ರಾಷ್ಟ್ರ ನ್ಯೂಸ್

ಇತಿಹಾಸದಲ್ಲಿ ಮೊದಲ ಬಾರಿ ಹೊಸದೊಂದು‌ ದಾಖಲೆ ಬರೆದ ಮೋದಿ‌ ಸರ್ಕಾರ…

ಭಾರತೀಯರಿಗೆ ಮತ್ತು ರೈಲಿಗೆ ಅವಿನಾಭಾವ ಸಂಬಂಧವಿದೆ. ಭಾರತದಲ್ಲಿ ಅತೀ ಹೆಚ್ಚು ಜನ ನಂಬಿರುವುದು ರೈಲು ಸಾರಿಗೆಯನ್ನು.

ಎಪ್ರಿಲ್ 16,1853 ರಲ್ಲಿ ಮುಂಬೈ ಮತ್ತು ಥಾಣೆ ನಡುವೆ ಮೊದಲ ಪ್ರಯಾಣ ಮಾಡಿದ ರೈಲ್ವೆ ಇಂದು ದೇಶದ ಎಲ್ಲ ಭಾಗಗಳನ್ನು ಬೆಸೆಯುವ ಪ್ರಮುಖ ಕೊಂಡಿಯಾಗಿ ಬದಲಾಗಿದೆ.

ಕೇಂದ್ರದಲ್ಲಿ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈಲ್ವೆಯ ಚಿತ್ರಣವೂ ಬದಲಾಗಿಹೋಗಿದ್ದು ಟಿಕೆಟ್ ಬುಕಿಂಗ್, ಸ್ವಚ್ಛ ಹಾಸಿಗೆಗಳು, ಶುದ್ಧ ಊಟ, ಸ್ವಚ್ಛ ನೀರು ಎಲ್ಲಾ ವ್ಯವಸ್ಥೆಯೂ ಸರಳವಾಗಿಬಿಟ್ಟಿದೆ.
ಎನ್.ಡಿ.ಎ ಸರ್ಕಾರ ಅದರಲ್ಲೂ ಸುರೇಶ್ ಪ್ರಭು ರೈಲ್ವೆ ಸಚಿವರಾದ ಮೇಲೆ ಬದಲಾವಣೆಯ ಗಾಳಿಯೇ ಬೀಸಿದೆ. ಭಾರತೀಯ ರೈಲ್ವೆ ಜನರಿಗೆ ಮತ್ತಷ್ಟು ಹತ್ತಿರವಾಗಿದೆ. ಕೇವಲ ಒಂದು ಟ್ವೀಟ್ ಮೂಲಕ ಸಮಸ್ಯೆಗೆ ಸ್ಪಂದಿಸಿದ ಅದೆಷ್ಟೋ ಉದಾಹರಣೆಗಳಿವೆ. ಉತ್ತರ ಪ್ರದೇಶದಲ್ಲಿ ನಡೆದ ರೈಲು ಅಪಘಾತಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಸುರೇಶ್ ಪ್ರಭು ಅವರ ಕಾರ್ಯವೈಖರಿ ವಿರೋಧಿಗಳೂ ಮೆಚ್ಚಬೇಕಾಗಿತ್ತು ಅಂತಹ ಕಾರ್ಯದಕ್ಷತೆ! ಅವರ ನಂತರ ಬಂದ ಪಿಯೂಷ್ ಗೋಯೇಲ್ ರ ಬಗ್ಗೆ ಹೇಳುವುದೇ ಬೇಡ. ಅತ್ಯಂತ ಕ್ರಿಯಾಶೀಲ ಸಚಿವ ಇವರು.

ಇದೀಗ ರೈಲ್ವೇ ಇಲಾಖೆಯಲ್ಲಿ ಮಹತ್ತರವಾದ ಬದಲಾವಣೆ ಕಂಡು ಪ್ರಗತಿಯತ್ತ ಹೆಜ್ಜೆ ಹಾಕಿ ಜನಸಾಮಾನ್ಯರಲ್ಲಿ ಭರವಸೆ ಹುಟ್ಟಿಸಿದೆ. ಸುರಕ್ಷತೆಯ ಭಾವನೆ ಮೂಡಿಸಿದೆ. ರೈಲ್ವೇ ಇಲಾಖೆಗೆಂದೇ ಪ್ರತ್ಯೇಕ ಬಜೆಟ್ ಮಂಡಿಸುತ್ತಿದ್ದರೂ ಸುರಕ್ಷತೆಯ ಬಗ್ಗೆ ಅಷ್ಟು ಕಾಳಜಿ ಈ ಹಿಂದಿನ ಸರ್ಕಾರಗಳು ತೋರಿಸುತ್ತಿರಲಿಲ್ಲ ಆದರೆ ಮೋದಿ ಸರ್ಕಾರ ಜನಸಾಮಾನ್ಯರ ಜೀವನಾಡಿಯಾದ ರೈಲು ಪ್ರಯಾಣವನ್ನು ಸುಖಕರ ಮತ್ತು ಸುರಕ್ಷಿತಗೊಳಿಸಿದೆ.

 

ಹೌದು, 2017-18 ರ ಆರ್ಥಿಕ ವರ್ಷ ಕೊನೆಗೊಂಡ ಬೆನ್ನಲ್ಲೇ ರೈಲ್ವೇ ಇಲಾಖೆ ಅತ್ಯಂತ ಸಂತೋಷದ ಸುದ್ದಿಯೊಂದನ್ನು ಹೊರಹಾಕಿದೆ. ಸುದೀರ್ಘ 35 ವರ್ಷಗಳ ಬಳಿಕ ಎರಡಂಕೆಯ ಒಳಗೆ ಅಪಘಾತ ಪ್ರಮಾಣ ದಾಖಲಾಗಿದೆ. ಸದಾ ಒಂದಲ್ಲ ಒಂದು ಅವಘಗಡಕ್ಕೆ ಈಡಾಗುತ್ತಿದ್ದ ರೈಲು ಈಗ ತನ್ನ ಅಪಘಾತದ ಪ್ರಮಾಣವನ್ನು ತಗ್ಗಿಸಿಕೊಂಡಿದೆ. ಪ್ರತಿವರ್ಷ ನೂರಕ್ಕೂ ಮೇಲೆ ನಡೆಯುತ್ತಿದ್ದ ಅಪಘಾತ ಈ ವರ್ಷ ಗಣನೀಯ ಇಳಿಕೆ ಕಂಡಿದೆ. 2017-18 ರ ಆರ್ಥಿಕ ವರ್ಷಾಂತ್ಯಕ್ಕೆ 73 ರೈಲು ಅಪಘಾತಗಳು ದೇಶದಲ್ಲಿ ನಡೆದಿದ್ದು ಇದೇ ಮೊದಲ ಬಾರಿಗೆ ಅತೀ ಕಡಿಮೆ ಅಪಘಾತ ಸಂಭವಿಸಿದ ವರ್ಷವಾಗಿದೆ. 2016-17 ಕ್ಕೆ ಹೋಲಿಸಿದರೆ ಶೇಕಡಾ 29 ಅಪಘಾತ ಕಡಿಮೆ ಆಗಿದೆ ಅಂದರೆ 2016-17 ರಲ್ಲಿ ನಡೆದ ಒಟ್ಟು ಅಪಘಾತಗಳ ಸಂಖ್ಯೆ 104!

 

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಬಿಡುಗಡೆಗೊಳಿಸಿದ ರೈಲ್ವೇ ಇಲಾಖೆಯ ಮುಖ್ಯ ಅಧಿಕಾರಿ ಅಶ್ವನಿ ಲೋಹಾನಿ ರೈಲ್ವೇಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿರುವುದರಿಂದ ಅಪಘಾತದ ಪ್ರಮಾಣ ಕಡಿಮೆ ಆಗಿದೆ ಎಂದು ತಿಳಿಸಿದರು.

 

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

7 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

7 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

8 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

8 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

8 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

8 hours ago