ಬೆಂಗಳೂರು: ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ. ಪುನೀತ್ ರಾಜ್‍ಕುಮಾರ್ ಅವರಿಗೆ ಪದ್ಮಶ್ರೀ ಕೊಡಬೇಕು ಎನ್ನುವ ವಿಚಾರವಾಗಿ ಕೆಲವು ಗಣ್ಯರು ಒತ್ತಾಯ ಮಾಡುತ್ತಿದ್ದಾರೆ. ಈ ಕುರಿತಾಗಿ ನಟ ಶಿವರಾಜ್‍ಕುಮಾರ್ ಅವರು ಮಾತನಾಡಿದ್ದಾರೆ.
ಪುನೀತ್ ರಾಜ್‍ಕುಮಾರ್ ಅವರ ಸಮಾಧಿ ಬಳಿಯ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುನೀತ್‍ಗೆ ಪದ್ಮಶ್ರೀ ಯಾಕೆ, ಪುನೀತ್ ಅಮರ ಶ್ರೀ. ಹೆಸರ ಪಕ್ಕದಲ್ಲೊಂದು ಟೈಟಲ್ ಅಷ್ಟೆಯಾಗಿದೆ. ಎಲ್ಲರ ಆತ್ಮದಲ್ಲಿಯೂ ಅಪ್ಪು ಶ್ರೀಯಾಗಿರುತ್ತಾನೆ ಅದೇ ನಮಗೆ ದೊಡ್ಡುದು ಎಂದು ಹೇಳಿದ್ದಾರೆ.
ಗದ್ದಲ ಆಗೋದು ಬೇಡ ಎಂದು ಅಭಿಮಾನಿಗಳಿಗೆ ಅಪ್ಪು ಸಮಾಧಿ ಬಳಿ ಬರಲು ಅವಕಾಶ ನೀಡಿಲ್ಲ. ನಾವು 11 ದಿನದ ಕಾರ್ಯ ಎಂದು ಮಾಡುತ್ತಿರುವುದೇ ನೋವಿನ ಸಂಗತಿಯಾಗಿದೆ. ಬೆಳಗ್ಗೆ ಅಂದುಕೊಳ್ಳತ್ತಾ ಇದ್ದೆ, ಇದೆಲ್ಲಾ ಅವನಿಗೆ ಮಾಡಬೇಕಾ? ಎಂದು ನೋವಾಯಿತ್ತು. ಅಭಿಮಾನಿಗಳಿಗೆ ಮೊದಲು ಬಿಡಬೇಕು ಆದರೆ ಕುಟುಂಬದ ಕೆಲವು ಆಚಾರ, ಸಂಸ್ಕೃತಿಯನ್ನು ನಾವು ಅನುಸರಿಸಬೇಕು ಎಂದಿದ್ದಾರೆ.
ನೋವು ಇದೆ ಆದರೆ ಎಲ್ಲಾ ಕಾರ್ಯ ಮಾಡಬೇಕಿದೆ. ನನಗೆ ಇದನ್ನು ಬಿಟ್ಟು ಬೇರೆ ಏನನ್ನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಇವತ್ತು ಮನೆಯಲ್ಲಿ ಪೂಜೆ ಇದೆ. ಈ ವಿಚಾರವಾಗಿ ಅಣ್ಣನಾಗಿ ಮಾತನಾಡೋದು ಕಷ್ಟವಾಗಿದೆ. ಅಪ್ಪುನನ್ನು ಕಳೆದುಕೊಂಡಿರುವುದು ನನ್ನ ಮಗ, ನನ್ನ ಬಲಗೈ ಹೋದಾಗಿದೆ. ನಾನು ಅಳಬಹುದು, ದುಃಖವನ್ನು ನಾನು ತೋಡಿಕೊಳ್ಳಬಹುದು. ನಾನು ಜೀವಂತವಾಗಿ ಇರುವವರೆಗೂ, ನನ್ನ ಜೀವ ಹೋದ ಮೇಲೂ ಈ ನೋವು ಹೋಗಲ್ಲ ಎಂದಿದ್ದಾರೆ.
ಅಪ್ಪು ಖುಷಿ ಆಗಬೇಕಾದರೆ ಜನ ಪ್ರಾಣ ಕಳೆದುಕೊಳ್ಳಬಾರದು. ಅಪ್ಪು ಹೆಸರನ್ನು ಉಳಿಸಲು ನೀವು ಪ್ರಯತ್ನಪಡಬೇಕು. ನಿಮ್ಮ ಕುಟುಂಬ ನಿಮ್ಮನ್ನು ನಂಬಿಕೊಂಡು ಇದೆ. ನಿಮ್ಮ ಕೈಲಿ ಆದಷ್ಟು ಬೇರೆಯವರಿಗೆ ಸಹಯಾ ಮಾಡಿ. ಪ್ರಾಣವನ್ನು ಮಾತ್ರ ಕಳೆದುಕೊಳ್ಳ ಬೇಡಿ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಹೇಳುತ್ತಾ ಬಾವುಕರಾಗಿದ್ದಾರೆ.
ಈಗಾಗಲೇ ನಾವೆಲ್ಲ ನೋವನಲ್ಲಿ ಇದ್ದೇವೆ. ಅಪ್ಪು ಹೋಗಿದ್ದಾನೆ ಎಂದು ಯಾಕೆ ಅಂದು ಕೊಳ್ಳುತ್ತಿರ, ನಮ್ಮಲ್ಲಿ ಇದ್ದಾರೆ ಅಂತಾ ತಿಳಿದುಕೊಳ್ಳಿ. ಪುನೀತ್ ತಂದೆಗೆ ತಕ್ಕ ಮಗನಾಗಿದ್ದಾನೆ ಎಂದಿದ್ದಾರೆ.
2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್ ವಿಶ್ವಾಸ ಬೆಂಗಳೂರು: '2028ಕ್ಕೆ ರಾಜ್ಯದಲ್ಲಿ…
ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ…
ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ ಬೆಂಗಳೂರು: ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ…
ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ ಲಕ್ನೋ: ಬಕ್ರೀದ್…
ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ ಉಡುಪಿ: ದೇಶದಲ್ಲಿ ಮತ್ತೆ ಇಂಧನ…
ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ ಉಡುಪಿ: ಬೈಂದೂರು ತಾಲೂಕು ಕೊಲ್ಲೂರು…