ಇಂದಿನ ರಾಶಿ ಭವಿಷ್ಯ ;ಶ್ರೀ ಗಣಪತಿ ಭಟ್ 8088827292 -Vishwanews24

ಮಾರ್ಚ್‌ 9, ಸೋಮವಾರದ ರಾಶಿಫಲ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

​ಮೇಷ ರಾಶಿ

ಈ ದಿನ ವಿನಾಕಾರಣ ಆಪಾದನೆಗಳನ್ನು ಎದುರಿಸುವ ವಿಚಾರ ಬರಬಹುದು. ಅದಕ್ಕೆ ನೀವು ಕಾರಣರಲ್ಲದಿದ್ದರೂ ಗ್ರಹಗಳು ಅಶುಭ ಸ್ಥಿತಿಯಲ್ಲಿ ಸಂಚರಿಸುವ ಮೂಲಕ ನಿಮ್ಮ ಗೌರವ-ಘನತೆಗೆ ಕುಂದುಂಟು ಮಾಡುವವು. ನಿಮ್ಮ ಸ್ನೇಹಿತರಿಗೆ ನಿಮ್ಮ ಸಹಾಯ, ಬೆಂಬಲ ಬೇಕಿದ್ದಲ್ಲಿ ಅವರಿಗೆ ನೆರವಾಗಿ. ಕೆಲಸದಲ್ಲಿ ಸ್ವಲ್ಪ ಗೊಂದಲಗಳಿದ್ದರೂ, ಕೆಲಸವು ಕಠಿಣವಾಗಿದ್ದರೂ ಅದನ್ನು ಎದುರಿಸುವ ಪ್ರಯತ್ನ ಮಾಡಿ. ಪ್ರೀತಿಯ ಜೀವನವನ್ನು ನೋಡುವುದಾದರೆ ನಿಮ್ಮ ಸಂಗಾತಿಯ ನಡುವೆ ವಾದಗಳಲ್ಲಿ ತೊಡಗಿಕೊಳ್ಳದಿರುವುದು ಉತ್ತಮ.

​ವೃಷಭ ರಾಶಿ

ಸರ್ಕಾರದ ಹೊಸ ಆರ್ಥಿಕ ನೀತಿಯು ಕೆಲವರಿಗೆ ಸಂಕಷ್ಟಗಳನ್ನು ತಂದಿರುವುದಾದರೂ ನಿಮ್ಮ ವಿಷಯದಲ್ಲಿ ಒಳಿತೆ ಆಗಿದೆ.ಇದಕ್ಕೆಲ್ಲ ಹಿರಿಯರ ಆಶೀರ್ವಾದ ಕಾರಣ. ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿಯೇ ನಡೆಯುತ್ತವೆ. ಹೊಸ ಯೋಜನೆಗಳನ್ನು ಕೈಗೊಳ್ಳುವ ಮೊದಲು ಯೋಚನೆ ಮಾಡುವುದು ಉತ್ತಮ. ಈ ದಿನ ನಿಮಗೆ ಸಂತೋಷವನ್ನುಂಟುಮಾಡುವ ಬೆಳವಣಿಗೆಗಳು ನಡೆಯುವವು. ಈ ಸಕಾರಾತ್ಮಕ ಬೆಳವಣಿಗೆಯು ನೀವು ಸಮರ್ಥವಾಗಿ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಸಹಾಯ ಮಾಡುವುದು. ನಿಮ್ಮ ಸಂಗಾತಿಯ ಜೊತೆ ಪ್ರಾಮಾಣಿಕವಾಗಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ.

​ಮಿಥುನ ರಾಶಿ

ನಾನು ತಿಳಿದಿರುವುದೇ ಸತ್ಯ ಎಂಬ ಮೊಂಡುವಾದವನ್ನು ಮಾಡದಿರಿ. ಎದುರಾಳಿಯ ವಿಚಾರಧಾರೆಗಳನ್ನು ಕಿವಿಗೊಟ್ಟು ಆಲಿಸಿರಿ. ನಿಮ್ಮ ವಿರೋಧಿಗಳಿಗಿಂತ ನಿಮ್ಮ ಆತ್ಮೀಯರೇ ನಿಮಗೆ ಮೋಸ ಮಾಡುವರು. ನಿಮ್ಮನ್ನು ತಡೆಹಿಡಿಯುತ್ತಿರುವ ಹಾಗೂ ಆತಂಕಕ್ಕೀಡುಮಾಡುತ್ತಿರುವ ಸಮಸ್ಯೆಗಳಿಗೆ ಮೊದಲು ಪರಿಹಾರ ಕಂಡುಕೊಳ್ಳಿ. ಕೆಲಸದ ಸ್ಥಳದಲ್ಲಿ ಎದುರಾಗಬಹುದಾದ ತೊಂದರೆಗಳನ್ನು ಯಶಸ್ವಿಯಾಗಿ ಎದುರಿಸಲು ಸಜ್ಜಾಗಿರುವಿರಿ.

​ಕಟಕ ರಾಶಿ

ಮುಖ ನೋಡಿ ಮಣೆ ಹಾಕುವ ಮಂದಿಯಿಂದ ಬೇಸರ ಎದುರಾಗುವುದು. ಕಾಲವೇ ಹಾಗೆ ಅದಕ್ಕಾಗಿ ಬೇಸರ ಮಾಡಿಕೊಳ್ಳದಿರುವುದು ಜಾಣರ ಲಕ್ಷಣ. ನಿಮಗೆ ನಿಮ್ಮದೇ ಆದ ವ್ಯಕ್ತಿತ್ವವಿದ್ದು ನಿಮ್ಮನ್ನು ಓಲೈಸುವ ಜನರಿಗಾಗಿ ಸ್ಪಂದಿಸಿರಿ. ಸುತ್ತಮುತ್ತಲಿನವರೊಂದಿಗೆ ಸಂವಹನ ಮಾಡುವಾಗ ಭಿನ್ನಾಭಿಪ್ರಾಯ ಹಾಗೂ ಉದ್ವೇಗಕ್ಕೊಳಗಾಗುವುದನ್ನು ತಪ್ಪಿಸಿ. ಆದಷ್ಟು ಶಾಂತವಾಗಿರಿ. ನಿಮ್ಮ ಸಂಗಾತಿಯೊಂದಿಗೆ ರೋಮಾಂಚನಕಾರಿ ಸಂಗತಿಗಳನ್ನು ಯೋಜಿಸಲು ಮರೆಯದಿರಿ.

ಸಿಂಹ ರಾಶಿ

ಕುತರ್ಕ ಹಾಗೂ ಮುಂಗೋಪಗಳನ್ನು ನಿಯಂತ್ರಿಸಿ, ಇದರಿಂದ ನಿಮಗೆ ಲಾಭವಾಗುವುದು. ಎಲ್ಲಾ ಕಾಲಕ್ಕೂ ನಿಮ್ಮ ಮಾತೇ ನಡೆಯುವುದು ಎಂಬ ಭ್ರಮೆ ಬೇಡ. ಉತ್ತಮ ಸಲಹೆಗಳೂ ಇದ್ದರೆ ಅನ್ಯರಿಂದಲೂ ಸ್ವೀಕರಿಸುವುದು ತಪ್ಪಲ್ಲ. ತೊಂದರೆಗಳು ಎದುರಾದರೆ ಅದನ್ನು ನಿರ್ಲಕ್ಷ್ಯಿಸದಿರಿ. ಅದನ್ನು ಪರಿಹರಿಸಲು ಪ್ರಯತ್ನಿಸಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗಲೂ ಎಚ್ಚರಿಕೆಯಿಂದ ಯೋಚನೆ ಮಾಡಿ. ಕೆಟ್ಟ ಆಲೋಚನೆ ಮತ್ತು ಆತುರದ ನಿರ್ಧಾರ ಮಾಡದಿರಿ.

​ಕನ್ಯಾ ರಾಶಿ

ನಿಮ್ಮ ಇಚ್ಛಾಶಕ್ತಿಗೆ ಹೆಚ್ಚಿನ ಬಲವಿದೆ. ಅನೇಕ ಉತ್ತಮ ಕೆಲಸ ಕಾರ್ಯಗಳಲ್ಲಿ ಗೆಲುವನ್ನು ಸಾಧಿಸುವಿರಿ. ವಿರೋಧಿಗಳು ಸಹಾ ನಿಮ್ಮ ಕರ್ತೃತ್ವ ಶಕ್ತಿಯನ್ನು ಕಂಡು ಬೆರಗಾಗುವರು. ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುವುದು. ಆತ್ಮಾವಲೋಕನ ಮಾಡಿಕೊಳ್ಳಲು ಸೂಕ್ತ ದಿನ. ನಡೆಯುತ್ತಿರುವ ದಿನನಿತ್ಯದ ಜಂಜಾಟದಿಂದ ಹೊರಬರಲು ಉಪಾಯ ಹುಡುಕುವಿರಿ. ನಿಮ್ಮ ಸಂಗಾತಿಯೊಂದಿಗೆ ಉತ್ತಮವಾದ ದಿನವನ್ನು ಕಳೆಯುವಿರಿ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

​ತುಲಾ ರಾಶಿ

ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯವನ್ನು ಮೆಚ್ಚಿ ಅಭಿನಂದಿಸುವವರ ಸಂಖ್ಯೆ ಇಂದು ಹೆಚ್ಚಾಗುವುದು. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದು. ನಿಮ್ಮ ದೈನಂದಿನ ವೇಳಾಪಟ್ಟಿ ಈ ದಿನ ಬದಲಾಗಿದೆ ಎಂದೆನಿಸಬಹುದು. ನೀವು ಆದಷ್ಟು ವಿಶ್ರಾಂತಿ ಪಡೆಯಿರಿ ಮತ್ತು ನಿಮ್ಮ ಶಕ್ತಿಯನ್ನು ಮರಳಿ ಪಡೆಯಲು ಸಮಯ ತೆಗೆದುಕೊಳ್ಳಿ. ನಿಮ್ಮ ದಿನನಿತ್ಯದ ಕೆಲಸದ ಒತ್ತಡಗಳು ನಿಮ್ಮ ಹಾಗೂ ಸಂಗಾತಿಯ ಮಧ್ಯೆ ಅಂತರವನ್ನು ಸೃಷ್ಟಿಬಹುದು. ಆದ್ದರಿಂದ ಈ ಪರಿಸ್ಥಿತಿಯನ್ನು ನಿಮ್ಮ ಕೈಲಾದಷ್ಟು ಬದಲಾಯಿಸಲು ಪ್ರಯತ್ನಿಸಿ.

​ವೃಶ್ಚಿಕ ರಾಶಿ

ಸಂಕಷ್ಟದ ದಿನಗಳಿಂದ ಹೇಗೆ ಪಾರಾಗಬಹುದೆಂಬುದು ನಿಮ್ಮ ಅನುಭವ ತಿಳಿಸುತ್ತದೆ. ಈ ದಿನದ ಕ್ಲಿಷ್ಟಕರ ಸನ್ನಿವೇಶವನ್ನೂ ಸಹ ಭಗವಂತನ ದಯೆಯಿಂದ ಎದುರಿಸಿ ಯಶಸ್ಸನ್ನು ಹೊಂದುವಿರಿ. ಈ ದಿನ ಹೊಸ ಶಕ್ತಿ ಹಾಗೂ ಆತ್ಮವಿಶ್ವಾಸದಿಂದ ನಿಮ್ಮ ಎಲ್ಲಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದು. ಅಗತ್ಯವಿರುವವರಿಗೆ ಸಹಾಯಹಸ್ತ ಚಾಚಿ. ಸಂಗಾತಿಯ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಪ್ರಗತಿಗೆ ಮುಳ್ಳಾಗಿರುವ ಸಮಸ್ಯೆಗಳಿಗೆ ರಚನಾತ್ಮಕ ಪರಿಹಾರ ಕಂಡು ಹಿಡಿಯುವಿರಿ.

​ಧನಸ್ಸು ರಾಶಿ

ಅತ್ಯಮೂಲ್ಯವಾದ ದಾಖಲೆ ಪತ್ರಗಳನ್ನು ಜತನದಿಂದ ಕಾಪಾಡುವುದು ಉತ್ತಮ. ಪ್ರವಾಸ ಸಮಯದಲ್ಲಿ ಅವುಗಳಿಗೆ ಸೂಕ್ತ ಭದ್ರತೆಯನ್ನು ಕಾಯ್ದುಕೊಳ್ಳಿರಿ, ಈ ದಿನ ಮಹತ್ತರ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಎಚ್ಚರಿಕೆ. ಕೆಲವೊಂದು ಘಟನೆಗಳಿಗೆ ಸಂಬಂಧಪಟ್ಟದಂತೆ ಪ್ರತಿಕ್ರಿಯಿಸಬೇಕಾದರೆ ಮಿಂಚಿನ ವೇಗದ ಪ್ರತಿಸ್ಪಂದನ ಅಗತ್ಯ. ಪರಿಸ್ಥಿತಿಯು ನಿಮ್ಮ ಕೈಮೀರದಿರಲು ಇದು ಏಕೈಕ ಮಾರ್ಗವಾಗಿದೆ. ನಿಮ್ಮ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸಿ. ಇಲ್ಲದಿದ್ದರೆ ಮುಂದೆ ಪಶ್ಚಾತಾಪ ಪಡಬೇಕಾದೀತು. ಆದಷ್ಟು ಶಾಂತವಾಗಿರಿ.

​ಮಕರ ರಾಶಿ

ಅಧ್ಯಾಪಕ ವೃತ್ತಿಯು ಗೌರವ ಘನತೆಯನ್ನು ತಂದುಕೊಡುವಂತಹದು. ಅಂತಹ ಮಹತ್ತರ ಹುದ್ದೆಯಲ್ಲಿರುವ ನೀವು ಕೆಲವು ಕೆಟ್ಟ ಸಂಗತಿಗಳಿಂದ ಆಪಾದನೆ ತೆಗೆದುಕೊಳ್ಳುವ ಸಂದರ್ಭ ಎದುರಾಗುವುದು. ಕುಲದೇವತಾ ಸ್ಮರಣೆ ಮಾಡಿರಿ. ನಿಮ್ಮ ಜೀವನದಲ್ಲಿ ಗುರಿಯನ್ನು ಸಾಧಿಸಲು ತುಂಬಾ ಹತ್ತಿರದಲ್ಲಿದ್ದೀರಿ. ಆದ್ದರಿಂದ ಗುರಿ ಸಾಧಿಸುವ ಹಠವನ್ನು ಬಿಡದಿರಿ. ಹಾಗೂ ನಿಮ್ಮ ಪ್ರಯತ್ನಗಳನ್ನು ವ್ಯರ್ಥ ಮಾಡಬೇಡಿ. ಹಿಂದೆ ನಿಮಗೆ ಮಾಡಲು ಧೈರ್ಯವಿಲ್ಲದಿದ್ದನ್ನು ಇಂದು ಭಯವಿಲ್ಲದೇ ಮಾಡಿ. ಸಂಗಾತಿಯೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯಲು ಕಷ್ಟವಾಗಬಹುದು. ನಿಮ್ಮ ಸಂಗಾತಿಗಾಗಿ ಸಮಯವನ್ನು ಇರಿಸಿಕೊಳ್ಳಿ. ವೃತ್ತಿಜೀವನವು ವಾಸ್ತವವಾಗಿ ಉತ್ತಮ ಹಾದಿಯಲ್ಲಿದೆ.

​​ಕುಂಭ ರಾಶಿ

ನಿಮ್ಮ ಪೂರ್ವಿಕರ ಇತಿಹಾಸವನ್ನು ಬಲ್ಲ ಕೆಲವರು ನಿಮ್ಮನ್ನು ಆ ವಂಶಸ್ಥದವರು ಎಂದು ಗೌರವಿಸುವರು. ನಿಮ್ಮ ಮನೆತನಕ್ಕೆ ತಕ್ಕ ಘನತೆ, ಗಾಂಭೀರ್ಯವನ್ನು ಪ್ರದರ್ಶಿಸುವುದು ಇಂದಿನ ದೊಡ್ಡ ಸವಾಲಾಗಿರುವುದು. ಈ ದಿನ ನಿಮಗೆ ಸಕಾರಾತ್ಮಕವಾಗಿರುವುದು. ಈ ದಿನ ವೃತ್ತಿಜೀವನದಲ್ಲಿ ಗೆಲುವು ಸಾಧಿಸುವಿರಿ. ನಿಮ್ಮ ಪಾದಗಳನ್ನು ದೃಢವಾಗಿ ನೆಲದ ಮೇಲೆ ಊರಲು ಪ್ರಯತ್ನಿಸಿ. ನಿಮ್ಮ ಆಂತರಿಕ ಬುದ್ಧಿವಂತಿಕೆಯನ್ನು ಬಳಸಿ. ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಆಯಗಳು ಎದುರಾಗಬಹುದು ಆದ್ದರಿಂದ ಯಾವುದೇ ವಿಷಯದ ಬಗ್ಗೆ ಚರ್ಚೆ ಮಾಡುವಾಗ ಜಾಗರೂಕರಾಗಿರಿ ಹಾಗೂ ಆದಷ್ಟು ಶಾಂತವಾಗಿರಿ.

ಮೀನ ರಾಶಿ

ನಿಮ್ಮ ಹೃದಯಸ್ಪರ್ಶಿ ಮಾತುಗಳಿಂದಾಗಿ ಜನರು ನಿಮ್ಮತ್ತ ಆಕರ್ಷಿತರಾಗುವರು. ಮತ್ತು ನಿಮ್ಮ ಇಷ್ಟಾನಿಷ್ಟಗಳನ್ನು ಪೂರೈಸುವರು. ಸಮಾಜದಲ್ಲಿ ಮಾನಮನ್ನಣೆಗಳು ಆಗುವುದು. ಹಣವು ಕೂಡಾ ಸಾಕಷ್ಟು ದೊರೆಯುವುದು. ಜೀವನದಲ್ಲಿ ಕಾರ್ಯತಂತ್ರಗಳನ್ನು ಬದಲಾಯಿಸಲು ನೀವು ಸಿದ್ಧರಿದ್ದೀರಿ ಆದರೆ ಅದು ಅಪೇಕ್ಷಿತ ಫಲಿತಾಂಶಗಳನ್ನು ನೀಡದು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ತಿಳಿದಿರುತ್ತದೆ. ಆದ್ದರಿಂದ ಭವಿಷ್ಯದಲ್ಲಿ ಹೆಚ್ಚು ಕ್ರಿಯಾತ್ಮಕವಾಗಿರಲು ಹಾಗೂ ಆಶಾವಾದಿಯಾಗಿರಲು ಅನುವು ಮಾಡಿಕೊಡುತ್ತದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

8088827292

Vishwa News 24

Recent Posts

₹26.18 ಕೋಟಿ ವೆಚ್ಚದಲ್ಲಿ ಹೈಟೆಕ್ ಸ್ಪರ್ಶ ಪಡೆದ ಬಂಟ್ವಾಳ ರೈಲ್ವೆ ಸ್ಟೇಷನ್ : ಜು.17ಕ್ಕೆ ಪಿಎಂ ಮೋದಿಯಿಂದ ವರ್ಚುವಲ್‌ ಆಗಿ ಲೋಕಾರ್ಪಣೆ! – vishwanews24

₹26.18 ಕೋಟಿ ವೆಚ್ಚದಲ್ಲಿ ಹೈಟೆಕ್ ಸ್ಪರ್ಶ ಪಡೆದ ಬಂಟ್ವಾಳ ರೈಲ್ವೆ ಸ್ಟೇಷನ್: ಜು.17ಕ್ಕೆ ಪಿಎಂ ಮೋದಿಯಿಂದ ವರ್ಚುವಲ್‌ ಆಗಿ ಲೋಕಾರ್ಪಣೆ!…

8 hours ago

ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಹುಂಡಿ ಹಣ ಎಣಿಕೆಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ – vishwanews24

ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಹುಂಡಿ ಹಣ ಎಣಿಕೆಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಬೆಂಗಳೂರು: ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ ಹಣ ಕಳ್ಳತನ…

8 hours ago

ಆತ್ಮಹತ್ಯೆಗೆ ಶರಣಾದ ನವದಂಪತಿ ; ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡು ಪತಿಯೂ ನೇಣಿಗೆ ಶರಣು  – vishwanews24

ಆತ್ಮಹತ್ಯೆಗೆ ಶರಣಾದ ನವದಂಪತಿ ; ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡು ಪತಿಯೂ ನೇಣಿಗೆ ಶರಣು  ತುಮಕೂರು: ಪತ್ನಿ ನೇಣಿಗೆ ಶರಣಾಗಿದ್ದನ್ನು…

12 hours ago

ಬೆಂಗಳೂರು: ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24

ಬೆಂಗಳೂರು: ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾದ ನವವಿವಾಹಿತೆ ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ನವವಿವಾಹಿತೆಯೊಬ್ಬರು ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ…

12 hours ago

ಗಾನಕೋಗಿಲೆ ಎಸ್‌.ಜಾನಕಿ ವಿಧಿವಶ -vishwanews24

ಗಾನಕೋಗಿಲೆ ಎಸ್‌.ಜಾನಕಿ ವಿಧಿವಶ ಮೈಸೂರು : ತಮ್ಮ ಮಾಧುರ್ಯಭರಿತ ಧ್ವನಿಯಿಂದಲೇ ಚಿತ್ರರಂಗದಲ್ಲಿ ಅದೆಷ್ಟೋ ಜನರ ಮನಗೆದ್ದಿದ್ದ ಹಿನ್ನಲೆ ಗಾಯಕಿ ಎಸ್.ಜಾನಕಿ…

2 days ago

ಬೃಹತ್ ಡ್ರಗ್ ಜಾಲ ಪತ್ತೆ ಮಾಡಿದ ಪೊಲೀಸರ ತಂಡಕ್ಕೆ 10 ಲಕ್ಷ ರೂ. ನಗದು ಬಹುಮಾನ : ಸಿಎಂ ಡಿ.ಕೆ.ಶಿ – vishwanews24

ಬೃಹತ್ ಡ್ರಗ್ ಜಾಲ ಪತ್ತೆ ಮಾಡಿದ ಪೊಲೀಸರ ತಂಡಕ್ಕೆ 10 ಲಕ್ಷ ರೂ. ನಗದು ಬಹುಮಾನ : ಸಿಎಂ ಡಿ.ಕೆ.ಶಿವಕುಮಾರ್…

2 days ago