ಮೇಷ : ಇಂದು ನೀವು ಅಂದುಕೊಂಡ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಹಣವನ್ನು ಗಳಿಸಬೇಕೆಂಬ ನಿಮ್ಮ ಆಸೆಯು ಅಡ್ಡದಾರಿಗೆ ಎಳೆದೊಯ್ಯುವ ಸಾಧ್ಯತೆ ಇದೆ.
ವೃಷಭ : ಪುಣ್ಯ ಕ್ಷೇತ್ರಗಳಿಗೆ ಪ್ರಯಾಣ ಬೆಳೆಸುವ ನೀವು ದಾನ – ಧರ್ಮ ಮಾಡುವಿರಿ. ಕೆಲಸದ ವಾತಾವರಣದಲ್ಲಿ ಗಮನಾರ್ಹ ಬದಲಾವಣೆಗಳು ಉಂಟಾಗಲಿದೆ.
ಮಿಥುನ : ಪತ್ನಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇದರಿಂದ ನಿಮಗೆ ಆಸ್ಪತ್ರೆಗೆ ತೆರಳಬೇಕಾಗಿ ಬರಲಿದೆ. ರಾತ್ರಿ ಪಾಳಿಯ ಕೆಲಸಗಾರರಿಗೆ ಇಂದು ಒತ್ತಡ ಹೆಚ್ಚಲಿದೆ. ಸ್ನೇಹಿತರು ಆರ್ಥಿಕವಾಗಿ ಸಹಾಯ ಮಾಡಲಿದ್ದಾರೆ.
ಕಟಕ : ಸಂಗಾತಿಯೊಡನೆ ಉತ್ತಮ ಸಮಯವನ್ನು ಕಳೆಯುವಿರಿ. ಮಕ್ಕಳಲ್ಲಿ ಓದಿನ ಪ್ರಗತಿಯು ನಿಮ್ಮ ನೆಮ್ಮದಿಯನ್ನು ಹೆಚ್ಚಿಸಲಿದೆ.
ಸಿಂಹ : ಉದ್ಯೋಗದಲ್ಲಿ ಇಂದು ನಿಮಗೆ ಯಶಸ್ಸಿದೆ. ನಿಮ್ಮ ಕಾರ್ಯ ವೈಖರಿಯು ಮೇಲಾಧಿಕಾರಿಗಳಿಂದ ಮೆಚ್ಚುಗೆಯನ್ನು ಗಳಿಸಲಿದೆ.
ಕನ್ಯಾ : ಹಲ್ಲು ನೋವಿನ ಸಮಸ್ಯೆಯು ನಿಮ್ಮನ್ನು ಕಾಡಲಿದೆ. ಇದರಿಂದಾಗಿ ನಿಮಗೆ ಇಡೀ ದಿನ ಕಿರಿಕಿರಿ ಎನಿಸಲಿದೆ. ಆರೋಗ್ಯದ ಬಗ್ಗೆ ಜಾಗೃತೆ ಇರಲಿ. ಇಂದು ನಿಮ್ಮ ಮನೆಗೆ ಅತಿಥಿ ಆಗಮನವಿದೆ.
ತುಲಾ : ಅಮೂಲ್ಯವಾದ ವಸ್ತುವೊಂದನ್ನು ಇಂದು ಕಳೆದುಕೊಳ್ಳಲಿದ್ದೀರಿ. ರಾತ್ರಿ ವೇಳೆಗೆ ದುಃಖಕರ ಸುದ್ದಿಯೊಂದು ನಿಮ್ಮ ಕಿವಿಗೆ ಬಂದಪ್ಪಳಿಸುವ ಸಾಧ್ಯತೆ ಇದೆ.
ವೃಶ್ಚಿಕ : ಹಣ ಉಳಿತಾಯ ಆಗಬೇಕು ಅಂದರೆ ವ್ಯರ್ಥ ಖರ್ಚಿಗೆ ಕಡಿವಾಣ ಬೀಳಲೇಬೇಕು. ವೇಗವಾಗಿ ವಾಹನ ಸಂಚಾರ ಮಾಡಲೇಬೇಡಿ. .
ಧನು : ಸಂಬಂಧಿಗಳು ನಿಮ್ಮ ಗುಣವನ್ನು ಕೊಂಡಾಡಲಿದ್ದಾರೆ. ಇಂದು ನೀವು ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡುವಿರಿ. ದೊಡ್ಡ ಮೊತ್ತದ ಹಣವು ಲಾಭದ ರೂಪದಲ್ಲಿ ನಿಮ್ಮ ಕೈ ಸೇರಲಿದೆ.
ಮಕರ : ಯಾರದ್ದೋ ಮೇಲಿನ ಕೋಪಕ್ಕೆ ಸ್ವೀಕರಿಸಿದ ಸವಾಲು ನಿಮಗೆ ದೊಡ್ಡ ಕಷ್ಟವನ್ನೇ ನೀಡುವುದು. ಹೀಗಾಗಿ ಕೋಪದ ಕೈಗೆ ಎಂದಿಗೂ ಬುದ್ಧಿ ಕೊಡಬೇಡಿ. ಮನೆಯಲ್ಲಿ ಕೃಷಿ ಸಂಬಂಧಿ ಚಟುವಟಿಕೆಗಳು ನಡೆಯಲಿದೆ.
ಕುಂಭ : ರಾಜಕೀಯ ಕ್ಷೇತ್ರದಲ್ಲಿ ಇರುವವರು ಇಂದು ಸಾರ್ವಜನಿಕ ಜೀವನದಲ್ಲಿ ಮನ್ನಣೆ ಗಳಿಸಲಿದ್ದಾರೆ. ಮಕ್ಕಳ ಓದಿನ ಬಗ್ಗೆ ಜಾಗ್ರತೆ ಅತ್ಯಗತ್ಯ.
ಮೀನ : ಪ್ರೀತಿ ಪಾತ್ರರಿಂದ ಸಿಹಿ ಸುದ್ದಿಯನ್ನು ಕೇಳುವಿರಿ. ಮಕ್ಕಳು ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ. ಉದರ ಸಂಬಂಧಿ ಕಾಯಿಲೆಗಳು ನಿಮ್ಮನ್ನು ಭಾದಿಸುವ ಸಾಧ್ಯತೆ ಇದೆ.
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…
ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…
ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…
ಕಾಸರಗೋಡು : ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…
ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…