ್ಗೆ ಜೋಕ್​ ನಿರೂಪಕನ ಕೆನ್ನೆಗೆ ಬಾರಿಸಿದ ನಟ ವಿಲ್​ ಸ್ಮಿತ್​; ವಿಡಿಯೋ ವೈರಲ್​

ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ನಟ ವಿಲ್​ ಸ್ಮಿತ್​ ಅವರು ಎರಡು ಕಾರಣಕ್ಕಾಗಿ ಸುದ್ದಿ ಆಗಿದ್ದಾರೆ. ‘ಕಿಂಗ್​ ರಿಚರ್ಡ್’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರು ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದರು. ಹಾಗೆಯೇ, ಹಾಸ್ಯ ನಟನ ಕೆನ್ನೆಗೆ ಬಾರಿಸುವ ಮೂಲಕ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಎಂದಿನಂತೆ ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಖುಷಿಖುಷಿಯಾಗಿ ನಡೆಯುತ್ತಿತ್ತು. ವೇದಿಕೆ ಮೇಲೆ ಹಾಸ್ಯ ನಟ ಕ್ರಿಸ್​ ರಾಕ್​ ಮಾತನಾಡುತ್ತಿದ್ದರು. ಅವರ ಮಾತು ವಿಲ್​ ಸ್ಮಿತ್​ ಪತ್ನಿ ಜೇಡಾ ಪಿಂಕೆಟ್​ ಸ್ಮಿತ್​  ಕಡೆಗೆ ತಿರುಗಿತು. ಜೇಡಾ ಪಿಂಕೆಟ್​​ ಸ್ಮಿತ್​ ಬಗ್ಗೆ ಅವರು ಜೋಕ್​ ಮಾಡಿದರು. ಅದನ್ನು ಕೇಳಿ ಇಡೀ ಸಭಾಂಗಣ ಜೋರಾಗಿ ನಕ್ಕಿತು. ಒಂದು ಕ್ಷಣ ವಿಲ್​ ಸ್ಮಿತ್​ ಕೂಡ ನಕ್ಕರು. ಆದರೆ ಅಲ್ಲಿ ಮರುಕ್ಷಣ ನಡೆದಿದ್ದು ನಿಜಕ್ಕೂ ಶಾಕಿಂಗ್​. ಕೂಡಲೇ ವೇದಿಕೆ ಏರಿದ ವಿಲ್​ ಸ್ಮಿತ್​ ಅವರು ಕ್ರಿಸ್​ ರಾಕ್​ ಮುಖಕ್ಕೆ ಬಾರಿಸಿದರು. ಇಡೀ ಸಭಾಂಗಣದಲ್ಲಿ ಮೌನ ಆವರಿಸಿತು. ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ವಿತರಿಸಲು ಕ್ರಿಸ್​ ರಾಕ್​ ಅವರನ್ನು ವೇದಿಕೆಗೆ ಕರೆಯಲಾಗಿತ್ತು. ಈ ವೇಳೆ ಅವರು ಸುಮ್ಮನಿರಲಾರದೇ ಜೇಡಾ ಪಿಂಕೆಟ್​​ ಸ್ಮಿತ್​ ಬಗ್ಗೆ ಕಾಮಿಡಿ ಮಾಡಿದರು. ಅದು ವಿಲ್​ ಸ್ಮಿತ್​ ಅವರಿಗೆ ಸರಿ ಎನಿಸಲಿಲ್ಲ. ಪತ್ನಿಯ ಬಗ್ಗೆ ಜೋಕ್​ ಮಾಡಿದ್ದಕ್ಕಾಗಿ ಕ್ರಿಸ್​ ರಾಕ್​ ಕೆನ್ನೆಗೆ ವಿಲ್​ ​ಸ್ಮಿತ್​ ಬಾರಿಸಿದರು. ಇದನ್ನು ಕಂಡು ಎಲ್ಲರಿಗೂ ಅಚ್ಚರಿ ಆಗಿದೆ.

ಇಡೀ ಸನ್ನಿವೇಶ ಸ್ಕ್ರಿಪ್ಟೆಡ್​ ಇರಬಹುದಾ? ವೇದಿಕೆಯಲ್ಲಿ ಬೇಕಂತಲೇ ಈ ರೀತಿ ನಾಟಕ ಮಾಡಿರಬಹುದಾ ಎಂಬ ಪ್ರಶ್ನೆ ಕೂಡ ಜನರ ಮನದಲ್ಲಿ ಮೂಡಿದೆ. ಒಟ್ಟಿನಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ರೀತಿ ಆಗಿದ್ದರ ಬಗ್ಗೆ ಸ್ವತಃ ವಿಲ್​ ಸ್ಮಿತ್​ ಅವರಿಗೂ ಬೇಸರ ಇದೆ. ಈಗ ಅವರು ಕ್ಷಮೆ ಕೇಳಿದ್ದಾರೆ. ‘ನಾನು ಅಕಾಡೆಮಿಯ ಕ್ಷಮೆ ಕೇಳುತ್ತೇನೆ. ನಾಮನಿರ್ದೇಶಕಗೊಂಡ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ’ ಎಂದು ಅವರು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ಆ ವಿಡಿಯೋ ಕೂಡ ವೈರಲ್​ ಆಗುತ್ತಿದೆ.

‘ದಿ ಐಸ್​ ಆಫ್​ ಟ್ಯಾಮಿ ಫೇ’ ಸಿನಿಮಾದಲ್ಲಿನ ನಟನೆಗಾಗಿ ಜೆಸ್ಸಿಕಾ ಚಾಸ್ಟೇನ್​ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಮೂವರು ಮಹಿಳೆಯರು (ರೆಜಿನಾ ಹಾಲ್​, ಎಮಿ ಶೂಮಾರ್, ವೊಂಡಾ ಸ್ಕೈಸ್​) ಆಸ್ಕರ್​ ಸಮಾರಂಭವನ್ನು ಹೋಸ್ಟ್​ ಮಾಡಿದ್ದಾರೆ. ಶಾನ್​ ಹೆಡರ್ ನಿರ್ದೇಶನದ ‘ಕೋಡಾ’ ಚಿತ್ರವು ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡಿದೆ.

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

10 hours ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

10 hours ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

1 day ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

1 day ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

1 day ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

1 day ago