Featured

ಇಂದು ಸಂಜೆಯಿಂದ ಫೆ.22 ರ‌ವರೆಗೆ ಪೊಳಲಿ ತಾಯಿಯ ಕಲಶಾಭಿಷೇಕದಂದು ಮತ್ತೆ ವಿಭಿನ್ನ ವೇಷಧರಿಸಿ ಮತ್ತೊಂದು ಜೀವಕ್ಕೆ ಆಸರೆಯಾಗಲಿದ್ದಾರೆ ಮೂಡಬಿದ್ರೆಯ ವಿಕ್ಕಿ ಶೆಟ್ಟಿ , ತಮ್ಮ ಕೈಲಾದ ಸಹಾಯ ನೀಡಿ ಮಗುವಿನ ಕುಟುಂಬದ ಜೊತೆ ಕೈ ಜೋಡಿಸಿ -Vishwanews24

ಇಂದು ಸಂಜೆಯಿಂದ ಫೆ.22 ರ‌ವರೆಗೆ ಪೊಳಲಿ ತಾಯಿಯ ಕಲಶಾಭಿಷೇಕದಂದು ಮತ್ತೆ ವಿಭಿನ್ನ ವೇಷಧರಿಸಿ ಮತ್ತೊಂದು ಜೀವಕ್ಕೆ ಆಸರೆಯಾಗಲಿದ್ದಾರೆ ಮೂಡಬಿದ್ರೆಯ ವಿಕ್ಕಿ ಶೆಟ್ಟಿ , ತಮ್ಮ ಕೈಲಾದ ಸಹಾಯ ನೀಡಿ ಮಗುವಿನ ಕುಟುಂಬದ ಜೊತೆ ಕೈ ಜೋಡಿಸಿ -Vishwanews24

ಇಂದು ಸಂಜೆಯಿಂದ ಫೆ.22 ರ‌ವರೆಗೆ ಪೊಳಲಿ ತಾಯಿಯ ಕಲಶಾಭಿಷೇಕದಂದು ಮತ್ತೆ ವಿಭಿನ್ನ ವೇಷಧರಿಸಿ ಮತ್ತೊಂದು ಜೀವಕ್ಕೆ ಆಸರೆಯಾಗಲಿದ್ದಾರೆ ಮೂಡಬಿದ್ರೆಯ ವಿಕ್ಕಿ ಶೆಟ್ಟಿ , ತಮ್ಮ ಕೈಲಾದ ಸಹಾಯ ನೀಡಿ ನಿಹಾರಿಕ ಕುಟುಂಬದ ಜೊತೆ ಕೈ ಜೋಡಿಸಿ ..

ಫೆ. 19 ಶುಕ್ರವಾರ ಸಂಜೆಯಿಂದ 22 ಆದಿತ್ಯವಾರ‌ದವರೆಗೆ ಪೊಳಲಿ ತಾಯಿಯ ಸನ್ನಿಧಾನದಲ್ಲಿ ನಡೆಯುವ ಕಲಶಾಭಿಷೇಕದಂದು ಮಗುವಿಗಾಗಿ / ಮಗುವಿನ ಚಿಕಿತ್ಸೆಗಾಗಿ ಹೊಸ ಅವತಾರ ( ಹೊಸವೇಷ)ದಲ್ಲಿ ನಾನು ನಿಮ್ಮ ಮುಂದೆ ಬರಲಿದ್ದೇನೆ. ಕ್ಷೇತ್ರದ ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಪುಟ್ಟ ಕಂದಮ್ಮನ ಚಿಕಿತ್ಸೆಗೆ ನೆರವಾಗಬೇಕು ಎಂದು ವಿನಂತಿ.

ವಾಚ್ ಮ್ಯಾನ್ ಕೆಲಸದಲ್ಲಿರುವ ತಂದೆ, ಗೃಹಿಣಿ ತಾಯಿ. ಚಿಕ್ಕದಾದ ಸಂತೋಷದ ಚಿಲುಮೆ ಆಗಿದ್ದ ಈ ಕುಟುಂಬಕ್ಕೆ ಕೆಲವು ತಿಂಗಳುಗಳಿಂದ ತಮ್ಮ 7 ವರ್ಷದ ಮಗುವಿಗೆ ಕಾಡುವ ವಿಪರೀತ ಜ್ವರ ಬರಸಿಡಿಲಿನಂತೆ ಎಗರಿದೆ. ಎಲ್ಲರ ಕಣ್ಮಣಿಯಾಗಿದ್ದ ಈ ಕಂದಮ್ಮ ಬಿಡದೆ ಕಾಡುವ ಅನಾರೋಗ್ಯದಿಂದ ಕಂಗಾಲಾಗಿದ್ದಾರೆ.

ಮಗುವನ್ನು ದೇರಳಕಟ್ಟೆ , ನಿಟ್ಟೆ ಆಸ್ಪತ್ರೆ, ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಪ್ರಸ್ತುತ ಅತ್ತಾವರದ KMC ಆಸ್ಪತ್ರೆಯಲ್ಲಿರುವ ಈ ಮಗು H.L.H (hemophagocytic lymphohistocytosis) ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾನೆ.

ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವುದರಿಂದ KMC ವೈದ್ಯರ ನಿದರ್ಶನದಂತೆ ಮಗುವನ್ನು “ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಂಜೂದಾರ್ ಷಾ ಕ್ಯಾನ್ಸರ್ ಆಸ್ಪತ್ರೆಗೆ” ಕರೆದುಕೊಂಡು ಹೋಗಿದ್ದು ಅಲ್ಲಿ ನ ಉನ್ನತ ವೈದ್ಯರು ಮೂಳೆ ಅಸ್ಥಿಮಜ್ಜೆ ಕಸಿ (Bone Marrow transplant) ಮಾಡಲು ಸೂಚಿಸುತ್ತಾರೆ.

ಈ ಚಿಕಿತ್ಸೆಗೆ ಅಂದಾಜು 45 ಲಕ್ಷ ರೂಪಾಯಿ ಖರ್ಚಾಗುವ ಸಾಧ್ಯತೆ ಇದ್ದು ಈ ಮೊತ್ತವನ್ನು ಭರಿಸಲು ಕುಟುಂಬವು ಆಶಕ್ತವಾಗಿರುವುದರಿಂದ , ನಮ್ಮ ತುಳುನಾಡ್ ಟ್ರಸ್ಟ್ (ರಿ)ಯ ಆಶಿಸಾ ನಿಧಿ ಯೋಜನೆ ಮತ್ತು ಆತ್ಮೀಯರ ಸಹಕಾರದೊಂದಿಗೆ ದಿನಾಂಕ 19/02/2021 ಶುಕ್ರವಾರ ಸಂಜೆಯಿಂದ 22/02/2021 ಆದಿತ್ಯವಾರ‌ದವರೆಗೆ ಪೊಳಲಿ ತಾಯಿಯ ಸನ್ನಿಧಾನದಲ್ಲಿ ನಡೆಯುವ ಕಲಶಾಭಿಷೇಕದಂದು ಮಗುವಿಗಾಗಿ / ಮಗುವಿನ ಚಿಕಿತ್ಸೆಗಾಗಿ ಹೊಸ ಅವತಾರ ( ಹೊಸವೇಷ)ದಲ್ಲಿ ನಾನು ನಿಮ್ಮ ಮುಂದೆ ಬರಲಿದ್ದೇನೆ. ಕ್ಷೇತ್ರದ ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಪುಟ್ಟ ಕಂದಮ್ಮನ ಚಿಕಿತ್ಸೆಗೆ ನೆರವಾಗಬೇಕು ಎಂದು ವಿನಂತಿ.

“ನಾವು ಇಡುವ ಪ್ರತಿ ಹೆಜ್ಜೆಗೂ ಹೊನ್ನ ಮಳೆ ಸುರಿಸಿ ಬೆನ್ನೆಲುಬಾಗಿ ನಿಲ್ಲುವ ಎನ್ನ ಹೃದಯ ಗದ್ದುಗೆಯ ಒಡತಿ ಅಮ್ಮ ಜ್ಯೊತಿರ್ಮಾತೃ ಸ್ವರೂಪಿಣಿಯನ್ನ ನೆನೆಯುತ್ತ, ಪೊಳಲಿಯ ಒಡತಿಯಲ್ಲಿ ಅನುಮತಿ ಬೇಡುತ್ತ

ಫೆ. 19 ಶುಕ್ರವಾರ ಸಂಜೆಯಿಂದ 22 ಆದಿತ್ಯವಾರ‌ದವರೆಗೆ

ನಿಮ್ಮ ಮುಂದೆ ಮಗುವಿನ ನೆರವಿಗಾಗಿ ಸಹಾಯ ಬೇಡುತ್ತ ನಿಮ್ಮ ಮುಂದೆ ಬರುತ್ತಿದ್ದೇನೆ.

ಹರಸಿ – ಹಾರೈಸಿ ನೆರವಾಗಿ ಎಂಬ ವಿನಂತಿ ನಮ್ಮದು

ವಿಕ್ಕಿ ಶೆಟ್ಟಿ ಬೆದ್ರ

 

 

 

Vishwa News 24

Recent Posts

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ – vishwanews24

ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ  ಐಟಿ ಉದ್ಯೋಗಿ ಕಾರವಾರ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿಯೊಬ್ಬ  ಸಮುದ್ರಪಾಲಾದ ಘಟನೆ ಉತ್ತರ…

10 hours ago

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ – vishwanews24

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ…

10 hours ago

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ – vishwanews24

ಕೊಡವೂರು: ಶಂಕರನಾರಾಯಣ ದೇವಸ್ಥಾನದ ತಾತ್ಕಾಲಿಕ ಮೇಲುಸ್ತುವಾರಿ ವೆಂಕಟಕೃಷ್ಣ ನಾಪತ್ತೆ ಮಲ್ಪೆ :ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ…

10 hours ago

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ – vishwanews24

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೊಜನೆಗಳಲ್ಲಿ ನಕಲಿ…

11 hours ago

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ – vishwanews24

ಕಾಸರಗೋಡು: ಬೇಕಲ ಕಡಲತೀರದಲ್ಲಿ ಸಮುದ್ರಪಾಲಾದ ಕೊಟ್ಟಾಯಂನ ಇಬ್ಬರು ವಿದ್ಯಾರ್ಥಿಗಳು; ಮತ್ತಿಬ್ಬರ ರಕ್ಷಣೆ ಕಾಸರಗೋಡು: ಬೇಕಲ ಕೋಟೆಯ ಸಮೀಪವಿರುವ ಪಳ್ಳಿಕೆರೆ ಕಡಲತೀರದಲ್ಲಿ…

11 hours ago

ಹಿಂದಿ ಕಿರುತೆರೆ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ…

11 hours ago