Featured

ಇತಿಹಾಸ ಪ್ರಸಿದ್ಧ ತುಳುನಾಡ ಕಾರಣಿಕ ಶಕ್ತಿ ಹಿರ್ಗಾನ ತುಂಬೆಹಿತ್ಲು ನಾಗಬ್ರಹ್ಮಲಿಂಗೇಶ್ವರ ರಕ್ತೇಶ್ವರಿ ಪರಿವಾರ ದೈವಗಳ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ.

ಇತಿಹಾಸ ಪ್ರಸಿದ್ಧ ತುಳುನಾಡ ಕಾರಣಿಕ ಶಕ್ತಿ ಹಿರ್ಗಾನ ತುಂಬೆಹಿತ್ಲು ನಾಗಬ್ರಹ್ಮಲಿಂಗೇಶ್ವರ ರಕ್ತೇಶ್ವರಿ ಪರಿವಾರ ದೈವಗಳ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ.

ಕಾರ್ಕಳ: ನ್ಯಾಯ, ನೀತಿ, ಧರ್ಮ, ಆಚರಣೆಗಳು ಇಂದಿಗೂ ಜೀವಂತವಾಗಿಯೇ ಉಳಿದಿರುವುದು ತುಳುನಾಡಿನ ಕಾರಣಿಕ ಶಕ್ತಿಗಳ ಕ್ಷೇತ್ರಗಳಲ್ಲಿ , ಅಂತಹ ಜಾಗದಲ್ಲಿ ಸುಳ್ಳು ಸತ್ಯವಾಗದು, ಸತ್ಯ ಸುಳ್ಳಾಗದು, ಧರ್ಮ ಭಕ್ತಿಯಿಂದ ಬಂದವರನ್ನ ಸಲುಹಿದ ಶಕ್ತಿಗಳು ನಮ್ಮ ತುಳುನಾಡಿನಲ್ಲಿದೆ ಅಂತಹದೇ ಒಂದು ಕ್ಷೇತ್ರದ ಪರಿಚಯ ಇಲ್ಲಿದೆ.

ತುಳುನಾಡಿನಲ್ಲಿ ಹಲವಾರು ಕಾರಣಿಕ ಶಕ್ತಿಗಳ ಸನ್ನಿಧಾನದಲ್ಲಿ ಕಾರ್ಕಳ ತಾಲೂಕಿನ ಹಿರ್ಗಾನ ತುಂಬೆಹಿತ್ಲುವಿನ ರಕ್ತೇಶ್ವರಿ ಹಾಗೂ ಪರಿವಾರ ದೈವಗಳು.ಈ ಕ್ಷೇತ್ರದಲ್ಲಿ ಇದೇ ಬರುವ ತಾರೀಕು ಮಾರ್ಚ್ ೨೧ ಮತ್ತು ೨೨ ರಂದು ಬ್ರಹ್ಮಕಲಶೋತ್ಸವ ಮತ್ತು ೨೬ ನೇ ವರ್ಷದ ವರ್ಧತ್ಯುತ್ಸವ ಹಾಗೂ ನೇಮೊತ್ಸವ ಸತ್ಯನಾರಾಯಣ ಪೂಜೆ ಕಾರ್ಯಕ್ರಮವು ನಡೆಯಲಿದೆ.

ಐತಿಹಾಸಿಕದ ಕಥೆಗಳಿರುವ ಶ್ರೀ ಕ್ಷೇತ್ರಗಳಲ್ಲಿ ಒಂದಾದ ಕಾರ್ಕಳ ತಾಲೂಕಿನ ಹಿರ್ಗಾನ ತುಂಬೆಹಿತ್ಲುವಿನ ರಕ್ತೇಶ್ವರಿ ದೈವಸ್ಥಾನವು ನಮಗೆ ಕಾಣ ಸಿಗುತ್ತದೆ. ಸನ್ನಿಧಾನದ ಹತ್ತಿರಲ್ಲಿರುವ ಕೆರೆಯ ವಿಶಾಲವಾದ ನೀರಿನಲ್ಲಿ ದೇವಸ್ಥಾನದ ಉತ್ಸವ ಸಮಯದಲ್ಲಿ ಗ್ರಾಮ ದೇವರಾದ ಕುಕ್ಕೂಂದೂರು ದುರ್ಗಾ ಪರಮೇಶ್ವರಿ ದೇವರು ಜಳಕಕ್ಕೆ ಹೋಗುವಂತಹ ಪವಿತ್ರವಾದ ತಾಣವಿದು.

ಸುಳಿ ರೂಪದ ರಕ್ತೇಶ್ವರಿ ಗುಂಡಿ ಮತ್ತು ೧೬ ಕೋಲು ಅಳತೆ ಇರುವ ರಕ್ತೇಶ್ವರಿ ಕಲ್ಲು

ಶ್ರೀ ಕ್ಷೇತ್ರದ ಹತ್ತಿದಲ್ಲಿರುವ ಮಹಾಸುವರ್ಣ ನದಿಯಲ್ಲಿ ನೀರಿನ ಸುಳಿಯ ರೂಪದಲ್ಲಿ ಕಾಣ ಸಿಗುವ ರಕ್ತೇಶ್ವರಿ ಗುಂಡಿಯು ಅತ್ಯಂತ ಕಾರಣಿಕ ಹಾಗೂ ಪಾವಿತ್ರ್ಯತೆಯ ಜಾಗವಿದು.ಆದರೆ ಈ ಜಾಗಕ್ಕೆ ಯಾರು ಇಳಿಯುವಂತಿಲ್ಲ . ಕಾರ್ಕಳ ತಾಲೂಕಿನ ಎಲ್ಲಿಯೂ ಕಾಣ ಸಿಗದ ಏಕೈಕ ೧೬ ಕೋಲು ಅಳತೆ ಇರುವ ರಕ್ತೇಶ್ವರಿ ಕಲ್ಲು ನೋಡುಗರನ್ನ ದಿಗ್ಭ್ರಮೆಗೊಳಿಸುವುದರಲ್ಲಿ ಅಚ್ಚರಿಯಿಲ್ಲ.

ತೊಟ್ಟಿಲ ಭಾಗ್ಯ ಕರುಣಿಸಿದ ಶಕ್ತಿಗಳು.

ವೈದ್ಯಲೋಕಕ್ಕೆ ಸವಾಲಾಗಿರುವ ಹಲವಾರು ಘಟನೆಗಳು ಈ ಕ್ಷೇತ್ರದ ಶಕ್ತಿಗಳ ಕೃಪಾಕಟಾಕ್ಷದಿಂದ ಯಶಸ್ಸಾಗಿರುವ ಅದೇಷ್ಟೊ ಉದಾಹರಣೆಗಳು ಇಲ್ಲಿ ಕಾಣ ಸಿಗುತ್ತದೆ. ಮದುವೆಯಾದ ದಂಪತಿಗಳಿಗೆ ತೊಟ್ಟಿಲು ತೂಗುವ ಯೋಗ ವೈದ್ಯರು ಇಲ್ಲ ಅಂದ್ರು ಕೇವಲ ಒಂದು ಎಲೆ ಗಂಧ ಪ್ರಸಾದ ನೀಡಿ ಅಭಯ ವಾಕ್ಯದಿಂದ ಮಗುವಿನ ಭಾಗ್ಯ ಕರುಣಿಸಿದ ಶಕ್ತಿಗಳು. ವ್ಯವಹಾರಿಕ ಕ್ಷೇತ್ರದಲ್ಲಿಯೂ ಉನ್ನತಿಯ ಕಾರಣಿಕ ತೋರಿಸಿದ ಹಿರ್ಗಾನ ತುಂಬೆಹಿತ್ಲುವಿನ ರಕ್ತೇಶ್ವರಿ ಕ್ಷೇತ್ರ.

ವರದಿ: ಪುರುಷೋತ್ತಮ ಸಾಲ್ಯಾನ್ 9343846360

 

 

 

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

6 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

6 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

6 hours ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

6 hours ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

7 hours ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

7 hours ago