Featured

ಇಡೀ ಜಗತ್ತಿನ ಆಶೀರ್ವಾದ ಇರುವ ವ್ಯಕ್ತಿಗೆ ಯಾವುದೇ ತೊಂದರೆ ಬರಲ್ಲ : ಪ್ರಧಾನಿ ಮೋದಿಗೆ ಶಿಬರೂರು ಕೊಡಮಣಿತ್ತಾಯ ದೈವದ ಅಭಯ

ಇಡೀ ಜಗತ್ತಿನ ಆಶೀರ್ವಾದ ಇರುವ ವ್ಯಕ್ತಿಗೆ ಯಾವುದೇ ತೊಂದರೆ ಬರಲ್ಲ : ಪ್ರಧಾನಿ ಮೋದಿಗೆ ಶಿಬರೂರು ಕೊಡಮಣಿತ್ತಾಯ ದೈವದ ಅಭಯ..

ಇಡೀ ಲೋಕದ ರಕ್ಷಣೆ ಮಾಡುವ ಮಾಯೆ ನಾನು, ನಿಮಗೆ ಭಯ ಬೇಡ, ಯಾವುದೇ ತೊಂದರೆ ಬರದ ರೀತಿಯಲ್ಲಿ ನಾನು ನೋಡಿಕೊಳ್ಳುತ್ತಾನೆ..

ಕಿನ್ನಿಗೋಳಿ : ಇಡೀ ಜಗತ್ತಿನ ಆಶೀರ್ವಾದ ಇರುವ ವ್ಯಕ್ತಿಗೆ ಯಾವುದೇ ತೊಂದರೆ ಬರಲ್ಲ. ಲೋಕದ ರಕ್ಷಣೆ ಮಾಡುವ ಮಾಯೆ ನಾನು. ನಿಮಗೆ ಭಯ ಬೇಡ, ಯಾವುದೇ ತೊಂದರೆ ಬರದ ರೀತಿಯಲ್ಲಿ ನಾನು ನೋಡಿಕೊಳ್ಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಬರೂರು ಕೊಡಮಣಿತ್ತಾಯ ದೈವ ಅಭಯ ನೀಡಿದೆ.

ಶಿಬರೂರು ಕೊಡಮಣಿತ್ತಾಯ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾಯುಷ್ಯಕ್ಕಾಗಿ ದೈವಕ್ಕೆ ತುಡರಬಲಿ ಸೇವೆ ನೆರವೇರಿತು. ಪಂಜಾಬ್​ನಲ್ಲಿ ಪ್ರಧಾನಿಗೆ ಭದ್ರತಾಲೋಪ ಪ್ರಕರಣ ನಡೆಯುತ್ತಿದ್ದಂತೆ, ಅವರಿಗೆ ದೀರ್ಘಾಯುಷ್ಯ ನೀಡಲೆಂದು ಅನೇಕ ಕಡೆ ಅಭಿಮಾನಿಗಳು ಹೋಮಹವನ ನಡೆಸಿದ್ದಾರೆ. ಇಲ್ಲೂ ಮೋದಿ ಅಭಿಮಾನಿ ಶಿಬರೂರು ನಿವಾಸಿ ತುಕಾರಾಮ ಸಾಲಿಯಾನ್​ ಅವರು ಮೋದಿ ಅವರಿಗೆ ಯಾವುದೇ ತೊಂದರೆ ಆಗಬಾರದೆಂದು ಶಿಬರೂರು ಉಳ್ಳಾಯ ಮತ್ತು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿ ತುಡರಬಲಿ ಸೇವೆ ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದರು. ಆ ಪ್ರಯುಕ್ತ ಭಾನುವಾರ ರಾತ್ರಿ ಸೇವೆ ಸಲ್ಲಿಸಿದರು.

ನರೇಂದ್ರ ಮೋದಿಯವರು ನಿಜವಾದ ಜನನಾಯಕ, ಮೋದಿ ಪ್ರಧಾನಿಯಾದ ನಂತರ ದೇಶ ಸಾಕಷ್ಟು ಅಭಿವೃದ್ಧಿ ಕಂಡಿದೆ. ಈ ಕಾರಣದಿಂದ ನಾನು ನರೇಂದ್ರ ಮೋದಿ ಅವರ ಅಭಿಮಾನಿಯಾಗಿದ್ದೇನೆ. ಪಂಜಾಬಿನಲ್ಲಿ ನಡೆದ ಘಟನೆ ಸಂದರ್ಭ ನನಗೆ ತುಂಬಾ ನೋವಾಗಿದ್ದು, ಮೋದಿಯವರಿಗೆ ಯಾವುದೇ ತೊಂದರೆ ಬರಬಾರದೆಂದು ಪ್ರಾರ್ಥಿಸಿ ಕೊಡಮಣಿತ್ತಾಯ ದೈವಕ್ಕೆ ತುಡರಬಲಿ ಸೇವೆ ನೀಡುವುದಾಗಿ ಹರಕೆ ಹೊತ್ತುಕೊಂಡಿದ್ದೆ. ಅದರಂತೆ ಸೇವೆ ಮಾಡಿದೆ ಎಂದು ತುಕಾರಾಮ ಸಾಲಿಯಾನ್​ ತಿಳಿಸಿದರು.

ಅಭಯ ನೀಡಿದ ದೈವ: ಇಡೀ ಜಗತ್ತಿನ ಆಶೀರ್ವಾದ ಇರುವ ವ್ಯಕ್ತಿಗೆ ಯಾವುದೇ ತೊಂದರೆ ಬರಲ್ಲ, ಇಡೀ ಲೋಕದ ರಕ್ಷಣೆ ಮಾಡುವ ಮಾಯೆ ನಾನು, ನಿಮಗೆ ಭಯ ಬೇಡ, ಯಾವುದೇ ತೊಂದರೆ ಬರದ ರೀತಿಯಲ್ಲಿ ನಾನು ನೋಡಿಕೊಳ್ಳುತ್ತಾನೆ ಎಂದು ದೈವ ಅಭಯ ನೀಡಿತು.

ಇಲ್ಲಿನ ತೀರ್ಥ ಮತ್ತು ಮಣ್ಣಿಗೆ ವಿಷ ಹೀರುವ ಶಕ್ತಿ ಇದೆ: ಶಿಬರೂರು ಕೊಡಮಣಿತ್ತಾಯ ದೈವಸ್ಥಾನ ಕರಾವಳಿಯಲ್ಲಿ ಅತ್ಯಂತ ಕಾರಣಿಕದ ದೈವಸ್ಥಾನವಾಗಿದೆ. ಇಲ್ಲಿನ ಮಣ್ಣು ಮತ್ತು ತೀರ್ಥ ಅತ್ಯಂತ ಪ್ರಸಿದ್ಧಿ ಹೊಂದಿದ್ದು, ಇಲ್ಲಿನ ತೀರ್ಥ ಮತ್ತು ಮಣ್ಣಿಗೆ ವಿಷವನ್ನು ಹೀರುವ ಶಕ್ತಿ ಇದೆ ಎಂಬ ನಂಬಿಕೆ ಇದೆ. ವಿಷಜಂತುಗಳು ಕಡಿದಾಗ ಇಲ್ಲಿನ ತೀರ್ಥ ಮತ್ತು ಮಣ್ಣನ್ನು ಬಾಯಿಗೆ ಹಾಕಿದರೆ ವಿಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ. ಡಿಸೆಂಬರ್​ ತಿಂಗಳಲ್ಲಿ ಬರುವ ಜಾತ್ರಾಮಹೋತ್ಸವದ ಸಂದರ್ಭ ಇಲ್ಲಿನ ತೀರ್ಥ ಮತ್ತು ಮಣ್ಣನ್ನು ಭಕ್ತರು ಮನೆಗೆ ತೆಗೆದುಕೊಂಡು ಹೋಗಿ ಇಡುತ್ತಾರೆ. ಚರ್ಮರೋಗ, ಆರೋಗ್ಯದ ಸಮಸ್ಯೆ, ಮಕ್ಕಳಾಗದಿರುವಿಕೆ ಮತ್ತಿತರ ಸಮಸ್ಯೆಗಳ ನಿವಾರಣೆಗಾಗಿ ಭಕ್ತರು ಹರಕೆ ಹೊರುತ್ತಾರೆ. ಇಷ್ಟಾರ್ಥ ಸಿದ್ಧಿಸಿದ ಬಳಿಕ ಪ್ರತಿ ವರ್ಷ ತುಲಾಬಾರ, ಕಂಚಿಲು ಸೇವೆ, ಉರುಳು ಸೇವೆ ಮತ್ತಿತರ ಸೇವೆಗಳು ಭಕ್ತರಿಂದ ಸಂದಾಯವಾಗುತ್ತದೆ.

Vishwa News 24

Recent Posts

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ; -vishwanews24

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ.. ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಕಂಪಿಸಿದ ಕಟ್ಟಡಗಳು ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ…

4 minutes ago

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ -vishwanews24

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಕುಂದಾಪುರ : ಪತ್ನಿಗೆ…

2 hours ago

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು -vishwanews24

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು ಕಾಪು : ಕಾಪು ಫ್ಲೈಓವರ್ ಬಳಿ ಶನಿವಾರ…

2 hours ago

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

22 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

24 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

24 hours ago