ಕಾಪು: ಕಾಪು ಪುರಸಭೆ ಘೋಷಣೆಯ ನಂತರ ಮೊದಲ ಚುನಾವಣೆಯಲ್ಲಿ ಬಿಜೆಪಿ ಹನ್ನೊಂದು ಮತ್ತು ಕಾಂಗ್ರೆಸ್ ಹನ್ನೆರಡು ಸೀಟ್ ಗೆಲ್ಲುವ ಮುಖಾಂತರ ಮೊದಲ ಬಾರಿಗೆ ಕಾಂಗ್ರೆಸ್ ಪುರಸಭೆಯ ಗದ್ದುಗೆ ಏರಿ 30 ತಿಂಗಳು ಆಡಳಿತ ನಡೆಸಿತ್ತು.
ತದನಂತರ ಸರ್ಕಾರ ಬದಲಾವಣೆ ಸಮಯದಲ್ಲಿ ಶಾಸಕ ಸಂಸದೆಯ ಮತ ಬಲದಲ್ಲಿ ಬಿಜೆಪಿ ಗದ್ದುಗೆ ಏರುವ ತಯಾರಿಯಲ್ಲಿರುವಾಗಲೇ ಅಧ್ಯಕ್ಷ ಮೀಸಲಾತಿ ಕೋರ್ಟ್ ಮೆಟ್ಟಿಲು ಏರಿದ್ದರ ಪರಿಣಾಮ ಕೇವಲ ಬಿಜೆಪಿ ಎಂಟು ತಿಂಗಳುಗಳ ಕಾಲ ಆಡಳಿತ ನಡೆಸಿತ್ತು.
ಆದರೇ ಜೂನ್ 3 ನೇ ತಾರೀಖುವಿಗೆ ಇಡೀ ಕೌನ್ಸಿಲ್ ಅಧಿಕಾರ ಕೊನೆಗೊಂಡು ಮುಂದಿನ ಚುನಾವಣೆ ಘೋಷಣೆಯಾಗಿ ನೂತನ ಕೌನ್ಸಿಲ್ ಬರುವವರೆಗೆ ಆಡಳಿತಾಧಿಕಾರಿ ಅಧಿಕಾರಿ ಚಲಾಯಿಸಲಿದ್ದಾರೆ.
ಐದು ವರ್ಷದಲ್ಲಿ ಹುಸಿಯಾದ ಭರವಸೆ
“ಪುರಸಭೆಯಾದ ನಂತರ ಕಾಪು ಪೇಟೆಯ ಕೊಳಚೆ ನೀರಿನ ಘಟಲ, ಕಾಪು ಕಲ್ಕುಡ ದೇವಸ್ಥಾನದ ಹತ್ತಿರದ ಕಸ ವಿಲೇವಾರಿ, ಕುಡಿಯುವ ನೀರು ಬಗ್ಗೆ ಸರಿಯಾದ ವ್ಯವಸ್ಥೆ,ಬೀದಿ ದೀಪದ ಸಮಸ್ಯೆ ಸೇರಿದಂತೆ ಹತ್ತಾರು ಮೂಲಭೂತ ವ್ಯವಸ್ಥೆ ಕಲ್ಪಿಸದೆ ಭರವಸೆ ಹುಸಿಯಾಗಿದೆ.”
ಡಬ್ಬಲ್ ಟ್ಯಾಕ್ಸ್ – ಜನತೆಗೆ ಲಾಭ ಇಲ್ಲ
ಗ್ರಾಮ ಪಂಚಾಯತ್ನಿಂದ ಮೇಲ್ದರ್ಜೆಗೆ ಏರಿಸಿ ಪುರಸಭೆ ಮಾಡಿದ ಪರಿಣಾಮದಿಂದಾಗಿ ಮನೆ ತೆರಿಗೆ,ಕಮರ್ಷಿಯಲ್ ತೆರಿಗೆ ಸೇರಿದಂತೆ ಎಲ್ಲಾ ತೆರಿಗೆಗಳು ಪಂಚಾಯತಿಗಿಂತ ಪುರಸಭೆಗೆ ದುಪ್ಪಟ್ಟು ಏರಿಕೆಯಾದರೂ ಕೂಡ ಇದರಿಂದ ಜನತೆಗೆ ಯಾವುದೇ ಲಾಭ ಆಗಿಲ್ಲ ಅನ್ನುತ್ತಾರೆ ಜನ.
ಸೀಟ್ ಬಿಸಿ ಮಾಡಿ ಹಾಗೆ ಬಂದು ಹೀಗೆ ಕೆಲವು ಸದಸ್ಯರು..!!
ಪುರಸಭೆಯ ಸುಮಾರು 38 ಸಾಮಾನ್ಯ ಸಭೆಯಲ್ಲಿ ಒಂದೇ ಒಂದು ಅಜೆಂಡಾದ ಪ್ರಶ್ನೋತ್ತರಗಳಲ್ಲಿ ತುಟಿ ಬಿಚ್ಚದೆ ಹಾಗೇ ಬಂದು ಹೀಗೆ ಹೋದ ಸದಸ್ಯರು ಕೂಡ ಇದ್ದಾರೆ ಎಂಬುದು ವಿಪರ್ಯಾಸದ ಸಂಗತಿ.
ಏನೇ ಆಗಲಿ ಹಲವಾರು ವಿರೋಧದ ನಡುವೆಯೂ ಪಂಚಾಯತ್ ಮಟ್ಟದಿಂದ ಪುರಸಭೆ ಮೇಲ್ದರ್ಜೆಗೊಂಡ ಕೌನ್ಸಿಲ್ ಗೆ ಐದು ವರ್ಷ ಪೂರ್ಣಗೊಂಡು ಇಂದಿಗೆ ಅಧಿಕಾರಿ ಕೌನ್ಸಿಲ್ ನ ಅಧಿಕಾರಕೊನೆಗೊಳ್ಳಲಿದೆ, ಮುಂದಿನ ಚುನಾವಣೆ ನಡೆದು ಅಧಿಕಾರ ಬರುವವರೆಗೆ ಆಡಳಿತಾಧಿಕಾರಿ ಸುಪ್ರೀಮ್ ಆಗಿರುತ್ತೆ.
ವರದಿ: ಪೊಲಿಟಿಕಲ್ ಬ್ಯುರೋ ವಿಶ್ವನ್ಯೂಸ್24
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…