Featured

ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ ; ನನ್ನ ಮಗ ಇಲ್ಲ ಎನ್ನುವ ನೋವು ನನ್ನನ್ನು ಕಾಡುತ್ತಿದೆ : ಶಿವರಾಜ್‍ಕುಮಾರ್ – Vishwanews24

ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ ; ನನ್ನ ಮಗ ಇಲ್ಲ ಎನ್ನುವ ನೋವು ನನ್ನನ್ನು ಕಾಡುತ್ತಿದೆ : ಶಿವರಾಜ್‍ಕುಮಾರ್ – Vishwanews24

ಪುನೀತ್‍ಗೆ ಪದ್ಮಶ್ರೀ ಯಾಕೆ, ಪುನೀತ್ ಅಮರ ಶ್ರೀ..

ಬೆಂಗಳೂರು: ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ. ಪುನೀತ್ ರಾಜ್‍ಕುಮಾರ್ ಅವರಿಗೆ ಪದ್ಮಶ್ರೀ ಕೊಡಬೇಕು ಎನ್ನುವ ವಿಚಾರವಾಗಿ ಕೆಲವು ಗಣ್ಯರು ಒತ್ತಾಯ ಮಾಡುತ್ತಿದ್ದಾರೆ. ಈ ಕುರಿತಾಗಿ ನಟ ಶಿವರಾಜ್‍ಕುಮಾರ್ ಅವರು ಮಾತನಾಡಿದ್ದಾರೆ.

ಪುನೀತ್ ರಾಜ್‍ಕುಮಾರ್ ಅವರ ಸಮಾಧಿ ಬಳಿಯ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುನೀತ್‍ಗೆ ಪದ್ಮಶ್ರೀ ಯಾಕೆ, ಪುನೀತ್ ಅಮರ ಶ್ರೀ. ಹೆಸರ ಪಕ್ಕದಲ್ಲೊಂದು ಟೈಟಲ್ ಅಷ್ಟೆಯಾಗಿದೆ. ಎಲ್ಲರ ಆತ್ಮದಲ್ಲಿಯೂ ಅಪ್ಪು ಶ್ರೀಯಾಗಿರುತ್ತಾನೆ ಅದೇ ನಮಗೆ ದೊಡ್ಡುದು ಎಂದು ಹೇಳಿದ್ದಾರೆ.

ಗದ್ದಲ ಆಗೋದು ಬೇಡ ಎಂದು ಅಭಿಮಾನಿಗಳಿಗೆ ಅಪ್ಪು ಸಮಾಧಿ ಬಳಿ ಬರಲು ಅವಕಾಶ ನೀಡಿಲ್ಲ. ನಾವು 11 ದಿನದ ಕಾರ್ಯ ಎಂದು ಮಾಡುತ್ತಿರುವುದೇ ನೋವಿನ ಸಂಗತಿಯಾಗಿದೆ. ಬೆಳಗ್ಗೆ ಅಂದುಕೊಳ್ಳತ್ತಾ ಇದ್ದೆ, ಇದೆಲ್ಲಾ ಅವನಿಗೆ ಮಾಡಬೇಕಾ? ಎಂದು ನೋವಾಯಿತ್ತು. ಅಭಿಮಾನಿಗಳಿಗೆ ಮೊದಲು ಬಿಡಬೇಕು ಆದರೆ ಕುಟುಂಬದ ಕೆಲವು ಆಚಾರ, ಸಂಸ್ಕೃತಿಯನ್ನು ನಾವು ಅನುಸರಿಸಬೇಕು ಎಂದಿದ್ದಾರೆ.

ನೋವು ಇದೆ ಆದರೆ ಎಲ್ಲಾ ಕಾರ್ಯ ಮಾಡಬೇಕಿದೆ. ನನಗೆ ಇದನ್ನು ಬಿಟ್ಟು ಬೇರೆ ಏನನ್ನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಇವತ್ತು ಮನೆಯಲ್ಲಿ ಪೂಜೆ ಇದೆ. ಈ ವಿಚಾರವಾಗಿ ಅಣ್ಣನಾಗಿ ಮಾತನಾಡೋದು ಕಷ್ಟವಾಗಿದೆ. ಅಪ್ಪುನನ್ನು ಕಳೆದುಕೊಂಡಿರುವುದು ನನ್ನ ಮಗ, ನನ್ನ ಬಲಗೈ ಹೋದಾಗಿದೆ. ನಾನು ಅಳಬಹುದು, ದುಃಖವನ್ನು ನಾನು ತೋಡಿಕೊಳ್ಳಬಹುದು. ನಾನು ಜೀವಂತವಾಗಿ ಇರುವವರೆಗೂ, ನನ್ನ ಜೀವ ಹೋದ ಮೇಲೂ ಈ ನೋವು ಹೋಗಲ್ಲ ಎಂದಿದ್ದಾರೆ.

ಅಪ್ಪು ಖುಷಿ ಆಗಬೇಕಾದರೆ ಜನ ಪ್ರಾಣ ಕಳೆದುಕೊಳ್ಳಬಾರದು. ಅಪ್ಪು ಹೆಸರನ್ನು ಉಳಿಸಲು ನೀವು ಪ್ರಯತ್ನಪಡಬೇಕು. ನಿಮ್ಮ ಕುಟುಂಬ ನಿಮ್ಮನ್ನು ನಂಬಿಕೊಂಡು ಇದೆ. ನಿಮ್ಮ ಕೈಲಿ ಆದಷ್ಟು ಬೇರೆಯವರಿಗೆ ಸಹಯಾ ಮಾಡಿ. ಪ್ರಾಣವನ್ನು ಮಾತ್ರ ಕಳೆದುಕೊಳ್ಳ ಬೇಡಿ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಹೇಳುತ್ತಾ ಬಾವುಕರಾಗಿದ್ದಾರೆ.

ಈಗಾಗಲೇ ನಾವೆಲ್ಲ ನೋವನಲ್ಲಿ ಇದ್ದೇವೆ. ಅಪ್ಪು ಹೋಗಿದ್ದಾನೆ ಎಂದು ಯಾಕೆ ಅಂದು ಕೊಳ್ಳುತ್ತಿರ, ನಮ್ಮಲ್ಲಿ ಇದ್ದಾರೆ ಅಂತಾ ತಿಳಿದುಕೊಳ್ಳಿ. ಪುನೀತ್ ತಂದೆಗೆ ತಕ್ಕ ಮಗನಾಗಿದ್ದಾನೆ ಎಂದಿದ್ದಾರೆ.

Vishwa News 24

Recent Posts

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ – vishwanews24

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…

22 hours ago

ಬೀದರ್ : ಮಳೆ ಆರ್ಭಟ ; ಸಿಡಿಲು ಬಡಿದು ಯುವಕ ಸಾವು – vishwanews24

ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…

23 hours ago

ಬೆಳ್ತಂಗಡಿ:  ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಿಂದ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ – vishwanews24

ಬೆಳ್ತಂಗಡಿ:  ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…

23 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…

24 hours ago

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು – vishwanews24

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…

1 day ago

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? – vishwanews24

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…

1 day ago