ಬೆಂಗಳೂರು: ಐಶ್ವರ್ಯ ಗೌಡ ಕೇಸ್‌ನಲ್ಲಿ ಇಡಿ ಕೊಟ್ಟಿರೋ ನೋಟಿಸ್‌ಗೆ ನನ್ನ ತಮ್ಮ ಡಿ.ಕೆ ಸುರೇಶ್ ಸಹಕಾರ ಕೊಡಲಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಡಿ.ಕೆ ಸುರೇಶ್ ಅವರಿಗೆ ಇಡಿ ನೋಟಿಸ್ ನೀಡಿರುವ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಸಹೋದರ ಇರಲಿಲ್ಲ. ಅಂಟಿಸಿ ಹೋಗ್ತೀನಿ ಅಂತ ಹೇಳಿದ್ರಂತೆ. ಅದಕ್ಕೆ ನಾನು ರಿಸೀವ್ ಮಾಡಿ ಅಂತ ಹೇಳಿದ್ದೇನೆ. ನನ್ನ ಸಹೋದರ ತನ್ನ ಹೆಸರು ಮಿಸ್ ಯೂಸ್ ಆಗಿದೆ ತನಿಖೆ ಮಾಡಿ ಅಂತ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಸಹೋದರ ಹೋಗಿ ಇಡಿಗೆ ಏನು ಬೇಕಾದರೂ ಸಹಕಾರ ಕೊಡ್ತಾರೆ ಎಂದು ಹೇಳಿದ್ದಾರೆ.
ಕಾನೂನು ಬಾಹಿರ ಚಟುವಟಿಕೆ ಮಾಡೋರು, ಮೋಸ ಮಾಡೋರು, 3-4 ಜನ ಮೋಸ ಆಗಿರೋರು ಬಂದು ನಿಮ್ಮ ಹೆಸರು ಮಿಸ್ ಯೂಸ್ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ. ಅದನ್ನು ತನಿಖೆ ಮಾಡಿ ಅಂತ ನಾವು ಹೇಳಿದ್ದೇವೆ. ಇಡಿಗೆ ಸಹಕಾರ ಕೊಡೋಕೆ ನಾವು ತಯಾರಿದ್ದೇವೆ. ನಾವು ಈ ದೇಶದ ಕಾನೂನಿಗೆ, ವಿಚಾರಣೆಗೆ ಇಂತಹ ಮೋಸ ಮಾಡೋ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಸಹಕಾರ ಕೊಡ್ತೀವಿ. ನಾವು ಸಮಾಜಕ್ಕೆ, ಜನರಿಗೆ ನ್ಯಾಯ ಒದಗಿಸಿ ಕೊಡಬೇಕು. ಅದು ನಮ್ಮ ಕರ್ತವ್ಯ. ಅದನ್ನ ಸುರೇಶ್, ಶಿವಕುಮಾರ್ ಮಾಡ್ತಾರೆ. ನಾವು ಇಡಿಗೆ ಎಲ್ಲಾ ಸಹಕಾರ ಕೊಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…