ಇಂದು ಸಂಜೆಯಿಂದ ಫೆ.22 ರವರೆಗೆ ಪೊಳಲಿ ತಾಯಿಯ ಕಲಶಾಭಿಷೇಕದಂದು ಮತ್ತೆ ವಿಭಿನ್ನ ವೇಷಧರಿಸಿ ಮತ್ತೊಂದು ಜೀವಕ್ಕೆ ಆಸರೆಯಾಗಲಿದ್ದಾರೆ ಮೂಡಬಿದ್ರೆಯ ವಿಕ್ಕಿ ಶೆಟ್ಟಿ , ತಮ್ಮ ಕೈಲಾದ ಸಹಾಯ ನೀಡಿ ನಿಹಾರಿಕ ಕುಟುಂಬದ ಜೊತೆ ಕೈ ಜೋಡಿಸಿ ..
ಫೆ. 19 ಶುಕ್ರವಾರ ಸಂಜೆಯಿಂದ 22 ಆದಿತ್ಯವಾರದವರೆಗೆ ಪೊಳಲಿ ತಾಯಿಯ ಸನ್ನಿಧಾನದಲ್ಲಿ ನಡೆಯುವ ಕಲಶಾಭಿಷೇಕದಂದು ಮಗುವಿಗಾಗಿ / ಮಗುವಿನ ಚಿಕಿತ್ಸೆಗಾಗಿ ಹೊಸ ಅವತಾರ ( ಹೊಸವೇಷ)ದಲ್ಲಿ ನಾನು ನಿಮ್ಮ ಮುಂದೆ ಬರಲಿದ್ದೇನೆ. ಕ್ಷೇತ್ರದ ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಪುಟ್ಟ ಕಂದಮ್ಮನ ಚಿಕಿತ್ಸೆಗೆ ನೆರವಾಗಬೇಕು ಎಂದು ವಿನಂತಿ.
ವಾಚ್ ಮ್ಯಾನ್ ಕೆಲಸದಲ್ಲಿರುವ ತಂದೆ, ಗೃಹಿಣಿ ತಾಯಿ. ಚಿಕ್ಕದಾದ ಸಂತೋಷದ ಚಿಲುಮೆ ಆಗಿದ್ದ ಈ ಕುಟುಂಬಕ್ಕೆ ಕೆಲವು ತಿಂಗಳುಗಳಿಂದ ತಮ್ಮ 7 ವರ್ಷದ ಮಗುವಿಗೆ ಕಾಡುವ ವಿಪರೀತ ಜ್ವರ ಬರಸಿಡಿಲಿನಂತೆ ಎಗರಿದೆ. ಎಲ್ಲರ ಕಣ್ಮಣಿಯಾಗಿದ್ದ ಈ ಕಂದಮ್ಮ ಬಿಡದೆ ಕಾಡುವ ಅನಾರೋಗ್ಯದಿಂದ ಕಂಗಾಲಾಗಿದ್ದಾರೆ.
ಮಗುವನ್ನು ದೇರಳಕಟ್ಟೆ , ನಿಟ್ಟೆ ಆಸ್ಪತ್ರೆ, ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಪ್ರಸ್ತುತ ಅತ್ತಾವರದ KMC ಆಸ್ಪತ್ರೆಯಲ್ಲಿರುವ ಈ ಮಗು H.L.H (hemophagocytic lymphohistocytosis) ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾನೆ.
ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವುದರಿಂದ KMC ವೈದ್ಯರ ನಿದರ್ಶನದಂತೆ ಮಗುವನ್ನು “ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಂಜೂದಾರ್ ಷಾ ಕ್ಯಾನ್ಸರ್ ಆಸ್ಪತ್ರೆಗೆ” ಕರೆದುಕೊಂಡು ಹೋಗಿದ್ದು ಅಲ್ಲಿ ನ ಉನ್ನತ ವೈದ್ಯರು ಮೂಳೆ ಅಸ್ಥಿಮಜ್ಜೆ ಕಸಿ (Bone Marrow transplant) ಮಾಡಲು ಸೂಚಿಸುತ್ತಾರೆ.
ಈ ಚಿಕಿತ್ಸೆಗೆ ಅಂದಾಜು 45 ಲಕ್ಷ ರೂಪಾಯಿ ಖರ್ಚಾಗುವ ಸಾಧ್ಯತೆ ಇದ್ದು ಈ ಮೊತ್ತವನ್ನು ಭರಿಸಲು ಕುಟುಂಬವು ಆಶಕ್ತವಾಗಿರುವುದರಿಂದ , ನಮ್ಮ ತುಳುನಾಡ್ ಟ್ರಸ್ಟ್ (ರಿ)ಯ ಆಶಿಸಾ ನಿಧಿ ಯೋಜನೆ ಮತ್ತು ಆತ್ಮೀಯರ ಸಹಕಾರದೊಂದಿಗೆ ದಿನಾಂಕ 19/02/2021 ಶುಕ್ರವಾರ ಸಂಜೆಯಿಂದ 22/02/2021 ಆದಿತ್ಯವಾರದವರೆಗೆ ಪೊಳಲಿ ತಾಯಿಯ ಸನ್ನಿಧಾನದಲ್ಲಿ ನಡೆಯುವ ಕಲಶಾಭಿಷೇಕದಂದು ಮಗುವಿಗಾಗಿ / ಮಗುವಿನ ಚಿಕಿತ್ಸೆಗಾಗಿ ಹೊಸ ಅವತಾರ ( ಹೊಸವೇಷ)ದಲ್ಲಿ ನಾನು ನಿಮ್ಮ ಮುಂದೆ ಬರಲಿದ್ದೇನೆ. ಕ್ಷೇತ್ರದ ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಪುಟ್ಟ ಕಂದಮ್ಮನ ಚಿಕಿತ್ಸೆಗೆ ನೆರವಾಗಬೇಕು ಎಂದು ವಿನಂತಿ.
ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಬಳ್ಳಾರಿ: ಗಂಡನ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು…
ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ;ನೂತನ 'ಚಳಿಗಾಲದ ವೇಳಾಪಟ್ಟಿ ಪ್ರಕಟ ಮಂಗಳೂರು : ಕರಾವಳಿಯ ಪ್ರಯಾಣಿಕರಿಗೆ ದೇಶೀಯ ಹಾಗೂ…
ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…
ಉಡುಪಿ: ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…
ಉಡುಪಿ : ಒಳಚರಂಡಿ ಕಾಮಗಾರಿ; ಸಂಚಾರ ನಿಷೇಧ ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಶಿರಿಬೀಡು ವಾರ್ಡಿನ ಶಾಂಭವಿ ಹೋಟೇಲ್ ಎದುರು ರಸ್ತೆಯಲ್ಲಿ…
ಉಡುಪಿ : ಸರಳ ವಿವಾಹಕ್ಕೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ ಉಡುಪಿ, : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನ ಆರ್ಥಿಕವಾಗಿ…