Featured

ಇತಿಹಾಸ ಪ್ರಸಿದ್ಧ ಐಕಳಬಾವ ‘ಕಾಂತಾಬಾರೆ-ಬೂದಾಬಾರೆ’ ಕಂಬಳಕ್ಕೆ ಚಾಲನೆ -Vishwanews24

ಇತಿಹಾಸ ಪ್ರಸಿದ್ಧ ತುಳುನಾಡ ಕಾರಣಿಕ ಪುರುಷರಾದ ಐಕಳಬಾವ “ಕಾಂತಾಬಾರೆ-ಬೂದಾಬಾರೆ’ ಕಂಬಳಕ್ಕೆ ಚಾಲನೆ -Vishwanews24

ಮುಲ್ಕಿ: ವಿಶಿಷ್ಟ ಹಾಗೂ ವೈಭೋವೋಪೇತ ಧಾರ್ಮಿಕ ಹಿನ್ನಲೆಯುಳ್ಳ, ತುಳುನಾಡ ಕಾರಣಿಕ ಪುರುಷರಾದ ಐಕಳಬಾವ “ಕಾಂತಾಬಾರೆ-ಬೂದಾಬಾರೆ’ ನಾಮಾಂಕಿತ, ಇತಿಹಾಸ ಪ್ರಸಿದ್ಧ ಕಂಬಳಕ್ಕೆ ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಶ್ರೀಶ್ರೀಚಂದ್ರಶೇಖರ ಸ್ವಾಮೀಜಿ ಚಾಲನೆ ನೀಡಿರು.

ಕಂಬಳ ಎಂಬುದು ಕರಾವಳಿ ಮಣ್ಣಿನ ಅಭಿಮಾನದ ಪ್ರತೀಕವಾದ ಜಾನಪದ ಕ್ರೀಡೆ. ಕಂಬಳ ಸ್ಪರ್ಧೆ ನೆಲೆಯಲ್ಲಿ ಎತ್ತು, ಕೋಣಗಳ ಪೋಷಣೆ ಚೆನ್ನಾಗಿ ನಡೆದರೆ ಅದು ಕೃಷಿ ಉಳಿಕೆಗೂ ಪೂರಕವಾಗಲಿದೆ. ಆಧುನಿಕ ಬದುಕಿನಿಂದಾಗಿ ಕೃಷಿ ಕುಂಠಿತವಾಗಿದ್ದು ಕಂಬಳವೂ ನಿಂತರೆ ಕೃಷಿ ಮತ್ತಷ್ಟು ಅವನತಿಯ ವೇಗ ಪಡೆಯಲಿದೆ. ಕಂಬಳದ ಜತೆಗೆ ಕರಾವಳಿಗರಿಗೆ ಭಾವನಾತ್ಮಕ ಸಂಬಂಧವಿದ್ದು ಕ್ರಿಕೆಟ್‌ನಂತೆ ಜಾನಪದ ಕ್ರೀಡೆ ಕಂಬಳವನ್ನೂ ಸ್ಪರ್ಧಾ ಮನೋಭಾವದಿಂದಲೂ ನೋಡುತ್ತಾರೆ. ಶತಮಾನಗಳಿಂದ, ಪರಂಪರೆಯಿಂದ ಅಭಿಮಾನ ಹರಿದುಬಂದಿದೆ ಎಂದರು.

ತಾನು ಭಾರತೀಯನೆಂಬುದು ನನ್ನ ಅದೃಷ್ಟ , ತನಗಾಗಿ ಭಾರತ ರತ್ನ ಪ್ರಶಸ್ತಿಗೆ ಬೇಡಿಕೆ ಇಡುವುದನ್ನು ದಯವಿಟ್ಟು ನಿಲ್ಲಿಸಿ : ರತನ್‌ ಟಾಟಾ -Vishwanews24

ಕಂಬಳ ನಮ್ಮ ಕೃಷಿ ಮತ್ತು ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗ. ಕಂಬಳದಿಂದ ನಮ್ಮ ಸಂಸ್ಕೃತಿ ಉಳಿಯುವುದರ ಜತೆಗೆ ಪ್ರಾಣಿ ಪ್ರೀತಿಯೂ ಹೆಚ್ಚಾಗುತ್ತದೆ. ಕೋಣಗಳ ಬಗ್ಗೆ ಜನರಲ್ಲಿ, ಅದರಲ್ಲೂ ಮುಖ್ಯವಾಗಿ ಯುವ ಜನತೆಯಲ್ಲಿ ಪ್ರೀತಿ ಮೂಡಿಸುವ ಕೆಲಸವನ್ನು ಕಂಬಳ ಮಾಡುತ್ತದೆ. ಎಲ್ಲಾ ಆಚರಣೆಗಳನ್ನು ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಇಂಥ ಸಂಸ್ಕೃತಿ, ಪ್ರೀತಿ ಮೂಡಿಸುವ ಆಚರಣೆಗಳ ಅನಿವಾರ್ಯತೆ ಇದೆ ಎಂದು ಧಾರ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಶ್ರೀಶ್ರೀಚಂದ್ರಶೇಖರ ಸ್ವಾಮೀಜಿ ಹೇಳಿದರು.

ಮಂಗಳೂರು : ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ಮಂಗಳಮುಖಿ ಆಯ್ಕೆ -Vishwanews24

ಕಂಬಳ ಬರೀ ಕರಾವಳಿಗೆ ಸೀಮಿತವಾಗಬಾರದು. ನಮ್ಮ ಅಸ್ಮಿತೆ ಉಳಿವಿಗಾಗಿ ಪಣ ತೊಡಬೇಕು. ರಾಜ್ಯ ಪ್ರವಾಸೋದ್ಯಮ ನಕ್ಷೆಯಲ್ಲಿ ಕಂಬಳ ಕಂಗೊಳಿಸಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಭಾಷಣಕ್ಕೆ ಸೀಮಿತವಾಗಿಸದೆ ಅವುಗಳನ್ನು ಅನುಷ್ಠಾನ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಮಾಡುತ್ತಿದ್ದಾರೆ. ಇವರ ಕೆಲಸ ಶ್ಲಾಘನೀಯ ಎಂದರು.

SCDCC ಬ್ಯಾಂಕ್ ಮಂಗಳೂರು- ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಅಂಗಾರ ಎಸ್ ಗೆ ಅಭಿನಂದನಾ ಸಮಾರಂಭ.-vishwanews24

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಜೋಡಿ ಕೆರೆಗೆ ಪ್ರಸಾದ ಹಾಕುವ ಮೂಲಕ ಕಂಬಳಕ್ಕೆ ಚಾಲನೆ ನೀಡಿದರು. ಏಳಿಂಜೆ ದೇವಳದ ಅರ್ಚಕರಾದ ಗಣೇಶ್ ಭಟ್ ಮತ್ತು ವರುಣ್ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಐಕಳಬಾವ ದೇವಿಪ್ರಸಾದ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜೀ ಸಚಿವ ಅಭಯಚಂದ್ರ ಜೈನ್, ದ.ಕ. ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಹರಿಕೃಷ್ಣ ಪುನರೂರು ,ಭುವನಾಭಿರಾಮ ಉಡುಪ,ಶಾರದಮ್ಮ,ರಜನಿ ಚಂದ್ರಶೇಖರ ಭಟ್, ರೋಶನಿ ಭಟ್,ಅದಾನಿ ಫೌಂಡೇಶನ್ ಅಧ್ಯಕ್ಷ ಕಿಶೋರ್ ಆಳ್ವ,ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ದೆ, ಅವಿಭಾಜಿತ ದ.ಕ. ಹಾಗೂ ಉಡುಪಿ ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಮಧು ಆಚಾರ್ಯ ಕಂಬಳ ಸಮಿತಿಯ ಕಾರ್ಯದರ್ಶಿ ಚಿತ್ತರಂಜನ್ ಭಂಡಾರಿ, ಸಂಚಾಲಕ ಮುರಳೀಧರ ಶೆಟ್ಟಿ, ಕೃಷ್ಣ ಮಾರ್ಲ, ಯೋಗೀಶ್ ರಾವ್, ಶ್ರೀಶ ಐಕಳ,ತಾರಾನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಬಿಲ್ಲವ ಸಮಾಜ ಬಾಂಧವರಿಗೆ ನನ್ನಿಂದಾಗಿ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ : ಜಗದೀಶ್ ಅಧಿಕಾರಿ -Vishwanews24

ಇದೇ ಸಂದರ್ಭದಲ್ಲಿ ಸಾಧಕರ ನೆಲೆಯಲ್ಲಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ದಂಪತಿ, ಜಿಪಂ ಸದಸ್ಯ ವಿನೋದ್ ಬೊಳ್ಳೂರು, ಗೋಪಾಲಕೃಷ್ಣ ಪ್ರಭು ಖಂಡಿಗೆ, ದಯೇಶ್ ಐಕಳ, ದಿವಾಕರ ಚೌಟ ಐಕಳ, ಅನಿತಾ ಡಿಕೋಸ್ಟಾ ಮತ್ತಿತರರನ್ನು ಗೌರವಿಸಲಾಯಿತು. ಐಕಳಬಾವ ತಶ್ಮಿ ಹರ್ಷಿತ್ ಶೆಟ್ಟಿಯವರ ಕಂಬಳ ಪೈಂಟಿಂಗ್ ಕಲಾಕೃತಿಯನ್ನು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಬಿಡುಗಡೆಗೊಳಿಸಿದರು. ಕಂಬಳ ಸಮಿತಿಯ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು ಇನ್ನೂರಕ್ಕೂ ಮಿಕ್ಕಿ ಕೋಣಗಳು ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಂಬಳ ಸಮಿತಿಯ ಸಂಚಾಲಕರ ಪ್ರಕಟಣೆ ತಿಳಿಸಿದೆ

Vishwa News 24

Recent Posts

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕಿವೀಸ್ ಲೆಜೆಂಡ್ ಕೇನ್ ವಿಲಿಯಮ್ಸನ್ -vishwanews24

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕಿವೀಸ್ ಲೆಜೆಂಡ್ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್‌ನ ಮಾಜಿ ನಾಯಕ ಕೇನ್ ವಿಲಿಯಮ್ಸನ್  ಅಂತರರಾಷ್ಟ್ರೀಯ ಕ್ರಿಕೆಟ್‌ಗೆ…

8 hours ago

ಕೊಲ್ಲೂರು ಮೂಕಾಂಬಿಕೆಗೆ 1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ ವಿಜಯ್‌ – vishwanews24

ಕೊಲ್ಲೂರು ಮೂಕಾಂಬಿಕೆಗೆ 1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ ವಿಜಯ್‌ ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ…

8 hours ago

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ : ಸಿದ್ದರಾಮಯ್ಯ ಸ್ಪಷ್ಟನೆ – vishwanews24

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ : ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರು: ಕರ್ನಾಟಕದ ಹಿಂದುಳಿದ ವರ್ಗಗಳ ಇಲಾಖೆಯಿಂದ ಅನುದಾನ…

8 hours ago

ಧರ್ಮಸ್ಥಳ ವಿಚಾರದಲ್ಲಿ ಸನ್ನಿಧಿಗೆ ಕಳಂಕ ತರುವ ಬಹಳ ದೊಡ್ಡ ಷಡ್ಯಂತ್ರ : ವಿಜಯೇಂದ್ರ ಆರೋಪ – vishwanews24

ಧರ್ಮಸ್ಥಳ ವಿಚಾರದಲ್ಲಿ ಸನ್ನಿಧಿಗೆ ಕಳಂಕ ತರುವ ಬಹಳ ದೊಡ್ಡ ಷಡ್ಯಂತ್ರ : ವಿಜಯೇಂದ್ರ ಆರೋಪ ಬೆಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸ್ವಾಮಿಯ…

8 hours ago

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ ತಮಿಳುನಾಡು ಸಿಎಂ ವಿಜಯ್  – vishwanews24

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ ವಿಜಯ್  ಕೊಲ್ಲೂರು : ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಇಂದು ಕೊಲ್ಲೂರು ಶ್ರೀ…

9 hours ago

ಛಾಯಾಗ್ರಾಹಕ ಅನೀಶ್ ಕಾಪು ಅವರಿಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪ್ರಧಾನ – vishwanews24

ಛಾಯಾಗ್ರಾಹಕ ಅನೀಶ್ ಕಾಪು ಅವರಿಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪ್ರಧಾನ ಸನ್ನಿಧಿ ಸ್ಟುಡಿಯೋ ಶ್ರೀಯುತ ಅನೀಶ್ ಕಾಪು ಇವರು ಫೋಟೋಗ್ರಫಿ…

10 hours ago