ಬೆಂಗಳೂರು: ಇಡೀ ದೇಶವನ್ನು ಕೇಸರಿಕರಣಗೊಳಿಸುವ ವ್ಯವಸ್ಥಿತ ಹುನ್ನಾರವೊಂದು ಆರ್‌ಎಸ್‍ಎಸ್ ಪಡಸಾಲೆಯಲ್ಲಿ ನಡೆಯುತ್ತಿದೆ ಶಾಸಕ ದಿನೇಶ್ ಗುಂಡೂರಾವ್ ಕಿಡಿಕಾರಿದರು.
ಈ ಬಗ್ಗೆ ಟ್ವೀಟ್ ಮಾಡಿದ ಅವರು, ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವ ಸಚಿವ ಈಶ್ವರಪ್ಪ ಹೇಳಿಕೆ ಸಂವಿಧಾನ ವಿರೋಧಿ ನಡೆಯ ಜೊತೆಗೆ ರಾಷ್ಟ್ರದ್ರೋಹವು ಹೌದು. ಈಶ್ವರಪ್ಪ ಆರ್‌ಎಸ್‍ಎಸ್ ಕಾರ್ಯತಂತ್ರವನ್ನು ತಪ್ಪಿ ಬಾಯಿಬಿಟ್ಟಿದ್ದಾರೆ. ಧ್ವಜ ವಿವಾದ ಆರ್‌ಎಸ್‍ಎಸ್ ಕಾರ್ಯಸೂಚಿಯ ಒಂದು ಭಾಗ. ನಾಜಿ ಸಂತತಿಯ ಅನ್‍ಡಿಟೆಡ್ ವರ್ಷನ್ ಆಗಿರುವ ಆರ್‌ಎಸ್‍ಎಸ್ ಪ್ರಾರಂಭದಿಂದಲೂ ಸಂವಿಧಾನ ವಿರೋಧಿ ಎಂದು ಕಿಡಿಕಾರಿದರು
ತ್ರಿವರ್ಣ ಧ್ವಜವನ್ನು ಒಪ್ಪಿಕೊಳ್ಳುವ ಮನಃಸ್ಥಿತಿ ಆರ್‌ಎಸ್‍ಎಸ್‍ಗೆ ಆಗಲೂ ಇರಲಿಲ್ಲ. ಈಗಲೂ ಇಲ್ಲ. ತ್ರಿವರ್ಣ ಧ್ವಜದ ಬದಲು ಭಗವಾಧ್ವಜ ವನ್ನು ರಾಷ್ಟ್ರೀಯ ಧ್ವಜವನ್ನಾಗಿ ಮಾಡುವ ಹಿಡನ್ ಅಜೆಂಡಾ ಆರ್‌ಎಸ್‍ಎಸ್‍ನದ್ದು. ಆರ್‌ಎಸ್‍ಎಸ್‍ನ ಈ ಅಜೆಂಡಾವೇ ಈಶ್ವರಪ್ಪ ಬಾಯಿಂದ ಹೊರಬಂದಿದೆಯಷ್ಟೇ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕರಿಗೆ ಸಂವಿಧಾನ ಹಾಗೂ ರಾಷ್ಟ್ರಧ್ವಜದ ಮೇಲೆ ನಿಜವಾದ ಗೌರವವಿದ್ದರೆ ಸಚಿವ ಈಶ್ವರಪ್ಪ ಹೇಳಿಕೆ ಖಂಡಿಸಬೇಕು. ಜೊತೆಗೆ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಇಲ್ಲದೇ ಹೋದರೆ ರಾಷ್ಟ್ರದ್ರೋಹಿ ಈಶ್ವರಪ್ಪ ಮತ್ತು ಅವರ ಬೆಂಬಲಿತ ಬಿಜೆಪಿ ವಿರುದ್ಧ ನಮ್ಮ ಹೋರಾಟ ಉಗ್ರವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…
ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…
ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…
ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…
ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…