ಉಡುಪಿ

ಇತಿಹಾಸ ಪ್ರಸಿದ್ದ ಕಾಪು ಪಿಲಿಕೋಲ ಮೇ 5

ಕಾಪು: ತನ್ನದೇ ಆದ ವಿಶಿಷ್ಟ- ವೈಶಿಷ್ಟ್ಯತೆಗಳಿಂ­ದಾಗಿ ಕರಾ­ವಳಿ ಜಿಲ್ಲೆ­ಗಳು ಮಾತ್ರವಲ್ಲದೇ ದೇಶ-ವಿದೇ­ಶ­ಗ­ಳ­ಲ್ಲಿಯೂ ಹೆಸರುವಾ­ಸಿ­ಯಾ­ಗಿರುವ ಕಾಪು­ವಿನಲ್ಲಿ ದ್ವೈವಾರ್ಷಿಕವಾಗಿ ನಡೆಯುವ ಕಾಪುದ ಪಿಲಿಕೋಲವು ಮೇ 05 ರಂದು ನಡೆಯಲಿದೆ.

ಕಾಪು­ವಿ­ನಲ್ಲಿ ನಡೆ­ಯುವ ಪಿಲಿ­ಕೋ­ಲದ ಆರಾ­ಧನಾ ಪದ್ಧತಿಯು ಇತರೆ­ಡೆ­ಗಳ ಭೂತಾರಾ­ಧನೆಗಳಿಗಿಂತ ಭಿನ್ನ­ವಾಗಿದೆ. ಪಿಲಿ­ ಕೋ­ಲಕ್ಕೆ ದಿನ ನಿಗದಿ ಪಡಿ­ಸು­ವು­ದ­ರಿಂದ ಹಿಡಿದು ಕೋಲದ ಸಮಾ­ಪ­ನದವರೆಗೂ ನಡೆ­ಯುವ ಆಚ­ರಣಾ ಪದ್ಧತಿ­ಗಳು ಧಾರ್ಮಿ­ಕ ಮತ್ತು ಜನಪದಾ­ಸ­ಕ್ತ­ರಲ್ಲಿ ಬಹ­ಳಷ್ಟು ಕೌತುಕ­ವನ್ನು ಮೂಡಿ­ಸು­ತ್ತವೆ.

ಕಾರ್ಕಳದ ಅರಸನಾದ ಭೆೈರ ಸೂಡವ ರಾಜ್ಯಭಾರ ಮಾಡುತ್ತಿರುವ ಸಮಯದಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಲಾರದೇ ಸ್ವತಃ ತಾನೇ ಬೇಟೆಗಾಗಿ ಹೋದಾಗ ಎರಡು ಹುಲಿಗಳನ್ನು ಸೆರೆ ಹಿಡೆದು, ತನ್ನ ಅರಮನೆಗೆ ತಂದು ಪಂಜರದೊಳಗೆ ಹಾಕಿ, ತನ್ನ ಆಯಾಸ ನೀಗಿಸಿಕೊಳ್ಳಲು ಅಂತಃಪುರದಲ್ಲಿ ಮಲಗು ತ್ತಾನೆ. ಈ ಸಂದರ್ಭ ನಿದ್ರೆಯಲ್ಲಿ ತನ್ನ ಆರಾಧನಾ ದೇವತೆಯಾದ ಚಂಡಿಕಾ ದೇವಿಯು ಕಾಣಿಸಿಕೊಂಡು ರಾಜ ನೀನು ಹಿಡಿದು ತಂದಿರುವ ಹುಲಿಗಳು ಸಾಧಾರಣ ಹುಲಿಗಳಲ್ಲ. ಅವು ನನ್ನ ವಾಹನದ ಮಾಯಾ ಹುಲಿಗಳು, ಅವುಗಳನ್ನು ಸತ್ಕರಿಸಿ ಈಗ ತಾನೇ ತೆಂಕು ರಾಜ್ಯದಿಂದ ನಿನ್ನ ರಾಜ್ಯದ ಮೂಲಕವಾಗಿ ಬಡಗು ದಿಕ್ಕಿಗೆ ಗಂಗಾಸ್ನಾನ ಮಾಡಲು ತೆರಳುತ್ತಿರುವ ಸಾವಿರಮಾನಿ ದೈವಗಳ ಜೊತೆಗೆ ಎರಡೂ ಹುಲಿಗಳನ್ನು ಕಳುಹಿಸಿ ಬಿಡು ಎಂದು ನುಡಿಯುತ್ತಾಳಂತೆ.

ತತ್‌ಕ್ಷಣ ನಿದ್ರೆಯಿಂದ ಎಚ್ಚೆತ್ತ ರಾಜ ತಾನು ಬಂಧಿಸಿಟ್ಟಿದ್ದ ಹುಲಿಗಳನ್ನು ಮತ್ತು ಬಡಗು ದಿಕ್ಕಿಗೆ ತೆರಳುತ್ತಿದ್ದ ದೈವಗಳಿಗೆ ಸತ್ಕಾರಗಳನ್ನು ಮಾಡಿ ತೀರ್ಥಸ್ನಾನಕ್ಕೆ ಬೀಳ್ಕೊಡುತ್ತಾನೆ. ಹೀಗೆ ಹೋದ ದೈವಗಳು ಗಂಗಾಸ್ನಾನ ಮುಗಿಸಿ ಕಾಪು ಶ್ರೀ ಲಕ್ಷ್ಮೀ ಜನಾರ್ದನ  ದೇವರ ಹಾಗೂ ಮಾರಿಯಮ್ಮ ದೇವರ ದೇವಿಯ ಸನ್ನಿಧಾನಕ್ಕೆ ಬಂದು ಈ ಪುಣ್ಯಕೇÒತ್ರದಲ್ಲಿಯೇ ತಮಗೆ ಸ್ಥಾನಮಾನ ಕೊಡಬೇಕೆಂದು ಕೇಳಿಕೊಂಡಾಗ ದೇವರ ಅಪ್ಪಣೆಯಂತೆ ಕೋಟಿ-ಚೆನ್ನಯರು ಪೊಯ್ಯ ಪೊಡಿಕಲ್ಲು ಎಂಬಲ್ಲಿಯೂ ಮುಗೇರ್ಕಳ, ಹುಲಿಚಂಡಿ, ತನ್ನಿಮಾನಿಗ ದೈವಗಳು ಪಲ್ಲತ್ತಪಡು³ ಶ್ರೀ ಮಾರಿಯಮ್ಮನ ಬಲಭಾಗದಲ್ಲಿಯೂ ನೆಲೆಯೂರುತ್ತಾರೆ ಎನ್ನುವುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ.

ಎರಡು ವರ್ಷಗಳಿಗೊಮ್ಮ ನಡೆಯುವ ದ್ವೆ„ವಾರ್ಷಿಕ  ಆಚರಣೆ : ಉಡು­ಪಿ­ಯಲ್ಲಿ ಪರ್ಯಾಯ ಮಹೋ­ತ್ಸವ ನಡೆದ ವರ್ಷ ಕಾಪುವಿನಲ್ಲಿ ಪಿಲಿ­ಕೋ­ಲ ನಡೆ­ಯುತ್ತದೆ. ಪಿಲಿ­ಕೋ­ಲಕ್ಕೆ ಪೂರ್ವ­ಭಾ­ವಿ­ಯಾಗಿ ಇಲ್ಲಿನ ಪರಿ­ವಾರ ಶಕ್ತಿ­ಗಳ ಕೋಲವೂ ನಡೆಯುತ್ತದೆ. ಪಿಲಿ­ಕೋ­ಲದ ಮುಖ್ಯ ಹೊಣೆಗಾ­ರಿಕೆ ಇಲ್ಲಿನ ಮಾರ ಗುರಿ­ಕಾರ ವರ್ಗ­ದ­ವ­ರ­ದಾ­ಗಿದ್ದು, ಕಾಪು ಪಡು­ ಗ್ರಾ­ಮದ ಭೈರುಗುತ್ತು, ದೊರ­ಕಲಗುತ್ತು ಮುಂತಾದ 16 ಕಾಣಿಕೆ ಮನೆ ಕುಟುಂ­ಬದ­ವರೂ ಪಿಲಿ­ಕೋ­ಲದ ಕಾರ್ಯಕ್ರಮಗಳಲ್ಲಿ ಸಕ್ರಿ­ಯ­ವಾಗಿ ಭಾಗ­ವ­ಹಿ­ಸುತ್ತಾರೆ.

ಪಿಲಿ­ಕೋಲ ಆಚ­ರ­ಣಾ ವಿಧಾನ : ಇತಿ­ಹಾಸ ಪ್ರಸಿ­ದ್ಧವಾದ ಕಾಪು­ವಿನ ಪಿಲಿ­ಕೋ­ಲ­ದಲ್ಲಿ ಭೂತ ನರ್ತಕ (ಪಿಲಿ ವೇಷ­ಧಾರಿ) ಯಾರು ಎನ್ನುವುದು ಹಳೇ ಮಾರಿ­ಯಮ್ಮ ದೇವಿಯ ಸನ್ನಿ­ಧಿಯಲ್ಲಿ ನಿರ್ಧಾ­ರ­ವಾ­ಗುತ್ತದೆ. ಪಿಲಿ­ಕೋ­ಲದ ಹಿಂದಿನ ದಿನ ಪಾತ್ರಧಾರಿಗೆ ವೀಳ್ಯ ಕೊಡುವ ಕಾರ್ಯ ನಡೆ­ಯುತ್ತದೆ. ವೀಳ್ಯ ಪಡೆದ ಭೂತ ನರ್ತಕ­ನನ್ನು ನಿರ್ದಿ­ಷ್ಟ­ವಾದ ಕಲ್ಲಿ­ನಲ್ಲಿ ಕುಳ್ಳಿ­ರಿಸಿ ಮೂರು ಕೊಡ ನೀರು ಸುರಿ­ಯ­ಲಾ­ಗು­ತ್ತದೆ. ಆ ಬಳಿಕ ಪಿಲಿ­ಕೋ­ಲದ ಪಾತ್ರ

ಧಾ­ರಿಯು ದೈವ­ಸ್ಥಾ­ನದ ಒಳಗೆ ಹೋಗಿ ಹೊಸ ಚಾಪೆ­ಯಲ್ಲಿ ಮಲ­ಗು­ತ್ತಾನೆ. ಮಾರ­ ಗು­ರಿ­ಕಾರ ವರ್ಗ­ದ­ವರೂ ಅಲ್ಲೇ ಮಲ­ಗು­ತ್ತಾರೆ. ಅನೇಕ ಸಂಪ್ರ­ದಾ­ಯ­ಗ­ಳೊಂ­ದಿಗೆ ಸಿದ್ಧತೆಗ­ಳನ್ನು ನಡೆ­ಸಿದ ಬಳಿಕ ಸಂಪ್ರ­ದಾ­ಯ­ದಂತೆ ಸ್ನಾನ ಮಾಡಿಸಿ ಬಣ್ಣ­ಗಾ­ರಿ­ಕೆ­ಗಾಗಿ ಒಲಿ­ಮದೆ (ಒಲಿ­ಗುಂಡ)ಯೊಳಗೆ ಕಳುಹಿಸಲಾಗುತ್ತದೆ. ಅಲ್ಲಿ ಮೈಯಿಡೀ ಹುಲಿಯ ಬಣ್ಣ­ವನ್ನು ಬಳಿದ ನಂತರ ಪಿಲಿ ಭೂತದ ವೇಷಧಾರಿಯು ಪಠೇಲರ ಅನು­ಮತಿ ಪಡೆದು ಕೇವಲ ಸಿರಿ ಒಲಿಗಳಿಂದಲೇ ಸಿಂಗಾ­ರ­ಗೊ­ಳ್ಳುವ ವಿಶೇಷ ಪಂಜ­ರ­ಗ­ಳಿಂದ ಹೊರ ಬರು­ತ್ತಾನೆ.

ಹುಲಿ ಮುಟ್ಟಿದವರಿಗೆ ಕಂಟಕದ ಭೀತಿ?

 ವಿಶೇಷವಾಗಿ ಅಲಂಕೃತವಾಗುವ ಸಿರಿ ಪಂಜರ ದೊಳಗಿಂದ ಹೊರ ಬಂದ ಹುಲಿ ವೇಷ­ಧಾ­ರಿಯು ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಬಂದ ಬಳಿಕ ಅಲ್ಲೇ ನೆಡ­ಲಾ­ಗುವ ಬಂಟ ಕಂಬವ­ನ್ನೇರಿ ಜೀವಂತ ಕೋಳಿ­ಯನ್ನು ಬಲಿ­ಯಾಗಿ ಸ್ವೀಕ­ರಿಸಿ ಮುಂದೆ ತನ್ನ ಬೇಟೆ­ಗಾಗಿ ಹೊರ­ಡು­ತ್ತಾನೆ. 

ಈ ಸಂದ­ರ್ಭ­ದಲ್ಲಿ ಹುಲಿಯ ಕೈಗೆ ಸಿಗು­ವು­ದ­ರಿಂದ ತಪ್ಪಿಸಿ ಕೊಳ್ಳುವ ನಿಟ್ಟಿ­ನಲ್ಲಿ ನೆರೆದಿರುವ ಸಹ­ಸ್ರಾರು ಸಂಖ್ಯೆಯ ಭಕ್ತರು ಚದುರಿ ಓಡುತ್ತಾರೆ. ಹಿಂದಿ­ನಿಂ­ದಲೂ ಇಲ್ಲಿ ಹುಲಿ ಮುಟ್ಟಿ­ದರೆ ಸಾಯು­ತ್ತಾರೆಂಬ ನಂಬಿಕೆ­ ಇರುವುದರಿಂದ ಇಲ್ಲಿನ ಪಿಲಿ ಕೋಲದ ಬಗ್ಗೆ ಜನರಲ್ಲಿ ಬಹಳಷ್ಟು  ಭಯವೂ ಇರುತ್ತದೆ.

ಹುಲಿಯು ನಿರ್ದಿಷ್ಟ ಪ್ರದೇ­ಶ­ದಲ್ಲಿ ಸಂಚ­ರಿ­ಸು­ವಾಗ ಅಥವಾ ಸುತ್ತಾಡು­ವಾಗ ಯಾರನ್ನು ಮುಟ್ಟ­ಲ್ಪ­ಡು­ತ್ತದೆಯೋ ಆತ ಮುಂದಿನ ಕೋಲ­ದೊ­ಳಗೆ ಸಾಯು­ತ್ತಾನೆ ಅಥವಾ ಕಂಟಕಕ್ಕೆ ಗುರಿಯಾಗುತ್ತಾನೆ ಎಂಬ ನಂಬಿ­ಕೆ­ಯಿದೆ. ಯಾರನ್ನೂ ಮುಟ್ಟದೇ ಹೋದಲ್ಲಿ ಕೋಲದ ಪಾತ್ರಧಾ­ರಿಯೇ ಸಾವಿಗೆ ಗುರಿ­ಯಾ­ಗು­ತ್ತಾನೆ ಎಂಬ ಮಾತುಗಳೂ ಇವೆ. ಹುಲಿಯು ಬೇಟೆಯ ವೇಳೆ­ಯಲ್ಲಿ ಯಾರ­ನ್ನಾ­ದರೂ ಮುಟ್ಟಿದಲ್ಲಿ ತತ್‌ಕ್ಷಣ ದೈವ­ಸ್ಥಾ­ನಕ್ಕೆ ಬಂದು ವಿಜ­ಯ­ದ ಆ­ಚ­ರಣೆಯಲ್ಲಿ ತೊಡ­ಗು­ತ್ತದೆ. ಆ ಬಳಿಕ ಮತ್ತೆ ಬೇಟೆ­ಗಿ­ಳಿ­ಯು­ತ್ತದೆ. ಮಧ್ಯಾಹ್ನ 1 ಗಂಟೆಯಿಂದ 5 ಗಂಟೆ­ಯವರೆಗೆ ನಡೆಯುವ ಹುಲಿ ಕೋಲ­ವನ್ನು ಹುಲಿ ಸಂಚರಿಸದ (ಬಾರದ) ನಿರ್ದಿಷ್ಟ ಜಾಗ­ದ­ಲ್ಲಿ ನಿಂತು ವೀಕ್ಷಿಸುತ್ತಾರೆ.

ಐದು ಗಂಟೆ­ಯ ನಿರಂ­ತರ ಸುತ್ತಾಟ ಮತ್ತು ಬೇಟೆ­ಯಾ­ಡು­ವಿ­ಕೆ­ಯಿಂದ ಸುಸ್ತಾ­ಗುವ ಹುಲಿಯು ಮಾರಿ­ಯಮ್ಮ ದೇವಿಯ ಸಮ್ಮು­ಖ­ದಲ್ಲಿ ತೆಂಗಿನ ಕಾಯಿ ಮತ್ತು ಕೋಳಿಯನ್ನು ಬಲಿ ಪಡೆದು ಬ್ರಹ್ಮರ ಗುಂಡಕ್ಕೆ ಸುತ್ತು ಹೊಡೆದು ಬಾಳೆ ಎಲೆಯ ಮೇಲೆ ಬಂದು ಮಲ­ಗು­ತ್ತದೆ. ಅನಂತರ ಮಾರ ಗುರಿ­ಕಾರ ಹುಲಿಯ ಮೇಲೆ ನೀರು ಸಂಪ್ರೋ­ಕ್ಷ­ಣೆಗೈದ ಬಳಿಕ ಹಗ್ಗ ಹಿಡಿ­ದು­ ಕೊಂ­ಡ­ವರು ವೇಷ­ಧಾ­ರಿಯ ಮೈ ತಿಕ್ಕುತ್ತಾರೆ. ಇದ­ರಿಂದ ಆತನ ಆಯಾಸ ಪರಿ­ಹಾ­ರ­ಗೊಂಡು ಆವೇಶ ಕೊನೆ­ಗೊ­ಳ್ಳು­ತ್ತದೆ.

ನಂಬಿಕೆ – ಅಪನಂಬಿಕೆಗಳ ನಡುವೆಯೂ ಸೇರುವ ಜನಸಂದಣಿ : ಕಾಪು­ವಿನ ಪಿಲಿ ಕೋಲದ ಬಗ್ಗೆ ಹಲವು ರೀತಿಯ ನಂಬಿಕೆ – ಅಪ­ನಂ­ಬಿ­ಕೆ­ಗ­ಳಿವೆ. ಹುಲಿ ಮುಟ್ಟಿ­ದರೆ ಜನ ಸಾಯುತ್ತಾರೆ, ಸಾಯು­ವು­ದಿಲ್ಲ ಎಂದು ವಾದಿಸು­ವ­ವರೂ ಇಲ್ಲಿ­ದ್ದಾರೆ. ಆದರೂ ಇಲ್ಲಿ ದ್ವೈವಾರ್ಷಿಕವಾಗಿ ನಡೆಯುವ ಪಿಲಿ ಕೋಲವನ್ನು ವೀಕ್ಷಿಸಲು ಕರಾವಳಿ ಜಿಲ್ಲೆಗಳು ಮಾತ್ರವಲ್ಲದೇ ಎಲ್ಲೆಡೆಯಿಂದ ಜನ ಸಾಗರವೇ ಆಗಮಿಸುತ್ತದೆ.

 

 

 

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

3 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

3 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

3 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

3 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

3 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

3 days ago