ಮೇಷ : ವೃತ್ತಿ ಜೀವನದಲ್ಲಿ ಮುನ್ನಡೆ ಕಾದಿದೆ. ಇದರಿಂದ ನೀವು ಸಖತ್ ಖುಷಿಯಾಗಿ ಇರಲಿದ್ದೀರಿ.
ವೃಷಭ : ಪುತ್ರಿಗೆ ವೈವಾಹಿಕ ಸಂಬಂಧ ಕೂಡಿ ಬಂದಿಲ್ಲ ಎಂದು ಅನೇಕ ವರ್ಷಗಳಿಂದ ತಲೆಕೆಡಿಸಿಕೊಂಡಿದ್ದ ನಿಮಗೆ ಇಂದು ಶುಭ ಸುದ್ದಿ ಕಾದಿದೆ.
ಮಿಥುನ : ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಸಂಬಂಧಿಗಳು ಔತಣ ಕೂಟಕ್ಕೆ ನಿಮ್ಮನ್ನು ಆಹ್ವಾನಿಸಲಿದ್ದಾರೆ.
ಕಟಕ : ಉದ್ಯಮದ ನಿಮಿತ್ತ ದೂರ ಪ್ರಯಾಣ ಮಾಡುವಿರಿ. ಇದರಿಂದ ನಿಮಗೆ ಬೆನ್ನು ನೋವಿನ ಸಮಸ್ಯೆ ಭಾದಿಸಬಹುದು.
ಸಿಂಹ : ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮನೆ ನಿರ್ಮಾಣ ಕಾರ್ಯವು ಇಂದಿನಿಂದ ಮತ್ತೆ ಚುರುಕುಗೊಳ್ಳಲಿದೆ. ಸಂಗಾತಿ ನಿಮಗೆ ಅನಿರೀಕ್ಷಿತ ಉಡುಗೊರೆಯನ್ನು ನೀಡಲಿದ್ದಾರೆ.
ಕನ್ಯಾ : ಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ಕೆ ಅಡ್ಡಿ ಆತಂಕಗಳು ಎದುರಾಗುವ ಸಾಧ್ಯತೆ ಇದೆ. ಪ್ರೀತಿ ಪಾತ್ರರಿಗೆ ಅನಿರೀಕ್ಷಿತ ಉಡುಗೊರೆಯನ್ನು ನೀಡುವಿರಿ. ಬೆನ್ನಿಗೆ ಚೂರಿ ಹಾಕುವವರಿಂದ ಎಚ್ಚರಿಕೆಯಿಂದಿರಿ. ಕಂಕಣ ಭಾಗ್ಯವಿದೆ.
ತುಲಾ : ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆಯ ಪೆಟ್ಟು ಎಂಬ ಮಾತಿದೆ. ಮೇಲಾಧಿಕಾರಿಗಳು ನಿಮ್ಮ ತಪ್ಪುಗಳನ್ನು ಪದೇ ಪದೇ ಎಚ್ಚರಿಸುತ್ತಿದ್ದಾರೆ.
ವೃಶ್ಚಿಕ : ಮನಸ್ಸಿನ ಮಾತಿಗೆ ಬೆಲೆ ನೀಡಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಪ್ರತಿ ಬಾರಿಯೂ ನೀವು ಅಂದುಕೊಂಡಂತೆ ಪರಿಸ್ಥಿತಿ ಇರಲೇಬೇಕು ಎಂದೇನಿಲ್ಲ. ಹೀಗಾಗಿ ಯಾವುದೇ ಸ್ಥಿತಿಯಲ್ಲೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ.
ಧನು : ಹಿರಿಯರು ತುಳಿದ ತಪ್ಪು ದಾರಿಯನ್ನೇ ನೀವು ತುಳಿಯುತ್ತಿದ್ದೀರಿ. ಇದು ಒಳ್ಳೆಯದಲ್ಲ. ಆದಷ್ಟು ತಪ್ಪನ್ನು ತಿದ್ದಿಕೊಳ್ಳಿ. ಸಂಗಾತಿಯು ನಿಮ್ಮೆಲ್ಲ ಕಾರ್ಯಗಳಿಗೆ ಬೆನ್ನೆಲುಬಿನಂತೆ ನಿಲ್ಲಲಿದ್ದಾರೆ. ಕೃಷಿಕರಿಗೆ ಲಾಭವಿದೆ.
ಮಕರ : ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆಯಿದೆ. ಆರೋಗ್ಯದಲ್ಲಿ ಏರು ಪೇರು ಉಂಟಾಗಬಹುದು. ಆದರೆ ಚಿಂತೆ ಬೇಡ.
ಕುಂಭ : ಕಚೇರಿ ವಿಚಾರದಲ್ಲಿ ಅಡಚಣೆ ಇದ್ದರೂ ಸಹ ಎಲ್ಲವನ್ನೂ ನಿಭಾಯಿಸಲಿದ್ದೀರಿ. ಎಲ್ಲಾ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಿ. ಹಳೆಯ ಸಾಲಗಳು ತೀರಲಿವೆ.
ಮೀನ : ನಿಮ್ಮ ಎದುರು ಒಳ್ಳೆಯ ಮಾತುಗಳನ್ನಾಡಿ ಹಿಂದೆ ನಿಮ್ಮದೇ ಚಾಡಿ ಹೇಳುವವರ ವಿರುದ್ಧ ಅಂತರ ಕಾಯ್ದುಕೊಳ್ಳಿ. ರಾಜಕೀಯ ವ್ಯಕ್ತಿಗಳಿಗೆ ಇಂದು ಉನ್ನತ ಸ್ಥಾನ ಲಭಿಸಲಿದೆ.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…